ನಾಳೆ....ಎಸ್‌ಆರ್‌ಎಸ್ ಹೆರಿಟೇಜ್‌ ಶಾಲೆಯಲ್ಲಿ ದೀಪಾವಳಿ ಸಂಭ್ರಮ

| Published : Nov 02 2024, 01:23 AM IST

ಸಾರಾಂಶ

Diwali celebration at SRS Heritage School

ಚಳ್ಳಕೆರೆ: ನಗರದ ಬೆಂಗಳೂರು ರಸ್ತೆಯಲ್ಲಿರುವ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಆಡಳಿತಾಧಿಕಾರಿ ಪಿ.ಎನ್.ಕೃಷ್ಣಪ್ರಸಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈ ಬಾರಿ ವಿಶೇಷವಾಗಿ ಶಾಲಾ ಆವರಣದಲ್ಲೇ ಒಲಿಂಪಿಕ್ ಕ್ರೀಡಾ ಲಾಂಛನ ಮತ್ತು ರಾಷ್ಟ್ರೀಯ ಕ್ರೀಡೆಯಾದ ಹಾಕಿ ಲಾಂಛನವನ್ನು ಹೂಗಳಿಂದ ಸಿದ್ಧಗೊಳಿಸಲಾಗಿದೆ. ಜೊತೆಯಲ್ಲಿ ವಿದ್ಯುತ್‌ದೀಪಗಳಿಂದ ಅಲಂಕರಿಸಲಾಗಿದೆ. ಶಾಲೆಯ ಎಲ್ಲ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಸುತ್ತಲೂ ನಿಂತು ಕ್ರೀಡೆಗೆ ಗೌರವ ಸಲ್ಲಿಸುವ ಮೂಲಕ ದೀಪಾವಳಿ ಆಚರಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಕಾರ್ಯದರ್ಶಿ ಸುಜಾತಲಿಂಗಾರೆಡ್ಡಿ ಮಾತನಾಡಿ, ದೀಪಾವಳಿ ಎಂದರೆ ಸಾಮಾನ್ಯವಾಗಿ ಮಕ್ಕಳು ಸೇರಿದಂತೆ ಎಲ್ಲರೂ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಆದರೆ, ನಮ್ಮ ಶಾಲೆಯಲ್ಲಿ ಇಂತಹ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲಾಗುತ್ತಿದೆ ಎಂದರು. ಪ್ರಾಂಶುಪಾಲ ಬಿ.ಎಸ್.ವಿಜಯ್ ಸೇರಿದಂತೆ ಮತ್ತಿತರರಿದ್ದರು.

-------------

೩೧ಸಿಎಲ್‌ಕೆ೩ ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿರುವ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮ, ಸಡಗರಗಳಿಂದ ಆಚರಿಸಲಾಯಿತು.