ಸಾರಾಂಶ
ರಾಮನಗರ: ಗಿಫ್ಟ್ ಡೀಡ್ ನೋಂದಣಿ ಮಾಡಲು ಲಂಚ ಪಡೆಯುತ್ತಿದ್ದ ಜಿಲ್ಲಾ ನೋಂದಣಾಧಿಕಾರಿ ಹಾಗೂ ಹೊರ ಗುತ್ತಿಗೆ ನೌಕರ ಮಂಗಳವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ರಾಮನಗರ: ಗಿಫ್ಟ್ ಡೀಡ್ ನೋಂದಣಿ ಮಾಡಲು ಲಂಚ ಪಡೆಯುತ್ತಿದ್ದ ಜಿಲ್ಲಾ ನೋಂದಣಾಧಿಕಾರಿ ಹಾಗೂ ಹೊರ ಗುತ್ತಿಗೆ ನೌಕರ ಮಂಗಳವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಜಿಲ್ಲಾ ನೋಂದಣಾಧಿಕಾರಿ ಶ್ರೀದೇವಿ ಹಾಗೂ ಹೊರಗುತ್ತಿಗೆ ನೌಕರ ಕಿರಣ್ ರೆಡ್ ಹ್ಯಾಂಡ್ ಆಗಿ ಲಂಚ ಸ್ವೀಕರಿಸುವ ವೇಳೆ ಸಿಕ್ಕಬಿದ್ದವರು. ನೋಂದಣಾಧಿಕಾರಿ ಕಚೇರಿಯಲ್ಲಿಯೇ ಗಿಫ್ಟ್ ಡೀಡ್ ನೋಂದಣಿ ಮಾಡಲು ಸುಮಂತ್ ಗೌಡ ಎಂಬುವರಿಗೆ ಲಂಚಕ್ಕೆ ಬೇಡಿಕೆ ಇಟ್ಟು 33,500 ರು. ಕಚೇರಿಯ ಹೊರಗುತ್ತಿಗೆ ನೌಕರ ಕಿರಣ್ ಮೂಲಕ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ರಾಮನಗರ ಲೋಕಾಯುಕ್ತ ಡಿವೈಎಸ್ಪಿ ಸುಧೀರ್, ಇನ್ಸ್ ಪೆಕ್ಟರ್ ಅನಂತ್ ರಾಮು ನೇತೃತ್ವದಲ್ಲಿ ದಾಳಿ ನಡೆದಿದೆ.