ದೀಪಾವಳಿ ಹಬ್ಬದ ಪ್ರಯುಕ್ತ ಊರಿಗೆ ತೆರಳುವ ಮತ್ತು ಊರಿನಿಂದ ಮರಳುವ ಪ್ರಯಾಣಿಕರ ನೂಕುನುಗ್ಗಲ್ಲನ್ನು ನಿಭಾಯಿಸುವ ದೃಷ್ಟಿಯಿಂದ ಕೊಂಕಣ ರೈಲು ಮಾರ್ಗದಲ್ಲಿ ಹಲವು ವಿಶೇಷ ರೈಲುಗಳನ್ನು ಓಡಿಸಲು ಕೊಂಕಣ ರೈಲ್ವೆ ಕಾರ್ಪೋರೇಷನ್ ನಿರ್ಧರಿಸಿದೆ.
ಉಡುಪಿ: ದೀಪಾವಳಿ ಹಬ್ಬದ ಪ್ರಯುಕ್ತ ಊರಿಗೆ ತೆರಳುವ ಮತ್ತು ಊರಿನಿಂದ ಮರಳುವ ಪ್ರಯಾಣಿಕರ ನೂಕುನುಗ್ಗಲ್ಲನ್ನು ನಿಭಾಯಿಸುವ ದೃಷ್ಟಿಯಿಂದ ಕೊಂಕಣ ರೈಲು ಮಾರ್ಗದಲ್ಲಿ ಹಲವು ವಿಶೇಷ ರೈಲುಗಳನ್ನು ಓಡಿಸಲು ಕೊಂಕಣ ರೈಲ್ವೆ ಕಾರ್ಪೋರೇಷನ್ ನಿರ್ಧರಿಸಿದೆ.ರೈಲು ನಂ.07365 ಎಸ್ಎಸ್ಎಸ್ ಹುಬ್ಬಳ್ಳಿ ಜಂಕ್ಷನ್- ಮಡಗಾಂವ್ ಜಂಕ್ಷನ್ ವಯಾ ಯಶವಂತಪುರ ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲು, ರೈಲು ನಂ.07366 ಮಡಂಗಾವ್ ಜಂಕ್ಷನ್- ಬೆಂಗಳೂರು ಕಾಂಟೋನ್ಮಂಟ್ ವಯಾ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಹಾಗೂ ರೈಲು ನಂ.06205/06206 ಬೆಂಗಳೂರು ಕಂಟೋನ್ಮಂಟ್- ಮಡಗಾಂವ್ ಜಂಕ್ಷನ್-ಬೆಂಗಳೂರು ಕಂಟೋನ್ಮಂಟ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಚರಿಸುವ ವಿಶೇಷ ರೈಲುಗಳಾಗಿವೆ ಎಂದು ಕಾರ್ಪೋರೇಶನ್ ಪ್ರಕಟಣೆ ತಿಳಿಸಿದೆ.
ಇಂದ್ರಾಳಿ ನಿಲ್ದಾಣದಲ್ಲಿ ಲಾಕರ್:ಕೊಂಕಣ ರೈಲ್ಪೆ ಮಾರ್ಗದ ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಕರ್ನಾಟಕದ ಪ್ರಥಮ ಡಿಜಿಟಲ್ ಲಾಕರ್ ಸೌಲಭ್ಯವನ್ನು ಕೊಂಕಣ ರೈಲ್ವೆಯ ಪ್ರಯಾಣಿಕರಿಗೆ ಒದಗಿಸಲಾಗಿದೆ.ಆಧುನಿಕ ತಂತ್ರಜ್ಞಾನದೊಂದಿಗೆ ಒಟ್ಟು 15 ಲಾಕರ್‌ಗಳನ್ನು ಒದಗಿಸಲಾಗಿದೆ. ರೈಲ್ವೆ ಪ್ರಯಾಣಿಕರು ಉಡುಪಿಯಲ್ಲಿ ಇಳಿದು ನಿರ್ದಿಷ್ಟ ವೇಳಾವಧಿಗೆ ಗೊತ್ತುಪಡಿಸಿದ ಶುಲ್ಕ ಪಾವತಿಸಿ ತಮ್ಮೆಲ್ಲಾ ಲಗೇಜ್ ಗಳನ್ನು ಸುರಕ್ಷಿತವಾಗಿ ಡಿಜಿಟಲ್ ಲಾಕರ್ ವ್ಯವಸ್ಥೆಯಲ್ಲಿ ಇರಿಸಿ, ತಮ್ಮ ಕೆಲಸ ಮುಗಿಸಿಕೊಂಡು ಬಂದು ಅದನ್ನು ಕೊಂಡೊಯ್ಯಬಹುದು ಎಂದು ಕೊಂಕಣ ರೈಲ್ಪೆ ಪ್ರಕಟಣೆಯಲ್ಲಿ ತಿಳಿಸಿದೆ.