ಡೆಂಘೀ ತಡೆಗೆ ಸ್ವಚ್ಛತೆ, ಫಾಗಿಂಗ್‌ ನಡೆಸಿ: ಶಾಸಕ ಬಸವರಾಜು

| Published : Jul 13 2024, 01:36 AM IST

ಡೆಂಘೀ ತಡೆಗೆ ಸ್ವಚ್ಛತೆ, ಫಾಗಿಂಗ್‌ ನಡೆಸಿ: ಶಾಸಕ ಬಸವರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಡೆಂಘೀಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಹಿಡಿದಿಟ್ಟುಕೊಳ್ಳಲು ಪುರಸಭೆಯವರು ಪ್ರತಿದಿನ ಪಟ್ಟಣದ ಸ್ವಚ್ಛತೆ, ಚರಂಡಿಗಳ ಸ್ವಚ್ಛತೆ, ಮನೆಗಳಿಂದ ಕಸ ಸಂಗ್ರಹ ಸೇರಿದಂತೆ ಫಾಗಿಂಗ್ ಮಾಡಬೇಕು. ಆ ಮೂಲಕ ಡೆಂಘೀಜ್ವರ ಹರಡದಂತೆ ನಿಯಂತ್ರಿಸಬೇಕು ಎಂದು ಶಾಸಕ ಬಸವರಾಜು ವಿ.ಶಿವಗಂಗಾ ಪುರಸಭೆಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

- ಚನ್ನಗಿರಿ ಕಾಂಗ್ರೆಸ್ ಕಚೇರಿಯಲ್ಲಿ ಪುರಸಭೆ ಅಧಿಕಾರಿಗಳು, ಕಾಂಗ್ರೆಸ್‌ ಜನಪ್ರತಿನಿಧಿಗಳ ಸಭೆ- - - ಕನ್ನಡಪ್ರಭ ವಾರ್ತೆ, ಚನ್ನಗಿರಿ

ಡೆಂಘೀಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಹಿಡಿದಿಟ್ಟುಕೊಳ್ಳಲು ಪುರಸಭೆಯವರು ಪ್ರತಿದಿನ ಪಟ್ಟಣದ ಸ್ವಚ್ಛತೆ, ಚರಂಡಿಗಳ ಸ್ವಚ್ಛತೆ, ಮನೆಗಳಿಂದ ಕಸ ಸಂಗ್ರಹ ಸೇರಿದಂತೆ ಫಾಗಿಂಗ್ ಮಾಡಬೇಕು. ಆ ಮೂಲಕ ಡೆಂಘೀಜ್ವರ ಹರಡದಂತೆ ನಿಯಂತ್ರಿಸಬೇಕು ಎಂದು ಶಾಸಕ ಬಸವರಾಜು ವಿ.ಶಿವಗಂಗಾ ಪುರಸಭೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶುಕ್ರವಾರ ಸಂಜೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪುರಸಭೆ ಅಧಿಕಾರಿಗಳ ಮತ್ತು ಪುರಸಭೆ ಕಾಂಗ್ರೆಸ್ ಪಕ್ಷದ ಚುನಾಯಿತ ಸದಸ್ಯರ ಸಭೆ ನಡೆಸಿ ಮಾತನಾಡಿದ ಅವರು, ಪಟ್ಟಣದ ಜನರು ಚರಂಡಿಯಲ್ಲಿ ಕಸ ಕಟ್ಟಿಕೊಂಡರೆ, ನೀರು ಬಿಡದಿದ್ದರೆ, ಬೀದಿದೀಪಗಳು ಹಾಳಾಗಿದ್ದರೆ, ಕಸದ ಗಾಡಿಗಳು ಬರದಿದ್ದರೂ ಶಾಸಕ ನಾದ ನನಗೆ ಕರೆ ಮಾಡುತ್ತಾರೆಂದರೆ ನೀವೇನು ಕೆಲಸ ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದರೆ ಸಣ್ಣಪುಟ್ಟ ಸಮಸ್ಯೆಗಳಿಗೆ ನನಗೆ ಯಾರು ಕರೆಮಾಡುವುದಿಲ್ಲ. ಸೋಮವಾರದಿಂದ ಪುರಸಭೆ ಅಧಿಕಾರಿಗಳು ಪ್ರತಿದಿನ ಬೆಳಗ್ಗೆ ಆ ಭಾಗದ ಸದಸ್ಯರನ್ನು ಕರೆದುಕೊಂಡು, ಪ್ರತಿದಿನ ಒಂದೊಂದು ವಾರ್ಡ್‌ಗಳಿಗೆ ಭೇಟಿ ನೀಡಿ, ಆ ಭಾಗದ ನಾಗರಿಕರ ಕುಂದುಕೊರತೆ ಆಲಿಸಬೇಕು ಎಂದು ತಿಳಿಸಿದರು.

ಪಟ್ಟಣದಲ್ಲಿ ಮಣ್ಣುಮಿಶ್ರಿತ ನೀರು ಪೂರೈಕೆ ಆಗುತ್ತಿದೆ. ಇದರ ಬಗ್ಗೆ ಗಮನಹರಿಸಬೇಕು. ಪುರಸಭೆ ಚುನಾಯಿತ ಸದಸ್ಯರು ಸಹಾ ಜನಪ್ರತಿನಿಧಿಗಳು. ಅಧಿಕಾರಿಗಳು ಮೊದಲು ಗೌರವ ನೀಡಿ, ಅವರು ಹೇಳುವ ಸಮಸ್ಯೆಗಳನ್ನು ಬಗೆಹರಿಸಬೇಕು. ಅದನ್ನು ಬಿಟ್ಟು ಆ ಕೆಲಸ ನಮ್ಮದಲ್ಲ ಎಂದು ಹೇಳಿ ಸುಮ್ಮನಾಗಬೇಡಿ. ಪುರಸಭೆಯಲ್ಲಿರುವ ವಾಹನಗಳ ಮಾಹಿತಿ, ಸಿಬ್ಬಂದಿ ಮಾಹಿತಿ, ಹೊರಗುತ್ತಿಗೆ ನೌಕರರ ಮಾಹಿತಿಯನ್ನು ಇನ್ನೆರಡು ದಿನದಲ್ಲಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಮೃತ್ ಯೋಜನೆಯಲ್ಲಿ ಟೆಂಡರ್ ಪಡೆದ ಕೆಲವರು ಇನ್ನು ಕೆಸಲಗಳನ್ನೇ ಪ್ರಾರಂಭಿಸಿಲ್ಲ. ಇನ್ನು ಕೆಲವರು ಆರ್ಥ ಕಾಮಗಾರಿ ಕೆಲಸವನ್ನು ಮಾಡಿದ್ದು, ಈ ಬಗ್ಗೆ ಗುತ್ತಿಗೆದಾರರಿಗೆ ಕಾರಣ ಕೇಳಿ ನೋಟಿಸ್ ನೀಡಿ, ಕಳಪೆ ಕಾಮಗಾರಿ ಮಾಡಿದವರ ಮಾಹಿತಿ ಪಡೆದು, ಟೆಂಡರ್ ರದ್ದು ಪಡಿಸಬೇಕು. ಅಲ್ಲದೇ, ಅವರನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿ ಅವರಿಗೆ ಸೂಚನೆ ನೀಡಿದರು.

ಪಟ್ಟಣದ ಶುದ್ಧ ಕುಡಿಯುವ ನೀರಿನ ಘಟಕಗಳು ಒಂದೂ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಪ್ರಶ್ನಿಸಿದರು. ಶಾಸಕರ ಪ್ರಶ್ನೆಗೆ ಅಧಿಕಾರಿಗಳು ನಿರುತ್ತರರಾದರು. ಪಟ್ಟಣದಲ್ಲಿರುವ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳು ಯಾವ ಸ್ಥಿತಿಯಲ್ಲಿವೆ ಎಂಬ ಮಾಹಿತಿಯನ್ನು ನೀಡಿ. ಜುಲೈ 15ರಿಂದ ಅಧಿವೇಶನದಲ್ಲಿ ಭಾಗವಹಿಸಲಿದ್ದು, ಅಧಿವೇಶನದಿಂದ ಬರುವುದರೊಳಗೆ ಎಲ್ಲ ಮಾಹಿತಿ ಸಿದ್ಧಪಡಿಸಿಕೊಳ್ಳಬೇಕು. ನಾನು ಮತ್ತೆ ಸಭೆ ಕರೆದಾಗ ಉತ್ತರ ನೀಡಲು ವಿಫಲವಾದರೆ ಸುಮ್ಮನಿರುವುದಿಲ್ಲ ಎಂದು ಗುಡುಗಿದರು.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಅಭಿಯಂತರ ಹಾಲೇಶ್, ಕಚೇರಿ ವ್ಯವಸ್ಥಾಪಕ ಆರಾಧ್ಯ ಸೇರಿದಂತೆ ಪುರಸಭೆ ಸಿಬ್ಬಂದಿ, ಕಾಂಗ್ರೆಸ್‌ ಪಕ್ಷದ ಚುನಾಯಿತ ಸದಸ್ಯರು ಹಾಜರಿದ್ದರು.

- - - -12ಕೆಸಿಎನ್‌ಜಿ5:

ಚನ್ನಗಿರಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪುರಸಭೆ ಅಧಿಕಾರಿಗಳು ಮತ್ತು ಕಾಂಗ್ರೆಸ್ ಚುನಾಯಿತ ಸದಸ್ಯರ ಸಭೆಯಲ್ಲಿ ಶಾಸಕ ಬಸವರಾಜು ವಿ. ಶಿವಗಂಗಾ ಮಾತನಾಡಿದರು.