ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಹೀಗಾಗಿ ಶಿವಕುಮಾರ್‌ ಅವರು ಬರೀ ಘೋಷಣೆ ಮಾಡುತ್ತಿದ್ದಾರೆ, ಯಾವುದೂ ಯೋಜನೆ, ಕಾರ್ಯಕ್ರಗಳು ಅನುಷ್ಠಾನವಾಗುತ್ತಿಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದೂರಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ.

ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಹೀಗಾಗಿ ಶಿವಕುಮಾರ್‌ ಅವರು ಬರೀ ಘೋಷಣೆ ಮಾಡುತ್ತಿದ್ದಾರೆ, ಯಾವುದೂ ಯೋಜನೆ, ಕಾರ್ಯಕ್ರಗಳು ಅನುಷ್ಠಾನವಾಗುತ್ತಿಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದೂರಿದರು.ಕಲಬುರಗಿ ಪ್ರವಾಸದಲ್ಲಿದ್ದ ಅವರು, ರಾಜ್ಯದ ಮುಖ್ಯಮಂತ್ರಿಗಳು ಮಂಗಳೂರಿಗೆ ಹೋಗಿ 32 ಕೋಟಿ ಘೋಷಣೆ ಮಾಡಿದ್ದಾರೆ. ಕರಾವಳಿ ಭಾಗಕ್ಕೆ 16 ಸಾವಿರ ಕೋಟಿ, ರಾಜ್ಯದ ಇತರ ಭಾಗಕ್ಕೆ 16 ಸಾವಿರ ಕೋಟಿ ಘೋಷಣೆ ಮಾಡಿ ಆರ್ಥಿಕ ಇಲಾಖೆ ಸಿಎಂ ಅವರಿಗೆ ನೇರವಾಗಿ ಪತ್ರ ಬರೆದಿದ್ದಾರೆ, ಸಿಎಂ ಅವರೇ ಈ ರೀತಿ ವಿನಾಕಾರಣ ಘೋಷಣೆ ಮಾಡಬೇಡಿ. ಬರಕ್ಕಾಗಿ ರೈತರಿಗೆ ಪರಿಹಾರ ಕೊಡಲು ನಮ್ಮ ಖಜಾನೆಯಲ್ಲಿ ದುಡ್ಡಿಲ್ಲ ಎಂದು ಅರ್ಥಿಕ ಇಲಾಖೆ ಹೇಳಿದೆ. ಇದರಿಂದ ಮುಖ್ಯಮಂತ್ರಿಗಳು ವಿಚಲಿತರಾದಂತೆ ಕಾಣುತ್ತಿದೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.ಶಾಸಕರಾದ ಬಿ ಆರ್ ಪಾಟೀಲ್, ಎಚ್ ಕೆ ಪಾಟೀಲ್ ಸಹಿತ ಆಡಳಿತ ಪಕ್ಷದ ಹಿರಿಯ ಶಾಸಕರು ಸಿಎಂ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ, ಒಳಗೊಳಗೆ ಮುಖ್ಯಮಂತ್ರಿಗಳ ವಿರುದ್ಧ ಬೇಗುದಿ ಹೆಚ್ಚಾಗುತ್ತಿದೆ ಎಂದರು.

*ಸ್ಟಿಂಗ್ ಆಪರೇಷನ್‌ ಪಿತಾಮಹ ಯಾರು?: ಸ್ವಿಂಗ್ ಆಪರೇಷನ್ ವಿಚಾರದಲ್ಲಿ ಇದರ ಪಿತಾಮಹ ಯಾರು ಎನ್ನುವುದು ರಾಜ್ಯದ ಜನತೆಗೆ, ಕಾಂಗ್ರೆಸ್ ಮುಖಂಡರಿಗೂ ಗೊತ್ತಿದೆ ಎಂದ ವಿಜಯೇಂದ್ರ ಈ ವಿಚಾರದಲ್ಲಿ ತಾವು ಯಾರ ಹೆಸರು ಲೆಕ್ಕ ಮಾಡಲು ಹೋಗುವುದಿಲ್ಲ ಎಂದರು. ಅಧಿಕಾರ ಗಳಿಸಿಕೊಳ್ಳಲು ಯಾರು ಯಾವ ಹಾದಿ ಬೇಕಾದರೂ ತುಳಿಯುತ್ತಾರೆ. ಈ ವಿಚಾರ ಯಾರು ಪ್ರಸ್ತಾಪ ಮಾಡಿದ್ದರು ಬರುವ ದಿನಗಳಲ್ಲಿ ಅವರೇ ಬಾಯಿ ಬಿಡುತ್ತಾರೆಂದು ಮಾತಿನ ಚಾಟಿ ಬೀಸಿದರು.ಎಸ್.ಐ.ಆರ್ ವಿಚಾರದಲ್ಲಿ ರಾಜ್ಯ ಸರ್ಕಾರ ವಿನಾಕಾರಣ ಗೊಂದಲ ಸೃಷ್ಟಿ ಮಾಡುತ್ತಿದೆ. ಬಿಜೆಪಿ ಅಹಿಂದ ಮತಗಳನ್ನ ತೆಗೆದುಹಾಕುವ ಕುತಂತ್ರ ಮಾಡುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ. ಕೆಲವೆಡೆ ನಮ್ಮ ಕಾರ್ಯಕರ್ತರ ಮೇಲೆ ಎಫ್.ಐ.ಆರ್ ಸಹ ಮಾಡುತ್ತಿದ್ದಾರೆ. ಫಾರ್ಮ್ 7 ಸರಿ ಇದ್ದರೆ ಬಿಎಲ್‌ಓಗಳು ಸ್ವೀಕರಿಸುತ್ತಾರೆ ಇಲ್ಲದಿದ್ದರೆ ಇಲ್ಲ. ಬಿಎಲ್‌ಓಗಳು ಹಾಗೂ ರಿಟರ್ನಿಂಗ್ ಆಫೀಸರ್‌ಗಳು ರಾಜ್ಯ ಸರ್ಕಾರದ ಅಡಿಯಲ್ಲಿಯೇ ಕೆಲಸ ಮಾಡುತ್ತಿರುವವರು. ಅವರೇನು ಕೇಂದ್ರ ಸರ್ಕಾರದ ಅಧಿಕಾರಿಗಳಲ್ಲ, ಸರಿ ಇದ್ದರೆ ಸ್ವೀಕರಿಸುತ್ತಾರೆ ಇಲ್ಲದಿದ್ದರೆ ತಿರಸ್ಕರಿಸುತ್ತಾರೆ. ಆದರೆ ಇವತ್ತು ಸಿಎಂ ಅವರು ಚುನಾವಣಾ ಆಯೋಗದ ಮುಂದೆ ಕುಳಿತು ಕಪಟ ನಾಟಕ ಆಡುವ ಮೂಲಕ ರಾಹುಲ್ ಗಾಂಧಿಯವರಿಗೆ ಖುಷಿಪಡಿಸಲು ಯತ್ನಿಸುತ್ತಿದ್ದಾರೆ. ರಾಹುಲ್ ಗಾಂಧಿ ಪ್ರಾನಿ ಆಗಲು ಸಾಧ್ಯವಿಲ್ಲ ಎಂದು ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು.*ದಾಖಲೆ ಇದ್ದರೆ ಬಿಡುಗಡೆ ಮಾಡಲಿ: ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಬಗ್ಗೆ ವಿಜಯೇಂದ್ರ ತುಟಿ ಪಿಟಲ್ ಅನ್ನಲ್ಲ ಎನ್ನುವ ಗೃಹ ಸಚಿವ ಪ್ರೀಯಾಂಕ್ ಖರ್ಗೆ ಹೇಳಿಕೆಗೆ ವಿಜಯೇಂದ್ರ ತಿರುಗೇಟು ನೀಡಿದರು. ಶಿವಶಂಕರಪ್ಪ ಅವರು ಯಡಿಯೂರಪ್ಪ ಅವರ ಅವಧಿಯಲ್ಲಿ ನೇಮಕವಾಗಿದ್ದು ಸತ್ಯ, ಹಾಗಂತ ಆ ಹಗರಣದಲ್ಲಿ ನಮ್ಮ ಯಾರದ್ದೂ ಪಾತ್ರ ಇಲ್ಲ, ಹಾಗೊಂದು ವೇಳೆ ಇದ್ದರೆ ದಾಖಲೆ ಇಟ್ಟು ಮಾತಾಡಲಿ, ಅದು ಬಿಟ್ಟು ಗೃಹ ಸಚಿವರು ಹಿಟ್- ರನ್ ಮಾಡೋದು ಬೇಡ ಎಂದರು.ಗೃಹ ಸಚಿವರಾಗಿ ಪುಗಸಟ್ಟೆ ಮಾತಾಡೋದು ಅವರಿಗೂ ಶೋಭೆ ತರುವಂತದ್ದಲ್ಲ, ಈ ವಿಚಾರದಲ್ಲಿ ರಾಜ್ಯ ಸರ್ಕಾರ ತನಿಖೆ ಮಾಡಲಿ. ಗೃಹ ಸಚಿವರು ನನ್ನ ಹೆಸರು ಹೇಳಿಕೊಂಡು, ನನ್ನನ್ನು ಬೆದರಿಸಿ ಏನೋ ಮಾಡ್ತಿವಿ ಎನ್ನುವ ಭ್ರಮೆಯಲ್ಲಿದ್ದರೆ ಅದು ಅಸಾಧ್ಯ ಎಂದರು.ಹತ್ತು ದಿನಗಳ ನಮ್ಮ ಪಾದಯಾತ್ರೆಯಿಂದ ಕಾಂಗ್ರೆಸ್ ಸರ್ಕಾರ ಆತಂಕಕ್ಕೆ ಒಳಗಾಗಿದೆ. ಕುಂಭಕರ್ಣ ನಿದ್ರೆಯಲ್ಲಿರುವ ರಾಜ್ಯ ಸರ್ಕಾರವನ್ನು ಬಡಿದುಬ್ಬಿಸುವ ಕೆಲಸ ಮಾಡಿದ್ದೇವೆ. ಇದರಿಂದ ಅವರಿಗೆ ಸ್ವಲ್ಪ ಮುಜುಗರ ಆಗಿದೆ ಎಂದು ವಿಜಯೇಂದ್ರ ಹೇಳಿದರು.

----ಫೋಟೊ-----ಫೋಟೋ- ವಿಜಯೇಂದ್ರ 1

ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿದರು.