ಸಾರಾಂಶ
ವೈದ್ಯ ಪದ್ಧತಿಯ ತತ್ವ ಸಿದ್ಧಾತಗಳನ್ನು ಅಳವಡಿಸಿಕೊಂಡು ವೈದ್ಯಕೀಯ ವೃತ್ತಿ ಪಾವಿತ್ರ್ಯತೆ ಕಾಪಾಡಿ. ಶಾಸಕ ಎಚ್.ವೈ. ಮೇಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವೈದ್ಯ ಪದ್ಧತಿಯ ತತ್ವ ಸಿದ್ಧಾತಗಳನ್ನು ಅಳವಡಿಸಿಕೊಂಡು ವೈದ್ಯಕೀಯ ವೃತ್ತಿ ಪಾವಿತ್ರ್ಯತೆ ಕಾಪಾಡಿ. ಹುಟ್ಟು ಸಾವುಗಳನ್ನು ತಡೆಯುವ ಶಕ್ತಿ ವೈದ್ಯರ ಬಳಿ ಇದೆ ಎಂದು ಶಾಸಕ ಎಚ್.ವೈ. ಮೇಟಿ ಹೇಳಿದರು.ನವನಗರದ ಖಾಸಗಿ ಹೊಟೇಲ್ ದಲ್ಲಿ ಈಚೆಗೆ ಭಾರತೀಯ ವೈದ್ಯರ ಸಂಘದ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವೈದ್ಯರು ಕರೋನಾದ ಕಷ್ಟದ ಸಮಯದಲ್ಲಿ ತಮ್ಮ ಪ್ರಾಣ ಲೆಕ್ಕಿಸದೆ ಜನರ ಪ್ರಾಣ ಕಾಪಾಡಿದ ನಿಮ್ಮ ಸೇವೆ ಶ್ಲಾಘನೀಯ ಎಂದು ಹೇಳಿದರು.
ಹಿರಿಯ ವೈದ್ಯ ಡಾ.ಸುಭಾಷ ಪಾಟೀಲ ಮಾತನಾಡಿ, ವೈದ್ಯರು ರೋಗಿಗಳ ಜೊತೆ ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು. ರೋಗಿಗಳ ಕಣ್ಣಲ್ಲಿ ವೈದ್ಯರು ದೇವರಂತೆ ಕಾಣುತ್ತಾರೆ. ರೋಗಿಗಳಿಗೆ ವೈದ್ಯರ ಬಿಲ್ ಹೊರೆಯಾಗಬಾರದು. ರೋಗಿಗಳನ್ನು ಗುಣಮುಖರಾಗಿಸಲು ಅವರೊಂದಿಗೆ ಬೆರೆಯಬೇಕು ಎಂದು ಹೇಳಿದರು.ಡಾ. ಅರುಣ್ ಮಿಸ್ಕಿನ್, ಡಾ.ಪ್ರಮೋದ ಮಿರ್ಜಿ, ಡಾ.ಟಿ.ಎನ್. ಪಾಟೀಲ, ಡಾ.ಗಿರಿಯಪ್ಪ ಕೊಳ್ಳನ್ನವರ, ಡಾ.ಆರ್.ಟಿ. ಪಾಟೀಲ, ಡಾ.ಕಟ್ಟಿ, ಡಾ.ಬಿ.ಕೆ. ಭಾವಿ, ಡಾ.ಶೇಖರ ಮಾನೆ, ಡಾ.ಛಾಯಾ ಜೋಶಿ, ಡಾ.ಎಂ.ಎಸ್. ದಡ್ಡೆನ್ನವರ, ಡಾ.ವಿಕಾಸ ದಡ್ಡೆನ್ನವರ, ಡಾ.ಕಲಬುರ್ಗಿ ಸೇರಿದಂತೆ ಇನ್ನಿತರರು ಇದ್ದರು.