ಸಾರಾಂಶ
ಅಪಸ್ಮಾರ ಅಥವಾ ಮೂರ್ಛೆ ರೋಗ ಮಿದುಳಿಗೆ ಸಂಬಂಧಪಟ್ಟ ಕಾಯಿಲೆಯಾಗಿದೆ. ಇದರಲ್ಲಿ ದೊಡ್ಡ ಪ್ರಮಾಣ ಮತ್ತು ಸಣ್ಣ ಪ್ರಮಾಣ ಎಂಬ ಎರಡು ವಿಧಗಳಿವೆ ಎಂದು ಎಸ್.ಎಸ್. ನಾರಾಯಣ ಹೆಲ್ತ್ ಸೆಂಟರ್‌ನ ನರರೋಗ ತಜ್ಞ ಡಾ.ವೀರಣ್ಣ ಗಡದ್ ದಾವಣಗೆರೆಯಲ್ಲಿ ಹೇಳಿದ್ದಾರೆ.
- ಉಪನ್ಯಾಸ ಕಾರ್ಯಕ್ರಮದಲ್ಲಿ ನರರೋಗ ತಜ್ಞ ಡಾ.ವೀರಣ್ಣ ಗಡದ್ - - -
ದಾವಣಗೆರೆ: ಅಪಸ್ಮಾರ ಅಥವಾ ಮೂರ್ಛೆ ರೋಗ ಮಿದುಳಿಗೆ ಸಂಬಂಧಪಟ್ಟ ಕಾಯಿಲೆಯಾಗಿದೆ. ಇದರಲ್ಲಿ ದೊಡ್ಡ ಪ್ರಮಾಣ ಮತ್ತು ಸಣ್ಣ ಪ್ರಮಾಣ ಎಂಬ ಎರಡು ವಿಧಗಳಿವೆ ಎಂದು ಎಸ್.ಎಸ್. ನಾರಾಯಣ ಹೆಲ್ತ್ ಸೆಂಟರ್‌ನ ನರರೋಗ ತಜ್ಞ ಡಾ.ವೀರಣ್ಣ ಗಡದ್ ಹೇಳಿದರು.ಗುರುವಾರ ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಡಿ ಆಯೋಜಿಸಿದ್ದ "ಅಪಸ್ಮಾರ (ಮೂರ್ಛೆ ರೋಗ): ಗಾಬರಿ ಬೇಡ, ಅರಿವಿರಲಿ " ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಿದುಳಿನಲ್ಲಿ ನಂಜು, ಜ್ವರ, ರಕ್ತಸ್ರಾವ, ರಕ್ತಹೀನತೆ (ಪ್ಯಾರಾಲಿಸಿಸ್/ ಲಕ್ವಾ) ಮಿದುಳಿನಲ್ಲಿ ಗಂಟು (ಬ್ರೈನ್ ಟ್ಯೂಮರ್) ಅನುವಂಶೀಯ ಅಪಸ್ಮಾರ ಇತರೆ ಕೆಲವು ಕಾರಣಗಳಿಂದ ಅಪಸ್ಮಾರ ಕಾಯಿಲೆ ಬರುತ್ತದೆ. ಮಾತು ನಿಂತಾಗ, ಕೈ, ಕಾಲು ಕುಣಿಯೋವಾಗ, ಕುತ್ತಿಗೆ ಶಟಿಸಿದಾಗ, ಕಣ್ಣು ಕಟ್ಟಿದಂತಾಗಿ ಎಚ್ಚರ ತಪ್ಪುವುದು ಈ ಕಾಯಿಲೆ ಗುರುತಿನ ಸೂಚನೆಗಳು ಎಂದರು.ಮೂರ್ಛೆ ರೋಗ ಉಂಟಾದಾಗ ಕೈಗೊಳ್ಳುವ ಪ್ರಥಮ ಚಿಕಿತ್ಸೆಗಳು ಮುಖ್ಯವಾಗಿವೆ. ಫಿಟ್ಸ್ ಬರುವ ವ್ಯಕ್ತಿಯನ್ನು ಹೋಳು ಮಗ್ಗುಲಾಗಿಸಬೇಕು, ಸುತ್ತಮುತ್ತಲಿನ ಸಾಮಾನುಗಳನ್ನು ಸರಿಸಿ, ರೋಗಿ ಸುತ್ತಲೂ ಜಾಗ ಕೊಡಬೇಕು. ಬಾಯಲ್ಲಿ ಕೈ/ಕರವಸ್ತ್ರ/ ಕಾಟನ್ ಇಡಬಾರದು. ಬಾಯಿಯಲ್ಲಿ ನೀರು ಹಾಕಬಾರದು. ಶೀಘ್ರವೇ ಹತ್ತಿರ ಇರುವ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ. ಜಿ.ಗುರುಪ್ರಸಾದ್, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಡಾ. ಎಂ.ಬಿ. ಕೌಜಲಗಿ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ಪೋಷಕರು, ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು.- - - (* ಈ ಫೋಟೋ ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಬಹುದು)
-16ಕೆಡಿವಿಜಿ35ಃ:ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆಯಿಂದ ನಡೆದ ಆರೋಗ್ಯ ಕಾರ್ಯಾಗಾರದಲ್ಲಿ ಡಾ.ವೀರಣ್ಣ ಗಡದ್ ಮಾತನಾಡಿದರು.