ಬಡವರ ಕಣ್ಣೊರೆಸುವ ಕೆಲಸ ಮಾಡಿ

| Published : Nov 16 2025, 03:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಯಮಕನಮರಡಿ ಸಮಾಜದಲ್ಲಿನ ದೀನ ದಲಿತರ, ಬಡವರ, ನಿರ್ಗತಿಕರಿಗೆ ಸಹಾಯ ಮಾಡಿ ಅವರ ಕಣ್ಣೊರೆಸುವ ಕೆಲಸ ಮಾಡಬೇಕೆಂದು ಹಿಡಕಲ್ ಡ್ಯಾಂನ ಸಂತ ಮಿಖಾಯೇಲ್‌ ಚರ್ಚ್‌ ಫಾದರ್‌ ಲೂರ್ದೂಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಸಮಾಜದಲ್ಲಿನ ದೀನ ದಲಿತರ, ಬಡವರ, ನಿರ್ಗತಿಕರಿಗೆ ಸಹಾಯ ಮಾಡಿ ಅವರ ಕಣ್ಣೊರೆಸುವ ಕೆಲಸ ಮಾಡಬೇಕೆಂದು ಹಿಡಕಲ್ ಡ್ಯಾಂನ ಸಂತ ಮಿಖಾಯೇಲ್‌ ಚರ್ಚ್‌ ಫಾದರ್‌ ಲೂರ್ದೂಸ್ವಾಮಿ ಹೇಳಿದರು.ಹಿಡಕಲ್ ಡ್ಯಾಂನ ಮಹಿಳಾ ಕಲ್ಯಾಣ ಸಂಸ್ಥೆ ಶಕ್ತಿ ಸದನ ಮಹಿಳಾ ಪುನರ್ವಸತಿ ಕೇಂದ್ರದಲ್ಲಿ ಸಂತ ಮಿಖಾಯೇಲ್‌ ಚರ್ಚ್‌, ಕನ್ನಡಪ್ರಭ ದಿನಪತ್ರಿಕೆ ಬಳಗ ಬೆಳಗಾವಿ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಮಹಿಳಾ ಪುನರ್ವಸತಿ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಡಾ.ವಿನಾಯಕ ಹಜ್ಜೆ ಜನ್ಮ ದಿನಾಚರಣೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ಡಾ.ವಿನಾಯಕ ಹಜ್ಜೆ ಮತ್ತು ಶಿಲ್ಪಾ ಹೆಜ್ಜೆ ದಂಪತಿ ಈ ಭಾಗದಲ್ಲಿ ಸಲ್ಲಿಸುತ್ತಿರುವ ವೈದ್ಯಕೀಯ ಸೇವೆಯನ್ನು ಗುರುತಿಸಿ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್ ವತಿಯಿಂದ ಆಯುರ್ಭೂಷಣ ಪ್ರಶಸ್ತಿ ನೀಡಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಅವರ ಸೇವೆಯು ಇನ್ನೂ ಹೆಚ್ಚಿನ ಜನರಿಗೆ ಸಿಗಲಿ, ಗ್ರಾಮೀಣ ಕ್ಷೇತ್ರದಲ್ಲಿ ಆರೋಗ್ಯ ಭಾಗ್ಯ ಸಿಗುತ್ತಿರುವುದು ಪ್ರಶಂಶನೀಯವಾಗಿದೆ ಎಂದರು.ಯಮಕನಮರಡಿ ಲಕ್ಷ್ಮಿ ಅರ್ಬನ್ ಕ್ರೆಡಿಟ್ ಸೊಸೈಟಿಯ ಸಂಸ್ಥಾಪಕ ರವೀಂದ್ರ ಜಿಂಡ್ರಾಳಿ ಮಾತನಾಡಿ, ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವ ತೆರೆಮರೆಯಲ್ಲಿರುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವುದರಿಂದ ಮತ್ತಷ್ಟು ಸಾಮಾಜಿಕ ಕೆಲಸಗಳನ್ನು ಮಾಡಲು ಹುಮ್ಮಸ್ಸು ನೀಡುತ್ತದೆ. ಈ ಭಾಗದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯವರು ಶೋಷಿತರ ಅನ್ಯಾಯಕ್ಕೊಳಗಾದ ನಿರ್ಗತಿಕ ಮಹಿಳೆಯರಿಗೆ ಆಶ್ರಯ ನೀಡಿ ಸಮಾಜದಲ್ಲಿ ತಮ್ಮದೇ ಆದ ಸುಂದರ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುವ ಕಾರ್ಯ ಶ್ಲಾಘನೀಯವಾಗಿದೆ. ಮಹಿಳಾ ಕಲ್ಯಾಣಕ್ಕೆ ಸಹಾಯ ಸಹಕಾರ ನೀಡುವುದಾಗಿ ಹೇಳಿದರು.

ರಾಜ್ಯ ಎಸ್ಸಿ,ಎಸ್ಟಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ರಾಜು ತಳವಾರ ಪ್ರಾಸ್ತವಿಕವಾಗಿ ಮಾತನಾಡಿ, ಸಂತ ಮಿಖಾಯೀಲ್ ಚರ್ಚ್‌ ಹಿಡಕಲ್ ಡ್ಯಾಂನ ಪಾಧರ್ ಅವರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಡವರ ಸೇವೆ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಸತ್ಕರಿಸುತ್ತಿರುವುದು ಶ್ಲಾಘನೀಯ. ಅಲ್ಲದೇ, ಮಹಾದೇವಿ ಮೆಮೋರಿಯಲ್ ಆಸ್ಪತ್ರೆಯ ಹಜ್ಜೆ ವೈದ್ಯ ದಂಪತಿ ಕೂಡ ಗ್ರಾಮೀಣ ಭಾಗದ ಜನರಿಗೆ ಪ್ರಾಮಾಣಿಕ ಆರೋಗ್ಯ ಸೇವೆ ಸಲ್ಲಿಸುತ್ತಿರುವುದಕ್ಕೆ ಆಯುರ್ಭೂಷಣ ಪ್ರಶಸ್ತಿ ದಕ್ಕಿದೆ. ಜೊತೆಗೆ ಸಮಾಜ ಸೇವಕ ರವೀಂದ್ರ ಜಿಂಡ್ರಾಳಿ ಕೂಡ ಸ್ವಾರ್ಥವಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಬೆಳಗಾವಿ ಜಿಲ್ಲಾ ಕರವೇ ಉಪಾಧ್ಯಕ್ಷ ರಾಜು ನಾಶಿಪುಡಿ ಎಸ್.ಎ.ಸರಿಕರ, ಸುರೇಖಾ ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಶ್ಚಾಪೂರ ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲಗಣಿ ದರ್ಗಾ, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಹೊಸಮನಿ, ಸಮಾಜ ಸೇವಕ ವಿನೋದ ಜಗಜಂಪಿ, ಪತ್ರಕರ್ತ ಎ.ಎಂ.ಕರ್ನಾಚಿ ಇದ್ದರು. ಸುಗಂಧಾ ಮೊಕಾಶಿ ಕಾರ್ಯಕ್ರಮ ನಿರೂಪಿಸಿದರು. ದ್ರಾಕ್ಷಾಯಣಿ ಮಠಪತಿ ವಂದಿಸಿರು.

ಕೋಟ್‌

ಸುವರ್ಣ ನ್ಯೂಸ್ ನ್ಯೂಸ್‌ ಮತ್ತು ಕನ್ನಡಪ್ರಭ ನನ್ನ ಸೇವೆ ಗುರುತಿಸಿ ಆಯುರ್‌ ಭೂಷಣ ಪ್ರಶಸ್ತಿ ನೀಡಿದ್ದು ಹೆಮ್ಮೆ ತರಿಸಿದೆ. ಈ ಪ್ರಶಸ್ತಿ ನನ್ನ ಜವಾಬ್ದಾರಿ ಮತ್ತುಷ್ಟು ಹೆಚ್ಚಿದೆ. ಸಮಾಜಕ್ಕಾಗಿ ನನ್ನಿಂದ ಸಾಧ್ಯವಾದಷ್ಟು ಸೇವೆ ಸಲ್ಲಿಸುತ್ತೇನೆ.

- ಸುವರ್ಣ ನ್ಯೂಸ್ ನ್ಯೂಸ್‌ ಮತ್ತು ಕನ್ನಡಪ್ರಭ ಆಯುರ್‌ ಭೂಷಣ ಪ್ರಶಸ್ತಿ ಪುರಸ್ಕೃತರು