ಚನ್ನರಾಯಪಟ್ಟಣ: ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಹಿನ್ನಲೆಯಲ್ಲಿ ಪಟ್ಟಣದ ವಕೀಲರ ಸಂಘದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಲ್. ಪಿ. ಪ್ರಕಾಶ್ ಗೌಡ ನೇತೃತ್ವದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.
ಡಿ. ಕೆ. ಶಿವಕುಮಾರ್‌ರವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸಂತಸಗೊಂಡ ವಕೀಲರ ಸಂಘದಲ್ಲಿ ವಕೀಲರು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಪಟ್ಟರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಲ್. ಪಿ. ಪ್ರಕಾಶ್‌ಗೌಡ ಮಾತನಾಡಿ, ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ದೇವರಲ್ಲಿ ಪ್ರಾರ್ಥಿಸಿದ್ದೆವು, ದೇವರು ಫಲ ಕೊಟ್ಟಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದರು. ಡಿಕೆಶಿರವರ ಸ್ಫೂರ್ತಿಯಿಂದಾಗಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿ ಸಂಘಟನೆಯಾಗಿದೆ. ಅವರ ಮಾರ್ಗದರ್ಶನದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಪಡೆಯಲು ಸಾಧ್ಯವಾಗಿದೆ. ಡಿಕೆಶಿ ಸಂಘಟನಾ ಚತುರ ಎಂದು ಗುಣಗಾನ ಮಾಡಿ, ಡಿ.ಕೆ.ಶಿವಕುಮಾರ್೮ ಬಾರಿ ಶಾಸಕ ರಾಗಿ, ಸಚಿವರಾಗಿ, ಉಪಮುಖ್ಯಮಂತ್ರಿಗಳಾಗಿ ರಾಜ್ಯದ ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡಿದ್ದರು. ಉತ್ತಮ ಆಡಳಿತ ಕೊಡುವ ನುರಿತ ರಾಜಕಾರಣಿ ಸಹ ಆಗಿದ್ದಾರೆ. ಅವರಿಗೆ ಎ? ಸಂಕ? ಬಂದರೂ ಎದೆಗುಂದದೆ ಮುಖ್ಯ ಮಂತ್ರಿ ಸ್ಥಾನ ಅಲಂಕರಿಸಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದರು.ಇದೇ ಸಂದರ್ಭದಲ್ಲಿ ಹಿರಿಯ ವಕೀಲರಾದ ದೇವರಾಜೇಗೌಡ, ಅಶ್ವಥ್ ಜನಿವಾರ, ಡಿ. ಕೆ. ದೇವರಾಜು, ನಿಂಗರಾಜು, ಕಾಂತರಾಜ್ ಕರಿಕ್ಯಾತನಹಳ್ಳಿ, ಎ.ಡಿ.ಕುಮಾರ್, ರಾಘವೆಂದ್ರ, ನವೀನ್ ಕುಮಾರ್ ಮತ್ತಿತರರು ಹಾಜರಿದ್ದರು.