ಸಾರಾಂಶ
Doctor of Philosophy degree to teacher Rajendra Mudnala
ಯಾದಗಿರಿ: ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ 12ನೇ ಘಟಿಕೋತ್ಸವದಲ್ಲಿ ಚಂದ್ರಕಾಂತ ಕುಸನೂರ ಬಹುಶಿಸ್ತಿಯ ಅಧ್ಯಯನ (ಕಥನಕ್ರಮ, ನಾಟಕ ಮತ್ತು ಚಿತ್ರಕಲೆಗಳನ್ನು ಅನುಲೆಕ್ಷಿಸಿ ) ಎಂಬ ವಿಷಯದಡಿ ಮಹಾಪ್ರಬಂಧ ಸಲ್ಲಿಸಿರುವುದಕ್ಕೆ ''''ಡಾಕ್ಟರ್ ಆಫ್ ಫಿಲಾಸಫಿ'''' ಪದವಿಯನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ ತ್ಯಾಗರಾಜ್ ಅವರಿಂದ ರಾಜೇಂದ್ರ ಕುಮಾರ್ ಅವರು ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದರು.
ಡಾ. ರಾಮಕೃಷ್ಣ ಮರಾಠೆ ಮಾರ್ಗದರ್ಶಕರಾಗಿದ್ದರು. ಸಂಶೋಧನೆ ವಿಷಯದಲ್ಲಿ ಸಲಹೆ ಸೂಚನೆಗಳನ್ನು ನೀಡಿದ ಡಾ. ರಾಜಪ್ಪ ದಳವಾಯಿ, ಡಾ. ವೈ.ಬಿ. ಹಿಮ್ಮಡಿ ಹಾಗೂ ಗೆಳೆಯರಿಗೆ ಕೃತಜ್ಞತೆ ತಿಳಿಸಿದ್ದಾರೆ. ಜಿಲ್ಲೆಯ ಶಿಕ್ಷಕರಾದ ರಾಜೇಂದ್ರ ಕುಮಾರ ಚಿಂತನಹಳ್ಳಿ ಶಾಲೆಯಲ್ಲಿ 8 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಠಾಣಾಗುಂದಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯ ಸಹೋದ್ಯೋಗಿ ಶಿಕ್ಷಕರು ಅಭಿನಂದಿಸಿದ್ದಾರೆ.-----
ಫೋಟೊ: 6ವೈಡಿಆರ11: ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ 12ನೇ ಘಟಿಕೋತ್ಸವದಲ್ಲಿ ಡಾಕ್ಟರ್ ಆಫ್ ಫಿಲಾಸಫಿ ಪದವಿ ಪಡೆದ ಶಿಕ್ಷಕ ರಾಜೇಂದ್ರ ಮುದ್ನಾಳ.