ಕಂದಾಯ ಅದಾಲತ್ ಕಾರ್ಯಕ್ರಮವನ್ನು ಹೋಬಳಿ ಮಟ್ಟದಲ್ಲಿ ಮಾಡುವಂತೆ ರೈತ ಸಂಘ ಮನವಿ

| Published : Jul 06 2025, 01:48 AM IST

ಕಂದಾಯ ಅದಾಲತ್ ಕಾರ್ಯಕ್ರಮವನ್ನು ಹೋಬಳಿ ಮಟ್ಟದಲ್ಲಿ ಮಾಡುವಂತೆ ರೈತ ಸಂಘ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಕಂದಾಯ ಅದಾಲತ್ ಅನ್ನು ಹೋಬಳಿ ಮಟ್ಟದಲ್ಲಿ ಮಾಡುವ ಮೂಲಕ ಗ್ರಾಮಸ್ಥರು ಹಾಗು ಬಡ ಜನರಿಗೆ ಅನುಕೂಲ ಕಲ್ಪಿಸಿ ಕೊಡಬೇಕು

ಕನ್ನಡಪ್ರಭ ವಾರ್ತೆ ಟಿ. ನರಸೀಪುರಕಂದಾಯ ಅದಾಲತ್ ಕಾರ್ಯಕ್ರಮವನ್ನು ಹೋಬಳಿ ಮಟ್ಟದಲ್ಲಿ ಮಾಡುವಂತೆ ಹಾಗೂ ತಾಲೂಕಿನಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಓಣಿ, ರಸ್ತೆ ಹಾಗೂ ಗೋಕಟ್ಟೆಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ಮುಖ್ಯಸ್ಥರು ತಹಸೀಲ್ದಾರ್ ಟಿ.ಜೆ. ಸುರೇಶಾಚಾರ್ ಅವರಿಗೆ ಮನವಿ ಸಲ್ಲಿಸಿದರು.ಸಂಘದ ಜಿಲ್ಲಾ ಸಂಚಾಲಕ ಮಹದೇವಸ್ವಾಮಿ ಮುಖಂಡತ್ವದಲ್ಲಿ ತಾಲೂಕು ಕಚೇರಿಗೆ ಆಗಮಿಸಿದ ರೈತ ಮುಖಂಡರು ತಹಸೀಲ್ದಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.ಕಂದಾಯ ಅದಾಲತ್ ಅನ್ನು ಹೋಬಳಿ ಮಟ್ಟದಲ್ಲಿ ಮಾಡುವ ಮೂಲಕ ಗ್ರಾಮಸ್ಥರು ಹಾಗು ಬಡ ಜನರಿಗೆ ಅನುಕೂಲ ಕಲ್ಪಿಸಿ ಕೊಡಬೇಕು ಹಾಗೂ ತಾಲೂಕಿನ ವಿವಿಧ ಗ್ರಾಮ ಹಾಗು ಕೇಂದ್ರ ಸ್ಥಾನಗಳಲ್ಲಿ ಸರ್ಕಾರಿ ರಸ್ತೆ ಹಾಗೂ ಗೋಕಟ್ಟೆಗಳನ್ನು ತೆರವು ಗೊಳಿಸುವ ಮೂಲಕ ಕೃಷಿ ಚಟುವಟಿಕೆ ಮಾಡಲು ಅವಕಾಶ ಕಲ್ಪಸುವಂತೆ ಮನವಿ ಮಾಡಿದರು.ಚಾಮನಹಳ್ಳಿ ಸಿಡಿಎಸ್ ನಾಲೆಯಿಂದ ಮಲಿಯೂರು ವಡ್ಡರಕೊಪ್ಪಲು ಬನ್ನೂರಿನಿಂದ ಕೆರ ಏರಿ ಮೇಲೆ ಹೋಗಲಿರುವ ರಸ್ತೆಗೆ ಸ್ಕೆಚ್ ಆಗಿಲ್ಲ ಎಂದು ಸರ್ವೆ ಇಲಾಖೆಯವರು ಹೇಳುತ್ತಿದ್ದಾರೆ. ಆದರೆ ಅಲ್ಲಿ ಸಾರ್ವಜನಿಕರು ಓಡಾಡುತ್ತಿದ್ದು, ಆ ಜಾಗವನ್ನು ರಸ್ತೆ ಎಂದು ನಮೂದಿಸಿ ಕೊಡಿ ಎಂದು ರೈತ ಮುಖಂಡರೊಬ್ಬರು ಮನವಿ ಮಾಡಿದರು. ಆನ್ ಲೈನ್ ನಲ್ಲೇ ಪೌತಿಖಾತೆ.....!ಈ ವೇಳೆ ರೈತರ ಮನವಿ ಸ್ವೀಕರಿಸಿ ತಹಸೀಲ್ದಾರ್ ಸುರೇಶಾಚಾರ್ ಮಾತನಾಡಿ, ತಾಲೂಕಿನಲ್ಲಿ ಸರ್ಕಾರಿ ರಸ್ತೆ, ಗೋಕಟ್ಟೆ ಸೇರಿದಂತೆ ಸರ್ಕಾರಿ ಜಾಗಗಳು ಒತ್ತುವರಿಯಾಗಿದ್ದಲ್ಲಿ ಅವುಗಳನ್ನು ಗುರುತಿಸಿ ಪಟ್ಟಿ ಮಾಡಿದರೆ ಅದನ್ನು ಪರಿಶೀಲಿಸಿ ಒತ್ತುವರಿ ತೆರವುಗೊಳಿಸಲಾಗುತ್ತದೆ ಎಂದರು.ಸಂಘದ ಅಧ್ಯಕ್ಷ ಮಹದೇವ, ತಾಲುಕು ಕಾರ್ಯಾಧ್ಯಕ್ಷ ರಾಮಕೃಷ್ಣ, ವರಲಕ್ಷ್ಮಿ, ಬಸವನಹಳ್ಳಿ ಬೇಬಿ, ಓಂಕಾರ ಮೂರ್ತಿ, ಹೋಬಳಿ ಅಧ್ಯಕ್ಷ ಶಾಂತನಾಗರಾಜು, ಸಿ.ವಿ. ವೆಂಕಟೇಶ್, ಚೆನ್ನೇಗೌಡ, ಎಂ. ಸಿದ್ದರಾಜು, ಎಚ್.ಎಂ. ಗುರುಸ್ವಾಮಿ, ಎಚ್.ಎಂ. ಶಂಕರ, ರಾಮಣ್ಣ, ಚಿನ್ನಸ್ವಾಮಿ, ಎಸ್. ರಾಮಸ್ವಾಮಿ, ನರಸಿಂಹ, ರಾಮೇಗೌಡ, ಚಿನ್ನಸ್ವಾಮಿ ಇದ್ದರು.------------