ಕುರುಬ ಸಮಾಜ ಎಸ್‌ಟಿಗೆ ಸೇರಿಸದಂತೆ ಜಿಲ್ಲಾ ವಾಲ್ಮೀಕಿ ನಾಯಕ ಸೇವಾ ಸಂಘದಿಂದ ಮನವಿ

| Published : Sep 23 2025, 01:04 AM IST

ಕುರುಬ ಸಮಾಜ ಎಸ್‌ಟಿಗೆ ಸೇರಿಸದಂತೆ ಜಿಲ್ಲಾ ವಾಲ್ಮೀಕಿ ನಾಯಕ ಸೇವಾ ಸಂಘದಿಂದ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶಿಷ್ಟ ಪಂಗಡ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಔದ್ಯೋಗಿಕವಾಗಿ ಹಿಂದುಳಿದಿದೆ. ಆದರೆ, ಕುರುಬ ಸಮುದಾಯ ಎಲ್ಲ ಕ್ಷೇತ್ರಗಳಲ್ಲೂ ಸದೃಢವಾಗಿದೆ. ಹೀಗಿರುವಾಗ ಸದೃಢ ಸಮುದಾಯವನ್ನು ಹಿಂದುಳಿದ ಎಸ್‌ಟಿ ಪಟ್ಟಿಗೆ ಸೇರಿಸುವುದು ಸಂವಿಧಾನ ವಿರೋಧವಾಗಿದೆ.

ಗದಗ: ಕುರುಬ ಸಮುದಾಯವನ್ನು ಯಾವುದೇ ಕಾರಣಕ್ಕೂ ಪರಿಶಿಷ್ಟ ಪಂಗಡ(ಎಸ್‌ಟಿ)ಕ್ಕೆ ಸೇರಿಸಬಾರದು ಎಂದು ಆಗ್ರಹಿಸಿ ಜಿಲ್ಲಾ ವಾಲ್ಮೀಕಿ ನಾಯಕ ಸೇವಾ ಸಂಘ ಹಾಗೂ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಯುವ ಘಟಕದಿಂದ ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪರಿಶಿಷ್ಟ ಪಂಗಡ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಔದ್ಯೋಗಿಕವಾಗಿ ಹಿಂದುಳಿದಿದೆ. ಆದರೆ, ಕುರುಬ ಸಮುದಾಯ ಎಲ್ಲ ಕ್ಷೇತ್ರಗಳಲ್ಲೂ ಸದೃಢವಾಗಿದೆ. ಹೀಗಿರುವಾಗ ಸದೃಢ ಸಮುದಾಯವನ್ನು ಹಿಂದುಳಿದ ಎಸ್‌ಟಿ ಪಟ್ಟಿಗೆ ಸೇರಿಸುವುದು ಸಂವಿಧಾನ ವಿರೋಧವಾಗಿದೆ.

ಹೀಗಾಗಿ ಯಾವುದೇ ಕಾರಣಕ್ಕೂ ಅನ್ಯ ಸಮುದಾಯಗಳನ್ನು ಎಸ್‌ಟಿಗೆ ಸೇರಿಸಬಾರದು. ಅಲ್ಲದೇ ರಾಜ್ಯ ಸರ್ಕಾರದಿಂದ ಎಸ್‌ಟಿ ಸಮುದಾಯಕ್ಕೆ ಸಮರ್ಪಕವಾಗಿ ಸೌಲಭ್ಯಗಳು ದೊರೆಯುತ್ತಿಲ್ಲ ಮತ್ತು ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರದಿಂದ ನಮ್ಮ ಸಮುದಾಯ ಇನ್ನಷ್ಟು ಕುಗ್ಗಿ ಹೋಗಿದೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ಯ ಸಮುದಾಯಗಳನ್ನು ಎಸ್‌ಟಿಗೆ ಸೇರಿಸುವುದು ಸರಿಯಲ್ಲ. ಈ ನಿರ್ಧಾರ ಕೈ ಬಿಡಬೇಕು. ಇಲ್ಲವಾದಲ್ಲಿ‌ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲಾ ವಾಲ್ಮೀಕಿ ನಾಯಕ ಸೇವಾ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಮೈಲಾರಪ್ಪ ಬೆಳಧಡಿ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಯುವ ಘಟಕದ ಜಿಲ್ಲಾಧ್ಯಕ್ಷ ಅನಿಲಕುಮಾರ ಸಿದ್ದಮ್ಮನಹಳ್ಳಿ, ಗೋವಿಂದರಾಜ ಪನ್ನೂರು, ರೋಣ ತಾಲೂಕು ಅಧ್ಯಕ್ಷ ಬಸವರಾಜ ತಳವಾರ, ಲಕ್ಷ್ಮೇಶ್ವರ ಅಧ್ಯಕ್ಷ ಭೀಮಪ್ಪ ಯಂಗಾಡಿ. ವಸಂತ ಸಿದ್ದಮ್ಮನಹಳ್ಳಿ, ವಸಂತ ವಾಲ್ಮೀಕಿ, ಶ್ರೀಕಾಂತ ಪೂಜಾರ, ಸೋಮು ಕೊರ್ಲವಾಡ, ಈಶ್ವರ ರೌಡೂರ, ಮಂಜುನಾಥ ವಾಲ್ಮೀಕಿ, ಗಿರೀಶ ಮುಕ್ಕಣ್ಣವರ, ಕಿರಣ ನಾಯ್ಕರ, ರಾಮು ಬಾಗಲಕೋಟಿ, ಮಾರುತಿ ಕಾತರಕಿ, ಜಿಲ್ಲೆಯ ಎಲ್ಲ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.ದಲಿತ ಸಮುದಾಯ ಒಡೆಯುವ ಹುನ್ನಾರ

ಗದಗ: ಒಂದು ನಿಗದಿತ ಧರ್ಮ ಬೆಳೆಸುವ ಉದ್ದೇಶ ಸರ್ಕಾರಕ್ಕೆ ಇದೆಯೇ? ಈ ಸಮೀಕ್ಷೆಯಲ್ಲಿ ಆದಿ ಆಂಧ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿದ್ರಾವಿಡ ಕ್ರಿಶ್ಚಿಯನ್ ಸೇರಿ ಹತ್ತಾರು ಜಾತಿಗಳನ್ನು ಸೇರಿಸಲು ನಿಮಗೆ ಯಾರು ಪ್ರೇರೇಪಣೆ ಕೊಟ್ಟಿದ್ದಾರೆ ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಪ್ರಶ್ನಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಲಿತ ಜಾತಿಗಳ ಕ್ರಿಶ್ಚಿಯನ್ ಹೆಸರು ಇರುವ ಹೊಸ ಜಾತಿಗಳನ್ನೇಕೆ ಉಳಿಸಿಕೊಂಡಿದ್ದೀರಿ. ದಲಿತರನ್ನು ಕ್ರಿಶ್ಚಿಯನ್ ಮಾಡುವ ಉದ್ದೇಶವೇ? ಒಂದು ಧರ್ಮವನ್ನು ಬೆಳೆಸುವ ಉದ್ದೇಶ ಸರ್ಕಾರಕ್ಕೆ ಇದೆಯಾ? ಜನ ಕ್ರಿಶ್ಚಿಯನ್ ಮತಾಂತರದ ವಿರುದ್ಧ ಬೀದಿಗೆ ಇಳಿದಿದ್ದಾರೆ ಎಂದರು.

ದಲಿತ ಸಂಬಧಪಟ್ಟ ಜಾತಿಗಳಿಗೆ ಕ್ರಿಶ್ಚಿಯನ್ ಪಟ್ಟ ಕಟ್ಟಿ ದಲಿತ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

15 ದಿನಗಳಲ್ಲಿ ಸಮೀಕ್ಷೆ ಸಾಧ್ಯವೇ?: 15 ದಿನಗಳಲ್ಲಿ ಸುಮಾರು 7 ಕೋಟಿ ಜನರ ಸಮೀಕ್ಷೆ ಮುಗಿಸುವುದಾಗಿ ಹೇಳಿದ್ದಾರೆ. ಪರಿಶಿಷ್ಟ ಜಾತಿಗಳದು ನೀವೇ ಹೇಳಿದಂತೆ 1.07 ಕೋಟಿ ಜನಸಂಖ್ಯೆ. ಇಷ್ಟು ಜನಸಂಖ್ಯೆಯ ಸಮೀಕ್ಷೆಗೆ 3- 4 ಸಾರಿ ಮುಂದೂಡಿ ಎರಡು ರಿಂದ ಎರಡೂವರೆ ತಿಂಗಳ ಕಾಲ ಸಮೀಕ್ಷೆ ಮಾಡಿದ್ದೀರಿ ಎಂದರು.

ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮುಳಗುಂದ ಮಾತನಾಡಿ, ಎಸ್ಸಿ, ಎಸ್ಟಿ ಜಾತಿ ಜನಗಣತಿಗೆ ಎಸ್ಸಿಪಿ, ಟಿಎಸ್ಪಿ ₹150 ಕೋಟಿ ಹಣವನ್ನು ಬಳಕೆಯಾಗಿದೆ. ಈಗ ಮತ್ತೆ ಜಾತಿಗಣತಿ ಮಾಡುವ ಮೂಲಕ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಾರೆ ಎಂದರು. ‌ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಎಂ.ಎಸ್. ಕರಿಗೌಡ್ರ, ಲಿಂಗರಾಜ ಪಾಟೀಲ, ಉಷಾ ದಾಸರ, ಶ್ರೀಕಾಂತ ದೊಡ್ಡಮನಿ, ಸುರೇಶ ಚಲವಾದಿ, ಉಡಚಪ್ಪ ಹಳ್ಳಿಕೇರಿ, ಅಶೋಕ ಕುಡತಿನಿ ಸೇರಿದಂತೆ ಇತರರು ಇದ್ದರು.