ಮೈಸೂರು ಇಂಡಿಯನ್‌ ಆಯಿಲ್‌ ಡಿಪೋ ಮುಚ್ಚಬೇಡಿ

| Published : Aug 14 2025, 01:00 AM IST

ಸಾರಾಂಶ

ಮೈಸೂರಿನ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಡಿಪೋ ಮುಚ್ಚದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದ ಯದುವೀರ್‌ ಒಡೆಯರ್‌ಗೆ ಮೈಸೂರು-ಚಾಮರಾಜನಗರ ಜಿಲ್ಲಾ ಇಂಡಿಯನ್ ಆಯಿಲ್ ಡೀಲರ್ಸ್ ಆಸೋಸಿಯೇಷನ್ ಪದಾಧಿಕಾರಿಗಳು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮೈಸೂರಿನ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಡಿಪೋ ಮುಚ್ಚದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದ ಯದುವೀರ್‌ ಒಡೆಯರ್‌ಗೆ ಮೈಸೂರು-ಚಾಮರಾಜನಗರ ಜಿಲ್ಲಾ ಇಂಡಿಯನ್ ಆಯಿಲ್ ಡೀಲರ್ಸ್ ಆಸೋಸಿಯೇಷನ್ ಪದಾಧಿಕಾರಿಗಳು ಮನವಿ ಮಾಡಿದರು.

ನವ ದೆಹಲಿಯಲ್ಲಿ ಮೈಸೂರು-ಚಾಮರಾಜನಗರ ಜಿಲ್ಲಾ ಇಂಡಿಯನ್ ಆಯಿಲ್ ಡೀಲರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ರಂಜಿತ್ ಹೆಗಡೆ, ಎಕ್ಸಿಕ್ಯೂಟಿವ್ ಮೆಂಬರ್ ಗಳಾದ ಬಿ.ಜಿ.ಶಿವಕುಮಾರ್, ಎಚ್.ಕೆ.ರಮೇಶ್ ಭೇಟಿ ಮಾಡಿ ಸಚಿವರು,ಸಂಸದರೊಂದಿಗೆ ಚರ್ಚಿಸಿದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ೫೦ ವರ್ಷಗಳಿಂದಲೂ ಮೈಸೂರ್ ಡಿಪೋದಲ್ಲಿ ಪೆಟ್ರೋಲ್‌,ಡಿಸೇಲ್‌ ಸಿಗುತ್ತಿತ್ತು. ಈಗ ಡಿಪೋ ಮುಚ್ಚಲು ಹೊರಟಿರುವ ಕಾರಣ ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ತುಮಕೂರು ,ರಾಮನಗರ ಜಿಲ್ಲೆಯಗಳ ೫೧೪ ಮಂದಿ ಡೀಲರ್ಸ್ ಗಳಿಗೆ ತೊಂದರೆಯಾಗುತ್ತದೆ ಎಂಬುದನ್ನು ಗಮನ ತರಲಾಗಿದೆ ಎಂದು ಗುಂಡ್ಲುಪೇಟೆ ಸಿದ್ದಗಂಗಾ ಬಂಕ್‌ ಡೀಲರ್‌ ಬಿ.ಜಿ.ಶಿವಕುಮಾರ್‌ ತಿಳಿಸಿದ್ದಾರೆ. ಮೈಸೂರು ಡಿಪೋ ಮುಚ್ಚಿಸಿದರೆ ಸುಮಾರು ೫ ಸಾವಿರ ಮಂದಿ ಉದ್ಯೋಗಿಗಳಿಗೆ ತೊಂದರೆ ಆಗಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮೈಸೂರು ಸಂಸದ ಯಧುವೀರ್‌ ಒಡೆಯರ್‌ ಭೇಟಿ ಡೀಲರ್‌ ಗಾಗುವ ತೊಂದರೆಗಳನ್ನು ಪಟ್ಟಿ ಮಾಡಿ ಕೊಡಲಾಗಿದೆ.

ಇಂಡಿಯನ್ ಆಯಿಲ್ ಡೀಲರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ರಂಜಿತ್ ಹೆಗಡೆ, ಎಕ್ಸಿಕ್ಯೂಟಿವ್ ಮೆಂಬರ್ ಗಳಾದ ಬಿ.ಜಿ.ಶಿವಕುಮಾರ್, ಎಚ್.ಕೆ.ರಮೇಶ್ ಇದ್ದರು.