ಅಡಕೆ ಯಂತ್ರಕ್ಕೆ ಪ್ರತ್ಯೇಕ ಮೀಟರ್‌ ಆದೇಶ ಪಾಲಿಸಬೇಡಿ

| Published : Nov 28 2023, 12:30 AM IST

ಅಡಕೆ ಯಂತ್ರಕ್ಕೆ ಪ್ರತ್ಯೇಕ ಮೀಟರ್‌ ಆದೇಶ ಪಾಲಿಸಬೇಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆಇಆರ್‍ಸಿ ಪ್ರಾರಂಭವಾದಾಗಿನಿಂದ ವಿದ್ಯುತ್ ಇಲಾಖೆಗೆ ಸಂಭಂದಿಸಿ ಕಾಯ್ದೆ ಬಿಗಿಯಾಗುತ್ತಿದೆ. ಕೆಇಆರ್‍ಸಿ ಸ್ವಾಯತ್ತ ಸಂಸ್ಥೆಯಾಗಿದ್ದರೂ ಕಾಯ್ದೆಗಳನ್ನು ನಿಯಂತ್ರಿಸುವ ಅಧಿಕಾರ ಆಡಳಿತ ನಡೆಸುವ ಸರ್ಕಾರಕ್ಕಿದೆ. ಒಂದೊಮ್ಮೆ ಕಾಯ್ದೆ ಜನಪರವಾಗಿಲ್ಲದ ಪಕ್ಷದಲ್ಲಿ ಬದಲಾಯಿಸುವ ಅಧಿಕಾರವೂ ಸರ್ಕಾರಕ್ಕಿದೆ. ಡಿಕೆಶಿ ಮೇಲಿನ ತನಿಖಾ ಪ್ರಕರಣಕ್ಕೆ ಸಂಬಂಧಿಸಿ ಆದೇಶವನ್ನು ಹಿಂಪಡೆಯಲಿಲ್ಲವೇ ಎಂದೂ ಟೀಕಿಸಿದರು.

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ ಅಡಕೆ ಸುಲಿಯುವ ಯಂತ್ರಕ್ಕೆ ಪ್ರತ್ಯೇಕ ಮೀಟರ್ ಹಾಕಿಸಬೇಕೆಂಬ ರಾಜ್ಯ ಸರ್ಕಾರದ ಆದೇಶ ರೈತ ವಿರೋಧಿಯಾಗಿದೆ. ಈ ಆದೇಶವನ್ನೂ ಯಾರೂ ಪಾಲಿಸುವ ಅಗತ್ಯವಿಲ್ಲ. ರೈತರನ್ನು ಅವಮಾನಿಸುವಂತೆ ಇಲಾಖೆ ಸಿಬ್ಬಂದಿ ದಂಡ ಹಾಕಲು ಮುಂದಾದರೆ ತಡೆಯಲಾಗುವುದು ಅಲ್ಲದೇ, ಕೆಲಸ ಮಾಡುವುದಕ್ಕೂ ಬಿಡುವುದಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.

ಕ್ಷೇತ್ರ ಬಿಜೆಪಿ ವತಿಯಿಂದ ಸೋಮವಾರ ಅಡಕೆ ಸುಲಿಯುವ ಯಂತ್ರಕ್ಕೆ ಪ್ರತ್ಯೇಕ ಮೀಟರ್ ಆದೇಶ ಖಂಡಿಸಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಕೆಇಆರ್‍ಸಿ ಪ್ರಾರಂಭವಾದಾಗಿನಿಂದ ವಿದ್ಯುತ್ ಇಲಾಖೆಗೆ ಸಂಭಂದಿಸಿ ಕಾಯ್ದೆ ಬಿಗಿಯಾಗುತ್ತಿದೆ. ಕೆಇಆರ್‍ಸಿ ಸ್ವಾಯತ್ತ ಸಂಸ್ಥೆಯಾಗಿದ್ದರೂ ಕಾಯ್ದೆಗಳನ್ನು ನಿಯಂತ್ರಿಸುವ ಅಧಿಕಾರ ಆಡಳಿತ ನಡೆಸುವ ಸರ್ಕಾರಕ್ಕಿದೆ. ಒಂದೊಮ್ಮೆ ಕಾಯ್ದೆ ಜನಪರವಾಗಿಲ್ಲದ ಪಕ್ಷದಲ್ಲಿ ಬದಲಾಯಿಸುವ ಅಧಿಕಾರವೂ ಸರ್ಕಾರಕ್ಕಿದೆ. ಡಿಕೆಶಿ ಮೇಲಿನ ತನಿಖಾ ಪ್ರಕರಣಕ್ಕೆ ಸಂಬಂಧಿಸಿ ಆದೇಶವನ್ನು ಹಿಂಪಡೆಯಲಿಲ್ಲವೇ ಎಂದೂ ಟೀಕಿಸಿದರು.

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ ಮಾತನಾಡಿದರು. ಪಕ್ಷದ ಮುಖಂಡರಾದ ನವೀನ್ ಹೆದ್ದೂರು, ಕೆ.ನಾಗರಾಜ ಶೆಟ್ಟಿ, ಬೇಗುವಳ್ಳಿ ಕವಿರಾಜ್, ಕೆ.ಶ್ರೀನಿವಾಸ್, ಚಂದವಳ್ಳಿ ಸೋಮಶೇಖರ್, ಪ್ರಶಾಂತ್ ಕುಕ್ಕೆ, ಸಂದೇಶ್ ಜವಳಿ, ಎಸಿಸಿ ಕೃಷ್ಣಮೂರ್ತಿ ಮುಂತಾದವರು ಇದ್ದರು.

- - - -27ಟಿಟಿಎಚ್01:

ಅಡಕೆ ಸುಲಿಯುವ ಯಂತ್ರಕ್ಕೆ ಪ್ರತ್ಯೇಕ ಮೀಟರ್ ಹಾಕಿಸಬೇಕೆಂಬ ರಾಜ್ಯ ಸರ್ಕಾರದ ಆದೇಶವನ್ನು ಖಂಡಿಸಿ ಕ್ಷೇತ್ರ ಬಿಜೆಪಿ ವತಿಯಿಂದ ತೀರ್ಥಹಳ್ಳಿಯಲ್ಲಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.