ರಾಮನಾಥಪುರ ಹೋಬಳಿ ಕಾಳೆನಹಳ್ಳಿ ಗ್ರಾಮ ಪಂಚಾಯತಿ ಟಿ ಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಡಿದ ಅವರು, ಹೈನುಗಾರಿಕೆಯಿಂದ ರೈತರು ಆರ್ಥಿಕವಾಗಿ ದ್ವಿಗುಣ ಮಾಡಿಕೊಳ್ಳುವಂತೆ ಹಾಗೂ ಈ ಹಿಂದೆ ಸಚಿವರಾಗಿದ್ದ ಸಮಯದಲ್ಲಿ ಹೈನುಗಾರಿಕೆ ಉತ್ತೇಜನ ನೀಡಲು 2 ರುಪಾಯಿಯಿಂದ 5 ರುಪಾಯಿಗೆ ಸಹಾಯಧನವನ್ನು ಹೆಚ್ಚಿಸಿದ್ದು ರೈತರಿಗೆ ತುಂಬಾ ಅನುಕೂಲವಾಗಿದೆ ಎಂದು ತಿಳಿಸಿದರು.

ರಾಮನಾಥಪುರ: ಸಹಕಾರ ಸಂಘದ ಸದುಪಯೋಗ ಪಡೆದುಕೊಂಡು ಸರ್ಕಾರದ ದೊರೆಯುವ ಸಹಾಯಧನ ಪಡೆದುಕೊಳ್ಳುವಂತೆ ಶಾಸಕ ಎ. ಮಂಜು ಮನವಿ ಮಾಡಿದರು. ರಾಮನಾಥಪುರ ಹೋಬಳಿ ಕಾಳೆನಹಳ್ಳಿ ಗ್ರಾಮ ಪಂಚಾಯತಿ ಟಿ ಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಡಿದ ಅವರು, ಹೈನುಗಾರಿಕೆಯಿಂದ ರೈತರು ಆರ್ಥಿಕವಾಗಿ ದ್ವಿಗುಣ ಮಾಡಿಕೊಳ್ಳುವಂತೆ ಹಾಗೂ ಈ ಹಿಂದೆ ಸಚಿವರಾಗಿದ್ದ ಸಮಯದಲ್ಲಿ ಹೈನುಗಾರಿಕೆ ಉತ್ತೇಜನ ನೀಡಲು 2 ರುಪಾಯಿಯಿಂದ 5 ರುಪಾಯಿಗೆ ಸಹಾಯಧನವನ್ನು ಹೆಚ್ಚಿಸಿದ್ದು ರೈತರಿಗೆ ತುಂಬಾ ಅನುಕೂಲವಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಹಕಾರ ಸಂಘದ ನಿರ್ದೇಶಕರಾದ ಹೊನ್ನವಳ್ಳಿ ಸತೀಶ್ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಸದಸ್ಯರು, ಗ್ರಾಮದ ಎಲ್ಲ ಮುಖಂಡರು ಉಪಸ್ಥಿತರಿದ್ದರು.