ಸಾರಾಂಶ
ಬೆಳಗಾವಿ:ಮಾರುಕಟ್ಟೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬಯೋ ಸಿಎನ್‌ಜಿ ಘಟಕ ಸ್ಥಾಪನೆ, ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿವಿಯನ್ನು 500 ಕೋಟಿ ವೆಚ್ಚದಲ್ಲಿ ಐಐಟಿ ಮಾದರಿಯಲ್ಲಿ ಅಭಿವೃದ್ಧಿ, ಸಂಚಾರ ದಟ್ಟಣೆ ನಿವಾರಿಸಲು 450 ಕೋಟಿ ವೆಚ್ಚದಲ್ಲಿ 4.50 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣ, ಗೋಕಾಕ್ ಜಲಪಾತ ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ, ಸೌದತ್ತಿಯ ಯಲ್ಲಮ್ಮ ದೇವಿ ದೇವಸ್ಥಾನ ಸುತ್ತಲಿನ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಅಧಿಸೂಚನೆ. ಮಹಾತ್ಮ ಗಾಂಧಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಅಧಿವೇಶನದಕ್ಕೆ ಶತಮಾನದ ಹಿನ್ಲೆಲೆಯಲ್ಲಿ 2 ಕೋಟಿ ವೆಚ್ಚದಲ್ಲಿ ವಿಶೇಷ ಕಾರ್ಯಕ್ರಮ,ನೋಂದಣಿ ಆಗುವ ಎಲ್ಲ ವಾಹನಗಳ ದಾಖಲೆ ಡಿಜಿಟಲೀಕರಣ ಪ್ರಾಯೋಗಿಕ ಜಾರಿ, ಅಥಣಿ-ಕೊಟ್ಟಲಗಿ-ಅಮ್ಮಾಜೇಶ್ವರ, ಶ್ರೀಚನ್ನವೃಷಭೇಂದ್ರ, ಮಹಾಲಕ್ಷ್ಮಿ, ಸತ್ತಿಗೇರಿ, ಮಾರ್ಕಾಂಡೇಯ, ಬೈಲಹೊಂಗಲ ವಿಧಾನಸಭಾ ಕ್ಷೇತ್ರಗಳ ಹಳೆಯ ಏತನಿರಾವರಿ ಯೋಜನೆಗಳ ಪುನಶ್ಚೇತನ.
ಕಲಬುರಗಿ:ಆಳಂದ ಕೆರೆ ತುಂಬಿಸುವ ಯೋಜನೆ ಈ ಸಾಲಿನಲ್ಲೇ ಅನುಷ್ಠಾನ, ಬೆಣ್ಣೆತೊರಾ ಡ್ಯಾಂಗೆ ಭೀಮಾ ಮತ್ತು ಕಾಗಿಣಾ ನದಿಗಳಿಂದ ನೀರು ತುಂಬಿಸುವ 365 ಕೋಟಿ ವೆಚ್ಚದ ಯೋಜನೆ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನ. ಚಿತ್ತಾಪುರ ತಾಲೂಕಿನ ಕೆರೆ ತುಂಬಿಸುವ ಯೋಜನೆ ಜಾರಿ,ಜೇವರ್ಗಿ ತಾಲೂಕಿನಲ್ಲಿ ಬಾಂದಾರು, ಕೆರೆ ತುಂಬಿಸುವ ಕಾಮಗಾರಿ. ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಲ್ಲಿ ವಿವಿಗಳ ಘಟಕ ಕಾಲೇಜು ಸ್ಥಾಪನೆ. ನಿರ್ಮಾಣ ಆಗುತ್ತಿರುವ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗೆ ₹50 ಕೋಟಿ ಅನುದಾನ. ಕೌಶಲ್ಯ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆ,ಬಸವಣ್ಣ, ಇತರ ಶರಣರ ವಚನ ಸಂಗ್ರಹಾಲಯ/ ವಚನ ಮಂಟಪ ಸ್ಥಾಪನೆ. ಕಲಬುರಗಿ ವಿವಿಯಲ್ಲಿ ಸೂಫಿ ಸಂತರ ಅಧ್ಯಯನ ಪೀಠ. ರಾಷ್ಟ್ರಕೂಟರ ಕಾಲದ ರಾಜ್ಯ ಮೊದಲ ವಿವಿ ಸ್ಥಳ ಆಗಿದ್ದ ಚಿತ್ತಾಪೂರ ತಾಲೂಕಿನ ನಾಗಾವಿಯ ಸಂಶೋಧನೆಗೆ ಶಿಫಾರಸು,ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಸ್ಥಾಪನೆ. ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ಘಟಕವನ್ನು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ತಾಂತ್ರಿಕ ನೆರವಿನೊಂದಿಗೆ ಸ್ಥಾಪನೆ.ವಿಟಿಯು ಸಹಯೋಗದಲ್ಲಿ ಜಿಟಿಟಿಸಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ,
ಬೀದರ್: ಔರಾದ್ ಕೆರೆ ತುಂಬಿಸುವ ಯೋಜನೆ ಈ ಸಾಲಿನಲ್ಲೇ ಅನುಷ್ಠಾನ,ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಲ್ಲಿ ವಿವಿಗಳ ಘಟಕ ಕಾಲೇಜು ಸ್ಥಾಪನೆ,ಬೀದರ್-ಬೆಂಗಳೂರು ನಡುವೆ ಆರ್ಥಿಕ ಕಾರಿಡಾರ್ ನಿರ್ಮಾಣ,ಕರೇಜ್ ಪುರಾತನ ನೀರು ಸರಬರಾಜು ವ್ಯವಸ್ಥೆಯ ಪುನಶ್ಚೇತನ,ಹೊನ್ನಿಕೇರಿ ಮೀಸಲು ಅರಣ್ಯದಲ್ಲಿ ಪ್ರವಾಸೋದ್ಯಮಕ್ಕೆ 15 ಕೋಟಿ ಅನುದಾನ ಹೊಸ ಜಿಲ್ಲಾಧಿಕಾರಿ ಕಚೇರಿ,ಬಾಲ್ಕಿಯಲ್ಲಿ ನೋಂದಣಿ ಆಗುವ ಎಲ್ಲ ವಾಹನಗಳ ದಾಖಲೆ ಡಿಜಿಟಲೀಕರಣ ಪ್ರಾಯೋಗಿಕ ಜಾರಿ,ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ,ಶ್ರೀ ನಾನಕ್ ಝೇರಾ ಸಾಹೇಬ ಗುರುದ್ವಾರ ಅಭಿವೃದ್ಧಿಗಾಗಿ ₹1 ಕೋಟಿ ಅನುದಾನ
ವಿಜಯಪುರ: ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆ,ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತು ಉತ್ತೇಜನಕ್ಕೆ ಇಟ್ಟಂಗಿಹಾಳ ವಿಮಾನ ನಿಲ್ದಾಣ ಸಮೀಪ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಆಹಾರ ಪಾರ್ಕ್ ಸ್ಥಾಪನೆ,ಆಲಮಟ್ಟಯಲ್ಲಿ ಒಳನಾಡು ಮೀನುಗಾರಿಕಾ ಕೌಶಲ್ಯಾಭಿವೃದ್ಧಿ ಕೇಂದ್ರ,ಬಸವನವಾಗೇವಾಡಿ ಎಪಿಎಂಸಿಯಲ್ಲಿ ಶೀತಲಗೃಹ ನಿರ್ಮಾಣ. ಹೊರ್ತಿ-ರೇವಣಸಿದ್ದೇಶ್ವರ, ಚಿಮ್ಮಲಗಿ, ಮುಳವಾಡ ಏತನೀರಾವರಿ ಯೋಜನೆ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನ,ಬಸವನಬಾಗೇವಾಡಿ ಅಭಿವೃದ್ಧಿಗೆ ಪ್ರಾಧಿಕಾರ.ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ಅಧ್ಯಯನ ಪೀಠ,ಸೈಕ್ಲಿಂಗ್ ಅಕಾಡೆಮಿಗೆ ನೆರವು,ಕರೇಜ್ ಹೆಸರಿನ ಪುರಾತನ ನೀರಾವರಿ ವ್ಯವಸ್ಥೆಯ ಪುನಶ್ಚೇತನ. ಹೊಸ ಜಿಲ್ಲಾಧಿಕಾರಿ ಕಚೇರಿ,₹350 ಕೋಟಿ ವೆಚ್ಚದಲ್ಲಿ ವಿಮಾಣ ನಿಲ್ದಾಣ ಕಾಮಗಾರಿ ಮುಕ್ತಾಯ ಹಂತಕ್ಕೆ, ಶೀಘ್ರವೇ ಕಾರ್ಯಾರಂಭ,ವಿಜ್ಞಾನ ಕೇಂದ್ರ/ತಾರಾಲಯ ಕಾರ್ಯಾರಂಭ, ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ
ಬಳ್ಳಾರಿ: ಮಾರುಕಟ್ಟೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬಯೋ ಸಿಎನ್‌ಜಿ ಘಟಕ ಸ್ಥಾಪನೆ,ಎಪಿಎಂಸಿಯಲ್ಲಿ ಶೀತಲಗೃಹ ನಿರ್ಮಾಣ,ಜೀನ್ಸ್ ಅಪಾರೆಲ್ ಪಾರ್ಕ್ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರ ಅಭಿವೃದ್ಧಿ,ಕ್ರೀಡಾ ವಸತಿ ಉನ್ನತೀರಕಣ, ಕ್ರೀಡಾ ಸೌಕರ್ಯ ಅಭಿವೃದ್ಧಿಗೆ ₹10 ಕೋಟಿ,ಹ್ಯೂಮನ್ ಮಿಲ್ಕ್ ಬ್ಯಾಂಕ್ ಸ್ಥಾಪನೆ, ಸುಂಡೂರಿನಲ್ಲಿ ಸಿಲ್ಕ್ ಅಕಾಡೆಮಿ ಸ್ಥಾಪನೆ, ಜಿಲ್ಲಾ ಝನಿಜನಿಧಿಯ ಮೂಲಕ ಜಿಟಿಟಿಸಿ ಕೇಂದ್ರ ಸ್ಥಾಪನೆ, ಇಂಟಿಗ್ರೇಟೆಡ್ ಟೌನ್‌ಶಿಪ್
ರಾಯಚೂರು:25 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ಒಣಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ- ಎಪಿಎಂಸಿಯಲ್ಲಿ ಶೀತಲಗೃಹ ನಿರ್ಮಾಣ.ಗುಂಜಳ್ಳಿ ಕೆರೆ ತುಂಬುವ ಯೋಜನೆ ಈ ಸಾಲಿನಲ್ಲೇ ಅನುಷ್ಠಾನ.ಮಸ್ಕಿ ತಾಲೂಕಿನ ಪಾಮನಕಲ್ಲೂರು, ಇತರ ಪ್ರದೇಶಗಳಿಗೆ ನಾರಾಯಣ ಬಲದಂಡೆ ಕಾಲುವೆಯಿಂದ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಅನುಷ್ಠಾನ.ಚಿಕ್ಕಲಪರ್ವಿ ಬಳಿ ತುಂಗಭದ್ರಾ ನದಿಗೆ ಬಿಸಿಬಿ ನಿರ್ಮಾಣ.ಮಾನ್ವಿ ತಾಲೂಕಿನ ಕುರ್ಡಿ ಕೆರೆ ತುಂಬಿಸುವ ಯೋಜನೆಜಿಲ್ಲಾ ಅಥವಾ ತಾಲೂಕು ಕೇಂದ್ರಗಳಲ್ಲಿ ವಿವಿಗಳ ಘಟಕ ಕಾಲೇಜು ಸ್ಥಾಪನೆ.ವಿಮಾನ ನಿಲ್ದಾಣ ಅಭಿವೃದ್ಧಿಗೆ ಅಗತ್ಯ ಅನುದಾನ.ಕೇಂದ್ರದ ಸಹಯೋಗದೊಂದಿಗೆ ವಿಜ್ಞಾನ ಕೇಂದ್ರ/ತಾರಾಲಯ ಸ್ಥಾಪನೆ. ಮಂತ್ರಾಲಯಕ್ಕೆ ಸಂಕರ್ಪ ಕಲ್ಪಿಸಲು ಚಿಕ್ಕಮಂಚಾಲಿ ಗ್ರಾಮದ ಬಳಿ ₹159 ಕೋಟಿ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್
ಗದಗ:ಎಪಿಎಂಸಿಯಲ್ಲಿ ಶೀತಲಗೃಹ ನಿರ್ಮಾಣ.ಜಾಲವಾಡಗಿ ಕೆರೆ ತುಂಬಿಸುವ ಯೋಜನೆ ಈ ಸಾಲಿನಲ್ಲೇ ಅನುಷ್ಠಾನ.ರೋಣಾ ತಾಲೂಕಿನ ಮಲ್ಲಾಪುರ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ. ಕೆಳ ಸೇತುವೆ ನಿರ್ಮಾಣ,ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ.ಶಿರಹಟ್ಟಿ ತಾಲೂಕಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆ ನಿರ್ಮಾಣಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ.450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣ ಖರೀದಿಗೆ ಅನುದಾನ.ಜಿಲ್ಲಾ ಖನಿಜ ನಿಧಿಯ ಮೂಲಕ ಜಿಟಿಟಿಸಿ ಕೇಂದ್ರ ಸ್ಥಾಪನೆ- ರೋಣದಲ್ಲಿ ನಬಾರ್ಡ್ ಸಹಯೋಗದೊಂದಿಗೆ ಜಿಟಿಟಿಸಿ ಕೇಂದ್ರ ಸ್ಥಾಪನೆ
ಬಾಗಲಕೋಟೆ:ಮೆಳ್ಳಿಗೇರಿ-ಹಲಗಲಿ, ಸಸಾಲಹಟ್ಟಿ-ಶಿವಲಿಂಗೇಶ್ವರ, ಶಿರೂರು, ಹನವಾಳ ಏತನಿರಾವರಿ ಯೋಜನೆಗಳ ಪುನಶ್ಚೇತನ.ಕೆರೂರು ಏತನೀರಾವರಿ ಯೋಜನೆ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನ.ಐಹೊಳೆಯಲ್ಲಿ ಹೋಟೆಲ್ ನಿರ್ಮಾಣ- ವಿಜ್ಞಾನ ಕೇಂದ್ರ/ತಾರಾಲಯ ಕಾರ್ಯಾರಂಭ. ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ.ಹುನಗುಂದದಲ್ಲಿ ತಾಲೂಕಾ ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ
ಧಾರವಾಡ:ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬಯೋ ಸಿಎನ್‌ಜಿ ಘಟಕ ಸ್ಥಾಪನೆ.ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆಯನ್ನು ಈ ಸಾಲಿನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ವಾಟರ್ ಮ್ಯಾನೇಜ್‌ಮೆಂಟ್ ಆಗಿ ಉನ್ನತೀಕರಣ. ಬೆಣ್ಣೆಹಳ್ಳದಿಂದ ಪ್ರವಾಹ ಪೀಡಿತ ಗ್ರಾಮಗಳಿಗೆ ತಡೆಗೋಡೆ ನಿರ್ಮಾಣಕ್ಕೆ ರಾಜ್ಯ ವಿಪತ್ತು ಉಪಶಮನ ನಿಧಿಯಿಂದ ಯೋಜನೆ.ಬೆಂಗಳೂರು.ಮುಂಬೈ ಎಕನಾಮಿಕ್ ಕಾರಿಡಾರ್ ಯೋಜನೆಯಡಿ ಧಾರವಾಡ ಸಮೀಪ 6 ಸಾವಿರ ಎಕರೆಯಲ್ಲಿ ಕೈಗಾರಿಕಾಭಿವೃದ್ಧಿಗೆ ಕೈಗಾರಿಕಾ ನೋಡ್ ಅಭಿವೃದ್ಧಿ.ಹುಬ್ಬಳ್ಳಿಯಲ್ಲಿ ಕೌಶಲ್ಯ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆ.ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ. ಇಂಟಿಗ್ರೇಟೆಡ್ ಟೌನ್‌ಶಿಪ್ ಅಭಿವೃದ್ಧಿ.
ಹಾವೇರಿ:ರಾಣೆಬೆನ್ನೂರು ಎಪಿಎಂಸಿಯಲ್ಲಿ ಶೀತಲಗೃಹ ನಿರ್ಮಾಣ.ರಾಣೆಬೆನ್ನೂರಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ.ಹಿರೇಕೆರೂರು ತಾಲೂಕಿನಲ್ಲಿ ಸರ್ವಜ್ಞರ ಸ್ಮಾರಕ.ವಿಜ್ಞಾನ ಕೇಂದ್ರದ ಕಾಮಗಾರಿ ಪೂರ್ಣ.
ಕೊಪ್ಪಳ:ಎಪಿಎಂಸಿಯಲ್ಲಿ ಶೀತಲಗೃಹ ನಿರ್ಮಾಣ.ಯಲಬುರ್ಗಾ-ಕುಕನೂರು ತಾಲೂಕಿನ 38 ಕೆರೆಗಳನ್ನು ಕುಡಿಯುವ ಮತ್ತು ಅಂತರ್ಜಲ ಕೆರೆ ತುಂಬಿಸುವ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಅನುಷ್ಠಾನ.ಕುಕನೂರು, ಯಲಬುರ್ಗಾ ತಾಲೂಕಿನಲ್ಲಿ ಕೆರೆ, ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆ ಸ್ಥಾಪನೆ.ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಲ್ಲಿ ವಿವಿಗಳ ಘಟಕ ಕಾಲೇಜು ಸ್ಥಾಪನೆ- ಅಂಜನಾದ್ರಿ ಬೆಟ್ಟ, ಸುತ್ತಲಿನ ಪ್ರದೇಶ ಪ್ರವಾಸಿ ಸೌಲಭ್ಯ ಅಭಿವೃದ್ಧಿಗೆ ₹100 ಕೋಟಿ.ಹುಲಿಗೆಮ್ಮ ದೇವಾಲಯದ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ- ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ, ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ, 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣ ಖರೀದಿಗೆ ಅನುದಾನ- ತಳಕಲ್‌ನಲ್ಲಿ ವಿಟಿಯು ಸಹಯೋಗದೊಂದಿಗೆ ಜಿಟಿಟಿಸಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ
ಚಿತ್ರದುರ್ಗ:ಹೊಸದುರ್ಗ ಮತ್ತು ಹೊಳಲ್ಕೆರೆಯ ಗಣಿಬಾಧಿತ ಪ್ರದೇಶಗಳಲ್ಲಿ ಮೀನುಗಾರಿಕೆ ಕೈಗೊಳ್ಳಲು ಕ್ರಮ- ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ. ₹500 ಕೋಟಿ ವೆಚ್ಚದಲ್ಲಿ 150 ವಿದ್ಯಾರ್ಥಿಗಳ ಸಾಮರ್ಥ್ಯದೊಂದಿಗೆ ವೈದ್ಯಕೀಯ ಕಾಲೇಜು ಈ ವರ್ಷದಿಂದ ಆರಂಭ
ಯಾದಗಿರಿ:ಬೀಮಾ ಪ್ಲಾಂಕ್ ಏತ ನೀರಾವರಿ ಯೋಜನೆ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನ- ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಲ್ಲಿ ವಿವಿಗಳ ಘಟಕ ಕಾಲೇಜು ಸ್ಥಾಪನೆ- ಕೇಂದ್ರದ ಸಹಯೋಗದೊಂದಿಗೆ ವಿಜ್ಞಾನ ಕೇಂದ್ರ/ತಾರಾಲಯ ಹೊಸದಾಗಿ ಆರಂಭ
14.ಉತ್ತರಕನ್ನಡ- ಹೊನ್ನಾವರ ತಾಲೂಕಿನ ಮಂಕಿ/ಕಾಸರಕೋಡಲ್ಲಿ ಮೀನುಗಾರಿಕಾ ಸಂಶೋಧನಾ ಕೇಂದ್ರ ಸ್ಥಾಪನೆ- ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ಸುಸಜ್ಜಿತ ಮೀನುಗಾರಿಕಾ ಹೊರಬಂದರು ನಿರ್ಮಾಣ ಮತ್ಸ್ಯ ಆಶಾಕಿರಣ ಯೋಜನೆಯಡಿ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಮೀನುಗಾರರಿಗೆ ನೀಡುತ್ತಿರುವ ಪರಿಹಾರದ ಮೊತ್ತ 1500 ರು.ನಿಂದ 2000ಕ್ಕೇರಿಕೆ ಜಿಲ್ಲೆಯ ಕೇಣಿಯಲ್ಲಿ 30 ಎಂಟಿಪಿಎ ಸಾಮರ್ಥ್ಯದ 4,200 ಕೋಟಿ ವೆಚ್ಚದ ಆಳ ಸಮುದ್ರ ಬಂದರು ನಿರ್ಮಾಣ- ಪಾವಿನಕುರ್ವೆಯಲ್ಲಿ ಪಿಪಿಪಿ ಮಾದರಿ 3048 ಕೋಟಿ ವೆಚ್ಚದಲ್ಲಿ 2ನೇ ಬೃಹತ್ ಬಂದರಿನ ಅಭಿವೃದ್ಧಿಗೆ ಅಂತಾರಾಷ್ಟ್ರೀಯ ಟೆಂಡರ್- ಕಾರವಾರ ಬಂದರಿನಲ್ಲಿ ಬರ್ತ್ ಅಭಿವೃದ್ಧಿ, ಕಾರವಾರ ಬಂದರಿನಲ್ಲಿ ಹೂಳೆತ್ತುವ ಕಾಮಗಾರಿ- ಮಂಕಿಯಲ್ಲಿ ವಿವಿಧೋದ್ದೇಶ ಬಂದರಿನ ಅಭಿವೃದ್ಧಿಗೆ ಕಾರ್ಯಸಾಧ್ಯತಾ ವರದಿ ತಯಾರಿ- ಕಾರವಾರ ನೌಕಾನೆಲೆಯ ವಿಮಾನ ನಿಲ್ದಾಣದ ಭೂಸ್ವಾಧೀನ ಪ್ರಕ್ರಿಯೆ ತೊಡಕು ನಿವಾರಣೆ- ಶಿರಸಿಯಲ್ಲಿ ವಿಜ್ಞಾನ ಕೇಂದ್ರ/ತಾರಾಲಯ ಕಾರ್ಯಾರಂಭ, ದಾಂಡೇಲಿ ಇಂಟರ್ ಪ್ರಿಟೇಷನ್ ಸೆಂಟರ್ ನಿರ್ಮಾಣ
ರಾಮನಗರ:ಹೈಟೆಕ್ ರೇಷ್ಮೆ ಮಾರುಕಟ್ಟೆಯ 2ನೇ ಹಂತದ ಕಾಮಗಾರಿಗೆ 250 ಕೋಟಿ ರು.- ಅರ್ಕಾವತಿ ರಿವರ್ ಫ್ರಂಟ್ ಡೆವಲಪ್‌ಮೆಂಟ್ ಯೋಜನೆ ಅನುಷ್ಠಾನಚನ್ನಪಟ್ಟಣ-ಬೈರಾಪಟ್ಟಣ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ, ಕೆಳ ಸೇತುವೆ ನಿರ್ಮಾಣ
ಮಂಡ್ಯ:ವಿ.ಸಿ.ಫಾರಂನಲ್ಲಿ ಕೃಷಿ ವಿವಿ ಸ್ಥಾಪಿಸುವ ಸಂಬಂಧ ಪರಿಶೀಲಿಸಲು ತಜ್ಞರ ಸಮಿತಿ ರಚನೆ- ಕೆಆರ್‌ಎಸ್ ಬೃಂದಾವನವನ್ನು ಖಾಸಗಿ ಸಹಭಾಗಿತ್ವದಲ್ಲಿ ವಿಶ್ವದರ್ಜೆಯ ಪ್ರವಾಸೋದ್ಯಮದ ಆಕರ್ಷಣೆಯ ಕೇಂದ್ರವಾಗಿ ಉನ್ನತೀಕರಿಸಲು ಕ್ರಮ- ಹೆಬ್ಬಕವಾಡಿ, ನಿಡಘಟ್ಟ, ತುರುಗನೂರು, ಮಳವಳ್ಳಿ ತಾಲೂಕಿನ ಮಾದವಮಂತ್ರಿ ನಾಲೆಗಳ ಹಾಗೂ ಮದ್ದೂರು ತಾಲೂಕಿನ ಕೆಮ್ಮಣ್ಣು ನಾಲಾ ಆಧುನೀಕರಣ- ಮೈಶುಗರ್ ಕಾರ್ಖಾನೆ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣ- ಆದಿಚುಂಚನಗಿರಿಯಲ್ಲಿ ವಿಜ್ಞಾನ ಕೇಂದ್ರದ ಕಾಮಗಾರಿ ಪೂರ್ಣ- ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ, ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ
ಮೈಸೂರು:ಮಾರುಕಟ್ಟೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬಯೋ ಸಿಎನ್‌ಜಿ ಘಟಕ ಸ್ಥಾಪನೆ- ಎಪಿಎಂಸಿಯಲ್ಲಿ ಶೀತಲಗೃಹ ನಿರ್ಮಾಣ.ಹುಣಸೂರು ತಾಲೂಕಿನ ಮರದೂರು ಕೆರೆ ತುಂಬಿಸುವ ಯೋಜನೆಗಳ ಅನುಷ್ಠಾನ.ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ನಾಲೆಗಳ ಅಭಿವೃದ್ಧಿಗೆ ಕ್ರಮಕುಕ್ಕರಹಳ್ಳಿ, ಕೆಆರ್‌ಎಸ್ ರಸ್ತೆ ಬಳಿ ರೈಲ್ವೆ ಮೇಲ್ಸೇತುವೆ, ಕೆಳ ಸೇತುವೆ ನಿರ್ಮಾಣ, ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಪ್ರಸಕ್ತ 43 ಕೋಟಿ ಬಿಡುಗಡೆ- ಕಬಿನಿ ಇಂಟರ್ ಪ್ರಿಟೇಷನ್ ಸೆಂಟರ್ ನಿರ್ಮಾಣಹುಣಸೂರಿನಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ- ಈ ವರ್ಷ ವಕೀಲರ ಭವನ ಪೂರ್ಣ- ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ, 40 ಹಾಸಿಗೆ ಸಾಮರ್ಥ್ಯದ ನೆಫ್ರೊ ಯುರಾಲಜಿ ಆಸ್ಪತ್ರೆಯನ್ನು 100 ಹಾಸಿಗೆ ಸಾಮರ್ಥ್ಯಕ್ಕೆ ಉನ್ನತೀಕರಣ- ಹ್ಯೂಮನ್ ಮಿಲ್ಕ್ ಬ್ಯಾಂಕ್‌ಸ್ಥಾಪನೆ- ಕೆ.ಆರ್. ಆಸ್ಪತ್ರೆ ಆವರಣದಲ್ಲಿ ₹75 ಕೊಟಿ ವೆಚ್ಚದಲ್ಲಿ ಸುಸಜ್ಜಿತ ಹೊರ ರೋಗಿ ವಿಭಾಗದ ಕಟ್ಟಡ ನಿರ್ಮಾಣ- ವರುಣಾದಲ್ಲಿ ವಿಟಿಯು ಸಹಯೋಗದೊಂದಿಗೆ ಜಿಟಿಟಿಸಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ- ಇಂಟಿಗ್ರೇಟೆಡ್ ಟೌನ್‌ಶಿಪ್ ಅಭಿವೃದ್ಧಿ, ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ.
ಹಾಸನ:ವಿಮಾನ ನಿಲ್ದಾಣ ಅಭಿವೃದ್ಧಿಗೆ ಬಾಕಿ ಇರುವ 30 ಕೋಟಿ ಬಿಡುಗಡೆ- ವಿಜ್ಞಾನ ಕೇಂದ್ರ/ತಾರಾಲಯ ಕಾರ್ಯಾರಂಭ- ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ
ಕೊಡಗು:ವಿಜ್ಞಾನ ಕೇಂದ್ರ/ತಾರಾಲಯ ಕಾರ್ಯಾರಂಭ-ಪೊನ್ನಂಪೇಟೆಯಲ್ಲಿ 5 ಕೋಟಿ ವೆಚ್ಚದಲ್ಲಿ ಕ್ರೀಡಾ ವಸತಿ ನಿಲಯ ಕಟ್ಟಡ ನಿರ್ಮಾಣ- ಮಡಿಕೇರಿಯಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ- 12 ಕೋಟಿ ವೆಚ್ಚದಲ್ಲಿ ವಿರಾಜಪೇಟೆಯಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ- ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ- ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪಿಪಿಪಿ ಮಾದರಿಯಲ್ಲಿ Cardiac Unit ಪ್ರಾರಂಭ- ಸಾಂಕ್ರಾಮಿಕ ರೋಗ ಮತ್ತು ವೈರಲ್ ಸೋಂಕು ಪತ್ತೆಗೆ ವೈರಲ್ ರಿಸರ್ಚ್ ಆ್ಯಂಡ್ ಡಯಾಗ್ನೋಸ್ಟಿಕ್ ಲ್ಯಾಬ್ ಸ್ಥಾಪನೆ
ಬೆಂಗಳೂರು ನಗರ:ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಸುಸಜ್ಜಿತವಾದ ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯ ಪುಷ್ಪ ಮಾರುಕಟ್ಟೆ ಸ್ಥಾಪನೆ- ನಗರ, ಸುತ್ತಮುತ್ತಲಿನ ಪ್ರದೇಶಗಳ್ಲಲಿ ಬಹುಮಹಡಿ ಕಟ್ಟಡಗಳ ಬೆಳವಣಿಗೆಗಾಗಿ ವಿದ್ಯುತ್ ಬೇಡಿಕೆ ನೀಗಿಸಲು ಪಿಪಿಪಿ ಮಾದರಿಯಲ್ಲಿ ಸಬ್ ಸ್ಟೇಷನ್ ಉನ್ನತೀಕರ 2000 ಎಕರೆ ಪ್ರದೇಶದಲ್ಲಿ ನಾಲೆಡ್ಜ್ ಹೆಲ್ತ್ ಕೇರ್, ಸಿಟಿ ಕೆಎಚ್‌ಐಆರ್ ಅಭಿವೃದ್ಧಿಗೆ ಯೋಜನೆ ಯಶವಂತರಪುದಲ್ಲಿ ಕೆಎಸ್‌ಡಿಎಲ್ ವತಿಯಿಂದ ಸರ್ಕಾರಿ ಇಲಾಖೆಗಳನ್ನು ನಿರ್ವಹಿಸಲು ಸುಸಜ್ಜಿತ ಕಚೇರಿ ಸಂಕೀರ್ಣ ನಿರ್ಮಾಣ- ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ 233 ಕೋಟಿ ವೆಚ್ಚದಲ್ಲಿ ವಿಜ್ಞಾನ ನಗರಿ ಸ್ಥಾಪನೆಖಾಸಗಿ ವಸತಿ ಸಮುಚ್ಛಯಗಳಲ್ಲಿ ಸಂಸ್ಕರಿಸಿದ ನೀರು ಮರುಬಳಕೆಗೆ ಪ್ರೋತ್ಸಾಹ- ಪೊಲೀಸ್ ಸುಲಿವನ್ ಮೈದಾನದಲ್ಲಿ 3 ಕೋಟಿ ವೆಚ್ಚದಲ್ಲಿ ಆಸ್ಟ್ರೋ ಟರ್ಫ್ ಹಾಕಿ ಪ್ರಾಂಗಣ ನಿರ್ಮಾಣ- ನೋಂದಣಿ ಆಗುವ ಎಲ್ಲ ವಾಹನಗಳ ದಾಖಲೆ ಡಿಜಿಟಲೀಕರಣ ಪ್ರಾಯೋಗಿಕ ಜಾರಿ.₹150 ಕೋಟಿ ವೆಚ್ಚದಲ್ಲಿ ಕೆ.ಸಿ. ಜನರಲ್ ಆಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ- ₹20 ಕೋಟಿ ವೆಚ್ಚದಲ್ಲಿ ಬಡವರಿಗೆ ಉಚಿತ ಪ್ರಯೋಗಾಲಯ ಸೇವೆ ನೀಡಲು 430 ಪ್ರಯೋಗಾಲಯಗಳ ಸ್ಥಾಪನೆ
1700 ಕೋಟಿ ವೆಚ್ಚದ ಯೋಜನೆ ವೈಟ್ ಟಾಪಿಂಗ್ ಡಿಸೆಂಬರ್ ಹೊತ್ತಿಗೆ ಪೂರ್ಣ- ಬಿಎಂಟಿಸಿಗೆ 1,334ಹೊಸ ಎಲೆಕ್ಟ್ರಿಕಲ್ ಬಸ್‌ಗಳು ಮತ್ತು 820 ಬಿಎಸ್-6 ಡೀಸೆಲ್ ಬಸ್ ಸೇರ್ಪಡೆ- ಮಹಿಳಾ ಸುರಕ್ಷತೆಗೆ ವೆಹಿಕಲ್ ಟ್ರ್ಯಾಕಿಂಗ್ ಆ್ಯಪ್ ಅನುಷ್ಠಾನ.ನಗರದ ಪ್ರಮುಖ 28 ಜಂಕ್ಷನ್‌ಗಳಲ್ಲಿ ಜಪಾನ್ ತಂತ್ರಜ್ಞಾನದ ಏರಿಯಾ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಸಿಸ್ಟಮ್ ಅಳವಡಿಕೆ- ₹5,550 ಕೋಟಿ ಅಂದಾಜು ವೆಚ್ಚದಲ್ಲಿ 775 ಎಂ.ಎಲ್.ಡಿ ಸಾಮರ್ಥ್ಯದ ಕಾವೇರಿ ಹಂತ-5 ಯೋಜನೆ ಕಾರ್ಯಾರಂಭ- ₹441 ಕೋಟಿ ವೆಚ್ಚದಲ್ಲಿ 07 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಉನ್ನತೀಕರಣ.₹200 ಕೋಟಿ ಮೊತ್ತದಲ್ಲಿ 110 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಯೋಜನೆ
ಬೆಂಗಳೂರು ಗ್ರಾಮಾಂತರ:ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತು ಉತ್ತೇಜಿಸಲು ಪೂಜೇನಹಳ್ಳಿಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಆಹಾರ ಪಾರ್ಕ್ ಸ್ಥಾಪನೆ. ದಾಸನಪುರ ಮಾರುಕಟ್ಟೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬಯೋ ಸಿಎನ್‌ಜಿ ಘಟಕ ಸ್ಥಾಪನೆ.ಕನಕಪುರದ ಹೆಗ್ಗನೂರು ಕೆರೆ ತುಂಬಿಸುವ ಯೋಜನೆ, ಶ್ರೀರಂಗ ಕುಡಿಯುವ ನೀರು ಯೋಜನೆಗೆ ಪೈಪ್‌ಲೈನ್ ಮೂಲಕ ನೀರೊದಗಿಸುವ ಯೋಜನೆ ಅನುಷ್ಠಾನ ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇಗುಲ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ.ದೇವಹಳ್ಳಿಯಲ್ಲಿ ಸೀಜಿಂಗ್ ಯಾರ್ಡ್ ನಿರ್ಮಾಣ. ನೆಲಮಂಗಲದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ.ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿಯಲ್ಲಿ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರ ಟೌನ್‌ಶಿಪ್ ಅಭಿವೃದ್ಧಿ
ಕೋಲಾರ:ಮಾರುಕಟ್ಟೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬಯೋ ಸಿಎನ್‌ಜಿ ಘಟಕ ಸ್ಥಾಪನೆ.ಆದಿಮ ಸಾಂಸ್ಕೃತಿಕ ಕೇಂದ್ರ ಅಭಿವೃದ್ಧಿಗಾಗಿ ನೆರವು.ಜಿಲ್ಲಾಸ್ಪತ್ರೆಗೆ ಕಾಲ್ಪಸ್ಕೊಪಿ ಉಪಕರಣಗಳ ಖರೀದಿಗೆ ಅನುದಾನ- ಕೆಜಿಎಫ್‌ನಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್ ಅಭಿವೃದ್ಧಿ
ದಾವಣಗೆರೆ:ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ- ಜಿಲ್ಲಾಸ್ಪತ್ರೆಗೆ ಕಾಲ್ಪಸ್ಕೊಪಿ ಉಪಕರಣಗಳ ಖರೀದಿಗೆ ಅನುದಾನ
ತುಮಕೂರು:ಗುಬ್ಬಿಯ ಮಠದಹಳ್ಳಿ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ಕ್ರಮ.ಕೌಶಲ್ಯ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆ.ಸೀಜಿಂಗ್ ಯಾರ್ಡ್ ನಿರ್ಮಾಣ. ಮಧುಗಿರಿಯಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ.ಸಿರಾದಲ್ಲಿ ತಾಲೂಕಾ ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ.ವಸಂತನರಸಾಪುರ ಹಾಗೂ ತುಮಕೂರಿನಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್ ಅಭಿವೃದ್ಧಿ.
ದಕ್ಷಿಣಕನ್ನಡ- ಪ್ರಸಕ್ತ ಸಾಲಿನಲ್ಲೇ ಪುತ್ತೂರು ಪಶುವಿವಿ ಕಾಲೇಜು ಆರಂಭಕ್ಕೆ ಕ್ರಮ- ಮತ್ಸ್ಯ ಆಶಾಕಿರಣ ಯೋಜನೆಯಡಿ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಮೀನುಗಾರರಿಗೆ ನೀಡುತ್ತಿರುವ ಪರಿಹಾರದ ಮೊತ್ತ 1500 ರು.ನಿಂದ 2000ಕ್ಕೇರಿಕೆ.ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಮಾರುಕಟ್ಟೆಯಲ್ಲಿ 35 ಕೋಟಿ ರು. ವೆಚ್ಚದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ಸ್ಥಾಪನೆ.ಹಜ್ ಭವನ ನಿರ್ಮಾಣಕ್ಕೆ ₹10 ಕೋಟಿ ಅನುದಾನ, ಇಂಟಿಗ್ರೇಟೆಡ್ ಟೌನ್‌ಶಿಪ್ ಅಭಿವೃದ್ಧಿ.ಮಂಗಳೂರು ಬಂದರಿನಿಂದ ಬೆಂಗಳೂರಿಗೆ ಆರ್ಥಿಕ ಕಾರಿಡಾರ್ ನಿರ್ಮಾಣ.ಹಳೇ ಮಂಗಳೂರು ಬಂದರಿನಲ್ಲಿ ಬರ್ತ್ ಅಭಿವೃದ್ಧಿ.ಬಂದರಿನಲ್ಲಿ ಹೂಳೆತ್ತುವ ಕಾಮಗಾರಿ.ಹಳೇ ಮಂಗಳೂರು ಬಂದರಿನಲ್ಲಿ 350 ಮೀ. ಉದ್ದದ ಕೋಸ್ಟಲ್ ಬರ್ತ್ ನಿರ್ಮಾಣ, ಪ್ರಸಕ್ತ ವರ್ಷದಲ್ಲಿ ಪೂರ್ಣ.
ಉಡುಪಿ:ಮತ್ಸ್ಯ ಆಶಾಕಿರಣ ಯೋಜನೆಯಡಿ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಮೀನುಗಾರರಿಗೆ ನೀಡುತ್ತಿರುವ ಪರಿಹಾರದ ಮೊತ್ತ 1500 ರು.ನಿಂದ 2000ಕ್ಕೇರಿಕೆ.ಸ್ವರ್ಣಾ, ಸಿದ್ದಾಪುರ ಏತನೀರಾವರಿ ಯೋಜನೆ ಪುನಶ್ಚೇತನ.ಮಲ್ವೆ ಬಂದರಿನಲ್ಲಿ ಬರ್ತ್ ಅಭಿವೃದ್ಧಿ. ಹಂಗಾರಕಟ್ಟೆ ಬಂದರಿನಲ್ಲಿ ಆಧುನಿಕ ಹಡಗು ನಿರ್ಮಾಣ ಚಟುವಟಿಕೆ ಆರಂಭ.ವಿಜ್ಞಾನ ಕೇಂದ್ರದ ಕಾಮಗಾರಿ ಪೂರ್ಣ. ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ.ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ, ಜಿಲ್ಲಾಸ್ಪತ್ರೆಗೆ ಕಾಲ್ಪಸ್ಕೊಪಿಉಪಕರಣಗಳ ಖರೀದಿಗೆ ಅನುದಾನ
27.ಚಾಮರಾಜನಗರ:ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ.450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣ ಖರೀದಿಗೆ ಅನುದಾನ.ಯಳಂದೂರು ತಾಲೂಕಿನಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆ ನಿರ್ಮಾಣ.ಬಂಡಿಪುರ ಇಂಟರ್ ಪ್ರಿಟೇಷನ್ ಸೆಂಟರ್ ನಿರ್ಮಾಣ.ಬಂಡಿಪುರದಲ್ಲಿ ₹10 ಕೋಟಿ ವೆಚ್ಚದಲ್ಲಿ ಚಿರತೆ ಕಾರ್ಯಪಡೆ ರಚನೆ.ವಿಜ್ಞಾನ ಕೇಂದ್ರ/ತಾರಾಲಯ ಕಾರ್ಯಾರಂಭ
ಶಿವಮೊಗ್ಗ:ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತನ್ನು ಉತ್ತೇಜಿಸಲು ಸೋಗಾನೆ ವಿಮಾನ ನಿಲ್ದಾಣ ಸಮೀಪ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಆಹಾರ ಪಾರ್ಕ್ ಸ್ಥಾಪನೆ.ಭದ್ರಾವತಿಯಲ್ಲಿ ಅತ್ಯಾಧುನಿಕ ಮೀನುಗಾರಿಕಾ ಮಾರುಕಟ್ಟೆ ಸ್ಥಾಪನೆ. ಸೊರಬ ತಾಲೂಕಿನ ವರದಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ.ಶಿವಮೊಗ್ಗ-ಬೊಮ್ಮನಕಟ್ಟೆ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ, ಕೆಳ ಸೇತುವೆ ನಿರ್ಮಾಣ.ಕೌಶಲ್ಯ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆ.ಕೇಂದ್ರದ ಸಹಯೋಗದೊಂದಿಗೆ ವಿಜ್ಞಾನ ಕೇಂದ್ರ/ತಾರಾಲಯ ಸ್ಥಾಪನೆ. ಶಿವಮೊಗ್ಗದಲ್ಲಿ 100 ಕೋಟಿ ವೆಚ್ಚದಲ್ಲಿ ಹೊಸ ಹೈ-ಸೆಕ್ಯೂರಿಟಿ ಕಾರಾಗೃಹ ನಿರ್ಮಾಣ.
ಚಿಕ್ಕಬಳ್ಳಾಪುರಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆಯ 2ನೇ ಹಂತದ ಕಾಮಗಾರಿಗೆ 250 ಕೋಟಿ ರು.ಮಾರುಕಟ್ಟೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬಯೋ ಸಿಎನ್‌ಜಿ ಘಟಕ ಸ್ಥಾಪನೆ.ರೈಲ್ವೆ ಮೇಲ್ಸೇತುವೆ, ಕೆಳ ಸೇತುವೆ ನಿರ್ಮಾಣ. ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ
ಚಿಕ್ಕಮಗಳೂರುಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಪೈಸ್‌ಮಾರುಕಟ್ಟೆ ಅಭಿವೃದ್ಧಿ.ಶೃಂಗೇರಿ ತಾಲೂಕಿನಲ್ಲಿ 100 ಹಾಸಿಗೆ ಸಾಮರ್ಥ್ಯ ತಾಲೂಕು ಆಸ್ಪತ್ರೆ ನಿರ್ಮಾಣ.ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ (ಸ್ಥಾಪನೆ- ಕೇಂದ್ರದ ಸಹಯೋಗದೊಂದಿಗೆ ವಿಜ್ಞಾನ ಕೇಂದ್ರ/ತಾರಾಲಯ ಸ್ಥಾಪನ
ವಿಜಯನಗರ: ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ.ಹಗರಿಬೊಮ್ಮನಹಳ್ಳಿಯಲ್ಲಿ ತಾಲೂಕಾ ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ