ಸಾರಾಂಶ
ಕವಿತಾಳದ ಕಲ್ಮಠದಲ್ಲಿ ಗುಡ್ಡಾಪುರ ದಾನಮ್ಮ ದೇವಿ ಪುರಾಣ ಪ್ರವನ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕೊಡೆಕಲ್ ಗುರು ದುರುದುಂಡೇಶ್ವರ ವಿರಕ್ತ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿದರು.
ಕವಿತಾಳ: ಮಕ್ಕಳ ಮೇಲೆ ಸದಾ ನಿರ್ಬಂಧ ಹೇರುವ ಮೂಲಕ ಅವರ ಬೆಳವಣಿಗೆಗೆ ತಡೆಯೊಡ್ಡುವ ಕೆಲಸವನ್ನು ಪಾಲಕರು ಮಾಡಬಾರದು ಎಂದು ಕೊಡೆಕಲ್ ಗುರು ದುರುದುಂಡೇಶ್ವರ ವಿರಕ್ತ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.
ಪಟ್ಟಣದ ಕಲ್ಮಠದಲ್ಲಿ ಗುಡ್ಡಾಪುರ ದಾನಮ್ಮ ದೇವಿ ಪುರಾಣ ಪ್ರವನ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳನ್ನು ಸರಿದಾರಿಯಲ್ಲಿ ನಡೆಸುವುದು ಪ್ರತಿಯೊಬ್ಬ ತಂದೆ ತಾಯಿ ಜವಾಬ್ದಾರಿ ಅದೇ ಸಂದರ್ಭದಲ್ಲಿ ಅವರ ಆಸೆ, ಆಸಕ್ತಿಗಳನ್ನು ಅರಿತುಕೊಂಡು ಕಲಿಕೆಯ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಬೆರೆಯಲು ಪ್ರೋತ್ಸಾಹ ನೀಡಬೇಕು ಎಂದರು.ಕಲ್ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಗುರು ಪಾಟೀಲ್, ಸವಿತಾ ಹುಬ್ಬಳಿ, ಈಶ್ವರ ಉಬ್ರಾಣಿ, ರಾಜ್ ಕರಣ್ ವೇದಿಕೆ ಮೇಲೆ ಇದ್ದರು.
ಕನ್ನಡ ವಾಹಿನಿಯ ಕೋಗಿಲೆ ತಂಡದ ಮಹನ್ಯ ಗುರು ಪಾಟೀಲ ಅವರ ತಂಡದಿಂದ ಸಂಗೀತ ಕಾರ್ಯಕ್ರ ನಡೆಯಿತು. ಮಹನ್ಯ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹನ್ಯ ಪಾಟೀಲರ ಅಭಿಮಾನಿ ಕಸನದೊಡ್ಡಿಯ ಅನಿಲ್ ಕುಮಾರ ಆರ್‌ಸಿಬಿ ಟೀ ಶರ್ಟ್ ನೀಡಿ ಸನ್ಮಾನಿಸಿದರು. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಸಾವುರಾರು ಜನರು ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಸ್ವಾದಿಸಿದರು.