ರಾಮನಗರ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕೊಡ ಮಾಡುವ ರಾಜ್ಯಮಟ್ಟದ ಎಚ್.ಎನ್.ಪ್ರಶಸ್ತಿಗೆ ಪ್ರಾಧ್ಯಾಪಕ, ಸಾಹಿತಿ ಡಾ.ಅಂಕನಹಳ್ಳಿ ಪಾರ್ಥ ಮತ್ತು ಶಿಕ್ಷಕಿ ಕವಿಯತ್ರಿ ಶೈಲಜ ಶ್ರೀನಿವಾಸ್ ಭಾಜನರಾಗಿದ್ದಾರೆ.
ರಾಮನಗರ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕೊಡ ಮಾಡುವ ರಾಜ್ಯಮಟ್ಟದ ಎಚ್.ಎನ್.ಪ್ರಶಸ್ತಿಗೆ ಪ್ರಾಧ್ಯಾಪಕ, ಸಾಹಿತಿ ಡಾ.ಅಂಕನಹಳ್ಳಿ ಪಾರ್ಥ ಮತ್ತು ಶಿಕ್ಷಕಿ ಕವಿಯತ್ರಿ ಶೈಲಜ ಶ್ರೀನಿವಾಸ್ ಭಾಜನರಾಗಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಡಿ.29,30ರಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ 5ನೇ ವರ್ಷದ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಎಸ್.ರೇಣುಕಾ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಾ.ಹುಲಿಕಲ್ ನಟರಾಜ್ ಕನಸಿನ ಕೂಸಾದ ಈ ವೈಜ್ಞಾನಿಕ ಸಂಶೋಧನಾ ಪರಿಷತ್ ಮೌಢ್ಯತೆ ವಿರುದ್ಧ ದೇಶಾದ್ಯಂತ ವಿಜ್ಞಾನ ಮತ್ತು ವೈಚಾರಿಕ ಅರಿವು ಮೂಡಿಸುತ್ತಾ, ಮನೋವಿಜ್ಞಾನ ಕುರಿತು ಉಪನ್ಯಾಸ ನೀಡುತ್ತಾ ಲಕ್ಷಾಂತರ ಜನರಿಗೆ ಮೌಢ್ಯತೆಯ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ವೈಜ್ಞಾನಿಕ ಸಮ್ಮೇಳನ ಯಾದಗಿರಿಯಲ್ಲಿ 2 ದಿನಗಳ ಕಾಲ ನಡೆಯಲಿದ್ದು ಅಲ್ಲಿ ವಿಜ್ಞಾನದ ಆವಿಷ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಮ್ಮೇಳನದಲ್ಲಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಪರಿಷತ್ತಿನಿಂದ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ಶಾಲಾ ಕಾಲೇಜಿಗಳಲ್ಲಿ ಪ್ರತಿ ತಿಂಗಳು ಅನೇಕ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ. ದೊಡ್ಡಬಳ್ಳಾಪುರದಲ್ಲಿ ನಡೆದ ವಿಜ್ಞಾನ ಶಿಬಿರದಲ್ಲಿ 160ಕ್ಕೂ ಹೆಚ್ಚು ವಿದ್ಯಾರ್ಥಿಗಳು ಟೆಲಿಸ್ಕೂಪ್ ತಯಾರಿಸಿ ಏಷ್ಯಬುಕ್ ಆಫ್ ರೇಕಾರ್ಡ್, ಇಂಡಿಯಾ ಬುಕ್ ಆಫ್ ರೇಕಾರ್ಡ್, ವರ್ಡ್ ಬುಕ್ ಆಫ್ ರೇಕಾರ್ಡ್ ಅನ್ನು ಸಂಸ್ಥೆಯಿಂದ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ ಎಂದು ರೇಣುಕಾ ಪ್ರಸಾದ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಧ್ಯಾಪಕ ಡಾ.ಅಂಕನಹಳ್ಳಿ ಪಾರ್ಥ, ಕವಿಯತ್ರಿ ಶೈಲಜ ಶ್ರೀನಿವಾಸ್ ಇದ್ದರು.16ಕೆಆರ್ ಎಂಎನ್ 9.ಜೆಪಿಜಿ
ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷ ರೇಣುಕಾ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.