ಸಾರಾಂಶ
ಭಾರತದಲ್ಲಿ ಶೇ.೩೦ರಿಂದ ೪೦ರಷ್ಟು ಕಣ್ಣಿನ ದೃಷ್ಟಿ ದೋಷದಿಂದ ಮಕ್ಕಳು ಬಳಲುತ್ತಿವೆ. ಆದ್ದರಿಂದ ದಯಮಾಡಿ ಪೋಷಕರು ಮಕ್ಕಳಿಗೆ ಮೊಬೈಲ್ ಮತ್ತು ಟಿವಿ ವೀಕ್ಷಣೆಗೆ ಅವಕಾಶವನ್ನು ನೀಡಬೇಡಿ. ಹಾಗೇನಾದರೂ ನೀಡಿದರೆ ಪ್ರತಿನಿತ್ಯ ಅರ್ಧ ಗಂಟೆಯ ಸಮಯವನ್ನು ನೀಡುವುದು ಉತ್ತಮವಾಗಿದೆ. ಜೊತೆಯಲ್ಲಿ ತಮ್ಮ ಮಕ್ಕಳು ಓದುವಿನ ಸಮಯದಲ್ಲಿ ಪೋಷಕರು ಕೂಡ ಯಾವುದೇ ರೀತಿಯ ಟಿವಿ ಮತ್ತು ಮೊಬೈಲ್‌ಗಳಿಗೆ ಆದ್ಯತೆಯನ್ನು ನೀಡಬೇಡಿ ಇದರಿಂದ ಮಕ್ಕಳ ಓದುವಿಕೆಗೆ ಅಡ್ಡಿ ಉಂಟಾಗುತ್ತದೆ. ಮಕ್ಕಳಿಗೆ ಆಸ್ತಿ ಮಾಡುವ ಬದಲು ವಿದ್ಯೆಯನ್ನೇ ಆಸ್ತಿ ಮಾಡಿ ಎಂದು ಶಿವಪ್ರಸಾದ್ ನೇತ್ರಾಲಯದ ವ್ಯವಸ್ಥಾಪಕ ಗೌಡಗೆರೆಯ ಮಂಜುನಾಥ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮಕ್ಕಳಿಗೆ ಆಸ್ತಿ ಮಾಡುವ ಬದಲು ವಿದ್ಯೆಯನ್ನೇ ಆಸ್ತಿ ಮಾಡಿ ಎಂದು ಶಿವಪ್ರಸಾದ್ ನೇತ್ರಾಲಯದ ವ್ಯವಸ್ಥಾಪಕ ಗೌಡಗೆರೆಯ ಮಂಜುನಾಥ್ ತಿಳಿಸಿದ್ದಾರೆ.ಅವರು ಬಾಗೂರು ಹೋಬಳಿ ಎಂ.ಶಿವರದ ವಿದ್ಯಾ ಸ್ಫೂರ್ತಿ ಇಂಟರ್‌ನ್ಯಾಷನಲ್ ಸ್ಕೂಲ್ ವತಿಯಿಂದ ಆಯೋಜಿಸಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಆಸ್ತಿ ಮಾಡುವ ಬದಲು ವಿದ್ಯೆಯನ್ನೇ ಆಸ್ತಿ ಮಾಡಿ. ಇದರಿಂದ ಮಕ್ಕಳಿಗೆ ಮುಂದೆ ದಿನಗಳಲ್ಲಿ ಬಹಳ ಅನುಕೂಲವಾಗುತ್ತದೆ. ಏಕೆಂದರೆ ವಿದ್ಯೆಯ ಮುಂದೆ ಯಾವ ಹಣ ಆಸ್ತಿ ಐಶ್ವರ್ಯ ಇವುಗಳು ಬರುವುದಿಲ್ಲ. ಮಕ್ಕಳ ತಲೆಯಲ್ಲಿ ವಿದ್ಯೆ ಮತ್ತು ಬುದ್ಧಿ ಎರಡು ಇದ್ದರೆ ಎಲ್ಲಿ ಬೇಕಾದರೂ ಜೀವನ ನಡೆಸಬಹುದು. ಜೊತೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಕಷ್ಟದ ಜೀವನವನ್ನು ತೋರ್ಪಡಿಸಬೇಕು. ಇದರಿಂದ ಮಕ್ಕಳು ಉತ್ತಮ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುತ್ತವೆ.
ಭಾರತದಲ್ಲಿ ಶೇ.೩೦ರಿಂದ ೪೦ರಷ್ಟು ಕಣ್ಣಿನ ದೃಷ್ಟಿ ದೋಷದಿಂದ ಮಕ್ಕಳು ಬಳಲುತ್ತಿವೆ. ಆದ್ದರಿಂದ ದಯಮಾಡಿ ಪೋಷಕರು ಮಕ್ಕಳಿಗೆ ಮೊಬೈಲ್ ಮತ್ತು ಟಿವಿ ವೀಕ್ಷಣೆಗೆ ಅವಕಾಶವನ್ನು ನೀಡಬೇಡಿ. ಹಾಗೇನಾದರೂ ನೀಡಿದರೆ ಪ್ರತಿನಿತ್ಯ ಅರ್ಧ ಗಂಟೆಯ ಸಮಯವನ್ನು ನೀಡುವುದು ಉತ್ತಮವಾಗಿದೆ. ಜೊತೆಯಲ್ಲಿ ತಮ್ಮ ಮಕ್ಕಳು ಓದುವಿನ ಸಮಯದಲ್ಲಿ ಪೋಷಕರು ಕೂಡ ಯಾವುದೇ ರೀತಿಯ ಟಿವಿ ಮತ್ತು ಮೊಬೈಲ್‌ಗಳಿಗೆ ಆದ್ಯತೆಯನ್ನು ನೀಡಬೇಡಿ ಇದರಿಂದ ಮಕ್ಕಳ ಓದುವಿಕೆಗೆ ಅಡ್ಡಿ ಉಂಟಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಸಮಾಜ ಸೇವಕ ಹಾಗೂ ಪತ್ರಕರ್ತ ಸಿ. ವಿ ಲೋಹಿತ್, ಚಿಕ್ಕಮಗಳೂರು ಜ್ಞಾನಜ್ಯೋತಿ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಗಾಯಿತ್ರಿ ಮಂಜುನಾಥ್, ಖಜಾಂಚಿ ಪೂಜಿತ ವಿನಯ್, ಮುಖ್ಯ ಉಪಾಧ್ಯಾಯ ವಿಷ್ಣು ಇನ್ನು ಮುಂತಾದವರು ಹಾಜರಿದ್ದರು.