ಸಾರಾಂಶ
ಕನಕಪುರ: ತಾಲೂಕಿನ ಜನಪ್ರಿಯ ಶಾಸಕ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜನ್ಮ ದಿನವನ್ನು ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಹಳ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಿದರು. ತಾಲೂಕಿನ ಕಸಬಾ ಹೋಬಳಿಯ ಚೀರಣಕುಪ್ಪೆ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಕ್ಷದ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ರವರ ಹೆಸರಿನಲ್ಲಿ ಪೂಜೆ ಮಾಡಿಸಿ, ಅವರಿಗೆ ಆರೋಗ್ಯ, ಆಯಸ್ಸು, ಯಶಸ್ಸು ನೀಡುವಂತೆ ಪ್ರಾರ್ಥನೆ ಸಲ್ಲಿಸಿದರು, ನಂತರ ಕನಕಪುರ ಪಟ್ಟಣದಲ್ಲಿ ಗಿಡ ನೆಟ್ಟು ಮಾತನಾಡಿದ ಲಯನ್ಸ್ ಸಂಸ್ಥೆಯ ಮರಸಪ್ಪ ರವಿ, ಡಿ.ಕೆ. ಶಿವಕುಮಾರ್ ಈ ನಾಡಿನ ಜನತೆಯ ಶಕ್ತಿಯಾಗಿದ್ದು, ಜನರ ಕಷ್ಟ- ಸುಖದಲ್ಲಿ ಭಾಗಿ ಯಾಗುವವ ವ್ಯಕ್ತಿತ್ವ ಅವರದ್ದಾಗಿದೆ. ದೇವರು ಅವರಿಗೆ ಆರೋಗ್ಯ, ಆಯಸ್ಸು ನೀಡಿ ಮುಂದಿನ ದಿನಗಳಲ್ಲಿ ಈ ನಾಡಿನ ಜನರ ಸೇವೆ ಮಾಡಲು ಶಕ್ತಿ ಕೊಡಲಿ ಎಂದು ಹಾರೈಸಿದರು. ತಾಲೂಕಿನ ಪರಿಸರ ಪ್ರೇಮಿ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ್, ಪದಾಧಿಕಾರಿಗಳಾದ ಜಯರಾಮ್, ದಾಸಪ್ಪ, ಮಹದೇವ್,ವೆಂಕಟರಮಣ,ಸ್ವಾಮಿ,ಶ್ರೀಧರ್,ರಾಜೇಶ್ ವೆಂಕಟೇಶ್, ಲಕ್ಷ್ಮೀಕಾಂತ್, ರಂಗಸ್ವಾಮಿ, ಕೋರ್ಟ್ ತಿಮ್ಮ ಶೆಟ್ಟಿ, ತಿಮ್ಮೇಗೌಡ, ಮರಿಗೌಡ್ರ, ನಾಗರಾಜ. ಜೈ ಕುಮಾರ್, ವೇಣುಗೋಪಾಲ್ ಮುಂತಾದವರಿದ್ದರು.