ಎಸ್.ಡಿ.ಎಂ.ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಪ್ರಯುಕ್ತ ಬೆಳ್ತಂಗಡಿ ತಾಲೂಕಿನ ವೈದ್ಯರಿಗೆ ಸ್ನೇಹ ಕೂಟ ನಡೆಯಿತು. ಉಜಿರೆಯ ಖಾಸಗಿ ಹೊಟೇಲೊಂದರಲ್ಲಿ ಆಯೋಜಿಸಲಾಗಿದ್ದ ಸ್ನೇಹಕೂಟದಲ್ಲಿ 300ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು.
ಬೆಳ್ತಂಗಡಿ: ಎಸ್.ಡಿ.ಎಂ.ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಪ್ರಯುಕ್ತ ಬೆಳ್ತಂಗಡಿ ತಾಲೂಕಿನ ವೈದ್ಯರಿಗೆ ಸ್ನೇಹ ಕೂಟ ನಡೆಯಿತು. ಉಜಿರೆಯ ಖಾಸಗಿ ಹೊಟೇಲೊಂದರಲ್ಲಿ ಆಯೋಜಿಸಲಾಗಿದ್ದ ಸ್ನೇಹಕೂಟದಲ್ಲಿ 300ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು.
ವಿಡಿಯೋ ಸಂದೇಶದ ಮೂಲಕ ಆಸ್ಪತ್ರೆಯ ಅಧ್ಯಕ್ಷ ಡಾ. ವೀರೇಂದ್ರ ಹೆಗ್ಗಡೆ ಅವರು ತಾಲೂಕಿನ ವೈದ್ಯರಿಗೆ ವೈದ್ಯರ ದಿನಾಚರಣೆಯ ಶುಭಾಶಯ ತಿಳಿಸಿ ಮಾತನಾಡಿ, ಏನೇ ಆರೋಗ್ಯದ ಸಮಸ್ಯೆ ಇದ್ದರೂ ಮೊದಲು ಭೇಟಿ ಮಾಡುತ್ತಿದ್ದು ಫ್ಯಾಮಿಲಿ ವೈದ್ಯರನ್ನು ಅವರ ಸಲಹೆ ಸೂಚನೆಗಳಂತೆ ವೈದ್ಯಕೀಯ ಚಿಕಿತ್ಸೆ ನಡೆಯುತ್ತಿತ್ತು. ಫ್ಯಾಮಿಲಿ ವೈದ್ಯರಿಗೆ ಆ ಕುಟುಂಬದ ಬಗ್ಗೆ ಕಾಳಜಿ, ಜವಾಬ್ದಾರಿ ಇತ್ತು. ಆ ಕುಟುಂಬದ ಸದಸ್ಯರಿಗೂ ವೈದ್ಯರ ಮೇಲೆ ನಂಬಿಕೆ ಇತ್ತು ಎಂದು ಫ್ಯಾಮಿಲಿ ವೈದ್ಯರ ಸೇವೆಯನ್ನು ನೆನಪಿಸಿ ಕೊಂಡರು.ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ್ ಅಜಿಲ ಅವರು, ಸ್ನೇಹ ಕೂಟದ ಮೂಲಕ ತಾಲೂಕಿನ ವೈದ್ಯರನ್ನು ಒಟ್ಟುಗೂಡಿಸಿ ವಿಚಾರ ವಿನಿಮಯಕ್ಕೆ ಅವಕಾಶ ಮಾಡಿ ಕೊಟ್ಟ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮತ್ತು ಉಜಿರೆ ಎಸ್ ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ ಅವರ ಕಾರ್ಯ ಶ್ಲಾಘನೀಯ, ವೈದ್ಯಕೀಯ ಸೇವೆ ಮಾಡುವವರಿಗೆ ಇಂತಹ ಕಾರ್ಯಕ್ರಮಗಳು ಜನರ ಸೇವೆ ಮಾಡಲು ಇನ್ನಷ್ಟು ಪ್ರೋತ್ಸಾಹ ನೀಡುತ್ತದೆ ಎಂದರು.ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ಮಾತನಾಡಿ, ವೈದ್ಯಕೀಯ ವೃತ್ತಿ ಶ್ರೇಷ್ಠವಾದದ್ದು ಈ ಸ್ನೇಹಕೂಟದ ಮೂಲಕ ಬೆಳ್ತಂಗಡಿ ತಾಲೂಕಿನ ವೈದ್ಯರೆಲ್ಲರನ್ನು ಗುರುತಿಸುವ ಕಾರ್ಯ ಆಗಿದೆ. ವೈದ್ಯ ವ್ಯಕ್ತಿ ನಡೆಸುವ ನಮಗೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ನೀಡಲಾಗಿದೆ ಎಂದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್, ವೈದ್ಯಕೀಯ ಅಧೀಕ್ಷಕ ಡಾ.ದೇವೇಂದ್ರ ಕುಮಾರ್ ಪಿ., ಮುಖ್ಯ ವೈದ್ಯಾಧಿಕಾರಿ ಡಾ. ಸಾತ್ವಿಕ್ ಜೈನ್ ಉಪಸ್ಥಿತರಿದ್ದರು. ನಿಖಿಲ್ ಶೆಟ್ಟಿ ಮತ್ತು ವಿನ್ಯಾನ್ ಭಂಡಾರಿ ಮನೋರಂಜನಾ ಕಾರ್ಯಕ್ರಮ ನಡೆಸಿ ಕೊಟ್ಟರು.