ಸಾರಾಂಶ
ಸಾಲಿಗ್ರಾಮದ ಸ್ವಾಮಿ ವಿವೇಕಾನಂದರ ದಿವ್ಯ ಲೀಲಾಕ್ಷೇತ್ರ ಡಿವೈನ್ ಪಾರ್ಕ್‌ನಲ್ಲಿ ಡಾ. ಚಂದ್ರಶೇಖರ್ ಗುರೂಜಿ ಭವ್ಯ ಬಾಳಿನ ಬುತ್ತಿ’ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಕೋಟ
ಇಲ್ಲಿನ ಡಿವೈನ್ ಪಾರ್ಕ್ ಆಧ್ಯಾತ್ಮಿಕ ಕ್ಷೇತ್ರವಾಗಿ ತನ್ನ ಕೀರ್ತಿಯನ್ನು ಜಗದಲ ಪಸರಿಸಿಕೊಂಡಿದೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಇಲ್ಲಿನ ಸಾಲಿಗ್ರಾಮದ ಸ್ವಾಮಿ ವಿವೇಕಾನಂದರ ದಿವ್ಯ ಲೀಲಾಕ್ಷೇತ್ರ ಡಿವೈನ್ ಪಾರ್ಕ್‌ನಲ್ಲಿ ಡಾ. ಚಂದ್ರಶೇಖರ್ ಗುರೂಜಿ ಭವ್ಯ ಬಾಳಿನ ಬುತ್ತಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಂದ ಸಾಕಷ್ಟು ಪ್ರವಾಸಿಗರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಇಂಥಹ ಕ್ಷೇತ್ರದಲ್ಲಿ ಗೌರವ ಸ್ವೀಕರಿಸುವುದೇ ನಮ್ಮ ಭಾಗ್ಯವಾಗಿದೆ. ರಾಜಕಾರಣದ ಮಜಲುಗಳನ್ನು ಮೇಳೈಸಿಕೊಂಡ ವ್ಯಕ್ತಿಗಳಿಗೆ ಡಾಕ್ಟರ್ ಜೀ ಅವರ ಆಶೀರ್ವಾದ ಮತ್ತಷ್ಟು ಕಾರ್ಯನಿರ್ವಹಿಸಲು ಪ್ರೇರಣೆಯಾಗಿದೆ ಎಂದರು.ಶಾಸಕ ಕಿರಣ್ ಕುಮಾರ್ ಕೊಡ್ಗಿ ಕೃತಿಯನ್ನು ಬಿಡುಗಡೆಗೊಳಿಸಿದರು. ಇದೇ ವೇಳೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರನ್ನು ಡಿವೈನ್ ಪಾರ್ಕ್ ವತಿಯಿಂದ ಗೌರವಿಸಲಾಯಿತು. ಡಾ. ಚಂದ್ರಶೇಖರ್ ಉಡುಪ ಸಂದೇಶ ನೀಡಿದರು. ಸಭೆಯಲ್ಲಿ ಡಿವೈನ್ ಪಾರ್ಕ್ ಟ್ರಸ್ಟಿಗಳಾದ ಡಾ. ಬಾಪಟ್ಟ, ಕರಿಸಿದ್ದಪ್ಪ ಉಪಸ್ಥಿತರಿದ್ದರು. ಡಿವೈನ್ ಪಾರ್ಕ್ ಹಾಗೂ ಮೂಡುಗಿಳಿಯಾರು ಇಲ್ಲಿನ ಯೋಗಬನ ಸರ್ವಕ್ಷೇಮ ಆಸ್ಪತ್ರೆಯ ನಿರ್ದೇಶಕ ಡಾ. ವಿವೇಕ್ ಉಡುಪ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.