ಆರೋಪಿಗಳಿಗೆ ಕಠಿಣ ಶಿಕ್ಷೆಗೆ ವೈದ್ಯರ ಆಗ್ರಹ

| Published : Aug 18 2024, 01:48 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಗೋಕಾಕ: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ವೈದ್ಯೆಯ ಮೇಲೆ ನಡೆದ ಕ್ರೂರ ಕೃತ್ಯ ಖಂಡಿಸಿ ಇಲ್ಲಿನ ಭಾರತೀಯ ವೈದ್ಯಕೀಯ ಸಂಸ್ಥೆಯ ತಾಲೂಕು ಘಟಕದಿಂದ ಆರೋಪಿಗಳಿಗೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು, ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಕನ್ನಡಪ್ರಭ ವಾರ್ತೆ ಗೋಕಾಕ: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ವೈದ್ಯೆಯ ಮೇಲೆ ನಡೆದ ಕ್ರೂರ ಕೃತ್ಯ ಖಂಡಿಸಿ ಇಲ್ಲಿನ ಭಾರತೀಯ ವೈದ್ಯಕೀಯ ಸಂಸ್ಥೆಯ ತಾಲೂಕು ಘಟಕದಿಂದ ಆರೋಪಿಗಳಿಗೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು, ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿದರು.ನಗರದ ಸರ್ಕಾರಿ ಆಸ್ಪತ್ರೆಯಿಂದ ಪ್ರತಿಭಟನಾ ಜಾಥಾ ನಡೆಸಿದ ನೂರಾರು ವೈದ್ಯರು, ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಡಾ.ಮೋಹನ ಭಸ್ಮೆ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಐಎಂಎ ತಾಲೂಕು ಅಧ್ಯಕ್ಷ ಡಾ.ರಮೇಶ ಪಟ್ಟಗುಂದಿ ಮಾತನಾಡಿ, ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಹೀನ ಕೃತ್ಯ. ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ದೇಶದಲ್ಲಿ ಮಹಿಳಾ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಅಲ್ಲದೇ, ಭವಿಷ್ಯದಲ್ಲಿ ಇಂಥ ಘಟನೆ ನಡೆಯದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಡಾ.ಅಶೋಕ ಕೊಪ್ಪ ಮಾತನಾಡಿ ಹಾಗೂ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ನಗರದ ವೈದ್ಯರಾದ ಆರ್.ಎಸ್.ಬೆನಚಿನಮರಡಿ, ಡಾ.ಮಂಗಳಾ ಸನದಿ, ಡಾ.ಶೆಟ್ಟೆಪ್ಪ ಗೋರೋಶಿ, ಡಾ.ಉಮೇಶ ನಿಪ್ಪಾಣಿ, ಡಾ.ಬಸವರಾಜ ಮದಬಾವಿ, ಡಾ.ಗಂಗಾಧರ ಉಮರಾಣಿ, ಡಾ.ಶಶಿಲ ಕಡಲಗಿಕರ, ಡಾ.ಸಿದ್ದಣ್ಣ ಕಮತ, ಡಾ.ಅಶೋಕ ಮುರಗೋಡ, ಡಾ.ಅಶೋಕ ಜಿರಗ್ಯಾಳ, ಡಾ.ಮಂಜುನಾಥ ಶಿಂಧೋಳಿಮಠ, ಡಾ.ಕೀರ್ತಿ ಬಿರನಗಡ್ಡಿ, ಡಾ.ಅರುಣ್ ವಣ್ಣೂರ, ಡಾ.ಗೀತಾ ಪಟ್ಟಗುಂದಿ, ಡಾ.ಬಶೀರ್ ಮತ್ತೆ, ಡಾ.ಚಿಕ್ಕೋಡಿ ಸೇರಿ ಹಲವರು ಭಾಗವಹಿಸಿದ್ದರು.