ಡಿಕೆಶಿ ಮುಂದಿನ ಸಿಎಂ: ನಲವಡಿಯಲ್ಲಿ ಬೆಂಬಲಿಗರ ಕೂಗು
KannadaprabhaNewsNetwork | Published : Nov 04 2023, 12:31 AM IST
ಡಿಕೆಶಿ ಮುಂದಿನ ಸಿಎಂ: ನಲವಡಿಯಲ್ಲಿ ಬೆಂಬಲಿಗರ ಕೂಗು
ಸಾರಾಂಶ
ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರಗೆ ಜೈ ಎಂಬ ಕೂಗು ಕೇಳಿ ಬಂದಿತು. ಒಂದು ಹಂತದಲ್ಲಿ ಡಿ.ಕೆ. ಶಿವಕುಮಾರ ಪರ ಶಕ್ತಿ ಪ್ರದರ್ಶನವಾದಂತಾಯಿತು. ಡಿ.ಕೆ., ಡಿಕೆ, ಡಿಕೆ ಎಂಬ ಉದ್ಗಾರವೂ ಕೇಳಿ ಬಂತು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರಗೆ ಜೈ ಎಂಬ ಕೂಗು ಕೇಳಿ ಬಂದಿತು. ಒಂದು ಹಂತದಲ್ಲಿ ಡಿ.ಕೆ. ಶಿವಕುಮಾರ ಪರ ಶಕ್ತಿ ಪ್ರದರ್ಶನವಾದಂತಾಯಿತು. ಡಿ.ಕೆ., ಡಿಕೆ, ಡಿಕೆ ಎಂಬ ಉದ್ಗಾರವೂ ಕೇಳಿ ಬಂತು. ಗದಗದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತೆರಳುತ್ತಿದ್ದರು. ಅಣ್ಣಿಗೇರಿ ತಾಲೂಕಿನ ನಲವಡಿಯಲ್ಲಿ ಭರ್ಜರಿ ಸ್ವಾಗತ ಕೋರಲಾಯಿತು. ಈ ವೇಳೆ ಜೆಸಿಬಿ ಮೂಲಕ ಡಿ.ಕೆ. ಶಿವಕುಮಾರಗೆ ಪುಷ್ಪಾರ್ಚನೆಯನ್ನೂ ಮಾಡಲಾಯಿತು. ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಡಿಕೆಶಿ ಎಂದು ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಷಣ್ಮುಖ ಶಿವಳ್ಳಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಬೇಕೆಂದು ಅಭಿಮಾನಿಗಳು ಆಗ್ರಹಿಸಿದರು.