ಡಿಕೆಶಿ ಕ್ಷಮೆ ಕೇಳಿದ್ದು ರಾಜಕೀಯ ಜೀವನದ ಕಪ್ಪು ಚುಕ್ಕೆ

| Published : Aug 29 2025, 01:00 AM IST

ಡಿಕೆಶಿ ಕ್ಷಮೆ ಕೇಳಿದ್ದು ರಾಜಕೀಯ ಜೀವನದ ಕಪ್ಪು ಚುಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಆರ್.ಎಸ್.ಎಸ್ ಗೀತೆ ಹಾಡಿದ್ದಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕ್ಷಮೆ ಕೇಳಿರುವುದು ಅವರ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶಗೌಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಆರ್.ಎಸ್.ಎಸ್ ಗೀತೆ ಹಾಡಿದ್ದಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕ್ಷಮೆ ಕೇಳಿರುವುದು ಅವರ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶಗೌಡ ತಿಳಿಸಿದ್ದಾರೆ.ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಡಿಕೆ ಶಿವಕುಮಾರ್ ಕ್ಷಮೆ ಕೇಳಿದ್ದು ಅಕ್ಷಮ್ಯ ಅಪರಾಧ. ಅವರು ಒರಿಜಿನಲ್ ಡಿಕೆ ಶಿವಕುಮಾರ್ ಆಗಬೇಕು. ಜನ ನೋಡುವುದು ಅವರು ತಾಕತ್ತು ಇರುವಂತಹ ಮನುಷ್ಯ ಎಂದ ಅವರು ಏನೂ ತಪ್ಪೇ ಮಾಡಿರಲಿಲ್ಲ. ಆದರೂ ಕ್ಷಮೆ ಕೇಳಿದ್ದು ಅಕ್ಷಮ್ಯ ಅಪರಾಧ ಎಂದರು.ಈ ರಾಜ್ಯ ಕಟ್ಟುವುದರಲ್ಲಿ ಅವರ ರಾಜಕೀಯ ಶಕ್ತಿ ಬಹಳ ಮುಖ್ಯವಿದೆ. ಸದಾ ವತ್ಸಲೆ ಅಂತೇಳಿದ್ರೆ ಭಾರತ ಮಾತೆಗೆ ನಮಸ್ಕಾರ ಮಾಡೋದು ಅಂತ ಆಯ್ತು. ಅವರು ಭಾರತ ಮಾತೆಗೆ ನಮಸ್ಕಾರ ಮಾಡಿದ್ದರೆ ಹೊರತು ನಮ್ಮ ಆರ್ ಎಸ್.ಎಸ್ ನಮಸ್ಕಾರ ಮಾಡಿಲ್ಲ . ಹರಿಪ್ರಸಾದ್ ಇರಬಹುದು, ಇನ್ನೊಬ್ಬರು ಇರಬಹುದು. ಒಟ್ಟಾರೆ ಕಾಂಗ್ರೆಸ್ ನಾ ಗುಲಾಮರ ಮಾತು ಕೇಳಿಕೊಂಡು ಕ್ಷಮೆ ಕೇಳಿದ್ದು ಅಕ್ಷಮ್ಯ ಅಪರಾಧ. ಇದನ್ನು ನಾನು ಖಂಡಿಸುವುದಾಗಿ ತಿಳಿಸಿದರು.

ಭಾರತ ಮಾತೆಗೆ ನಮಸ್ಕಾರ ಮಾಡುವಂತಹ ಒಂದು ಆರ್.ಎಸ್.ಎಸ್ ಗೀತೆಯನ್ನು ಹಾಡಿದರು ಅಷ್ಟೇ. ಆರ್.ಎಸ್. ಎಸ್ ಗೀತೆ ದೇಶ ವಿಭಜನೆ ಮಾಡಿ ಅಂತ ಹೇಳಿದಿಯಾ ಎಂದು ಪ್ರಶ್ನಿಸಿದ ಅವರು ದೇಶ ಒಂದುಗೂಡಿಸಬೇಕೆಂದು 100 ವರ್ಷದಿಂದ ನಿರಂತರ ಪ್ರಯತ್ನ ಮಾಡುತ್ತಿದೆ ಎಂದರು.

ಅವರಿಗೆ ಸಿಎಂ ಆಗಬೇಕೆನ್ನುವ ಆಸೆ ಇದೆ. ಕೊನೆ ಕ್ಷಣದಲ್ಲಿ ಯಾಕೆ ಸಿಎಂ ಕಳೆದುಕೊಳ್ಳಬೇಕು ಅಂತ ಕ್ಷಮೆ ಕೇಳಿದ್ದಾರೆ. ಸಿಎಂ ಸ್ಥಾನ ಮುಖ್ಯವಲ್ಲ ರಾಜಕೀಯದಲ್ಲಿ ನಮ್ಮ ನಡೆ ನುಡಿಗಳೇ ನಮ್ಮನ್ನು ಶ್ರೇಷ್ಠ ನಾಯಕನನ್ನಾಗಿ ಮಾಡುತ್ತವೆ. ಕಾಂಗ್ರೆಸ್ ಇಡೀ ದೇಶದಲ್ಲಿ ದಬ್ಬಾಳಿಕೆ ಮಾಡಿಕೊಂಡೇ ರಾಜ್ಯಕ್ಕೆ ಬಂದಿದ್ದು. ವೀರೇಂದ್ರ ಪಾಟೀಲ್, ದೇವರಾಜ ಅರಸು, ಎಲ್ಲರನ್ನು ತುಳಿದು ಹಾಕಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಹಾಗೂ ರಾಜಣ್ಣ ಅವರನ್ನು ಬಿಡುತ್ತಾರಾ? ಎಂದು ಕುಟುಕಿದರು. ನವೆಂಬರ್ ಗೆ ರಾಜೀನಾಮೆ ಕೊಡಲಿಲ್ಲ ಅಂದರೆ ನಿಮಗೆ ಯಾವ ರೀತಿಯಾಗಿ ರಾಜಕೀಯವಾಗಿ ಮುಗಿಸುತ್ತೇವೆ ಎನ್ನುವ ವಿಚಾರಕ್ಕೆ ರಾಜಣ್ಣ ಅವರ ಮೇಲೆ ಕೈಗೊಂಡ ಕ್ರಮ ಉದಾಹರಣೆ ಎಷ್ಟೇ. ಇದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿರುವ ಕಾಂಗ್ರೆಸ್‌ ನಾಯಕರು, ಸಿದ್ದರಾಮಯ್ಯ ನಿಮಗೆ ಶಕ್ತಿ ಇದೆ ಅಂತ ಆಟ ಆಡಬೇಡಿ ನಾವು ಹೇಳಿದ ತಕ್ಷಣ ರಾಜೀನಾಮೆ ಕೊಡಬೇಕು ಅಂತೇಳಿ ಸಿದ್ದರಾಮಯ್ಯಗೆ ವಾರ್ನಿಂಗ್ ಮಾಡಿದ್ದಾರೆ ಎಂದರು.