ಸಾರಾಂಶ
ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮ (ಅಲಿಂಕೋ) ಸಹಯೋಗದೊಂದಿಗೆ ಕೆಎಂಸಿಆರ್‌ಐನಲ್ಲಿ ಪ್ರಧಾನಮಂತ್ರಿ ದಿವ್ಯಾಶಾ ಕೇಂದ್ರ ಆರಂಭಿಸಲಾಗಿದೆ. ಈ ಕೇಂದ್ರಕ್ಕೆ ಬರುವ ರೋಗಿಗಳಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಹುಬ್ಬಳ್ಳಿ:
ಅಂಗವಿಕಲರ ಬಾಳಿಕೆ ಪ್ರಧಾನಮಂತ್ರಿ ದಿವ್ಯಾಶಾ ಯೋಜನೆಯ ಮೂಲಕ ಬೆಳಕು ನೀಡಲಾಗುತ್ತಿದೆ. ಅಂಗವಿಕಲರ ಸರಳ ಮತ್ತು ಸುಗಮವಾಗಿಸುವ ಹಾಗೂ ಹಿರಿಯ ನಾಗರಿಕರಿಗೆ ಅಗತ್ಯವಿರುವ ಸಾಧನ ನೀಡುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಬನ್ವಾರಿಲಾಲ್ ವರ್ಮಾ ಹೇಳಿದರು.ಇಲ್ಲಿನ ಕೆಎಂಸಿಆರ್‌ಐ ಆವರಣದಲ್ಲಿ ಭಾನುವಾರ ಪ್ರಧಾನಮಂತ್ರಿ ದಿವ್ಯಾಶಾ ಕೇಂದ್ರಕ್ಕೆ ಚಾಲನೆ ನೀಡಿ, ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ವಿವಿಧ ಸಾಧನ ವಿತರಿಸಿ ಮಾತನಾಡಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮ (ಅಲಿಂಕೋ) ಸಹಯೋಗದೊಂದಿಗೆ ಕೆಎಂಸಿಆರ್‌ಐನಲ್ಲಿ ಪ್ರಧಾನಮಂತ್ರಿ ದಿವ್ಯಾಶಾ ಕೇಂದ್ರ ಆರಂಭಿಸಲಾಗಿದೆ. ಈ ಕೇಂದ್ರಕ್ಕೆ ಬರುವ ರೋಗಿಗಳಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅಂಗವಿಕಲರು ತಮಗೆ ಅಗತ್ಯವಿರುವ ಕೃತಕ ಸಾಧನ ಪಡೆಯಲು ಇನ್ನು ಯಾವುದೇ ಶಿಬಿರಗಳ ಅಗತ್ಯವಿರುವುದಿಲ್ಲ. ಸದ್ಯ ಕಾನ್ಪುರದಿಂದ ಸಲಕರಣೆ ತರಿಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆಎಂಸಿಆರ್‌ಐನಲ್ಲಿಯೇ ಹೆಚ್ಚಿನ ಸ್ಥಳಾವಕಾಶ ನೀಡಲು ನಿರ್ದೇಶಕರು ಭರವಸೆ ನೀಡಿದ್ದು, ಇಲ್ಲಿಯೇ ಕೃತಕ ಕೈ-ಕಾಲು ತಯಾರಿಕಾ ಘಟಕ ಆರಂಭಿಸುವ ಚಿಂತನೆಯಿದೆ ಎಂದರು.ಈ ವೇಳೆ ಕೆಎಂಸಿಆರ್‌ಐ ನಿರ್ದೇಶಕ ಎಸ್.ಎಫ್. ಕಮ್ಮಾರ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಹು-ಧಾ ಮಹಾನಗರ ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ ಸೇರಿದಂತೆ ಹಲವರಿದ್ದರು.