ಶಸ್ತ್ರ ಚಿಕಿತ್ಸೆ ಮಾಡಿ ತಾಯಿ ಕುರಿ ಜೀವ ರಕ್ಷಿಸಿದ ವೈದ್ಯರು

| Published : Mar 15 2025, 01:01 AM IST

ಶಸ್ತ್ರ ಚಿಕಿತ್ಸೆ ಮಾಡಿ ತಾಯಿ ಕುರಿ ಜೀವ ರಕ್ಷಿಸಿದ ವೈದ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಗರ್ಭಿಣಿ ಕುರಿಗೆ ಪಟ್ಟಣದ ಪಶು ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಗರ್ಭದಲ್ಲಿಯೇ ಮೃತಪಟ್ಟಿದ್ದ ಮರಿಯನ್ನು ಹೊರತೆಗೆದು ತಾಯಿ ಕುರಿ ಜೀವ ರಕ್ಷಣೆ ಮಾಡುವಲ್ಲಿ ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ಶರತ್‌ ರಾಜ್ ಯಶಸ್ವಿಯಾಗಿದ್ದಾರೆ.

ನಾಗಮಂಗಲ: ಅನುವಂಶೀಯ ಕಾಯಿಲೆಯಿಂದ ಬಳಲುತ್ತಿದ್ದ ಗರ್ಭಿಣಿ ಕುರಿಗೆ ಪಟ್ಟಣದ ಪಶು ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಗರ್ಭದಲ್ಲಿಯೇ ಮೃತಪಟ್ಟಿದ್ದ ಮರಿಯನ್ನು ಹೊರತೆಗೆದು ತಾಯಿ ಕುರಿ ಜೀವ ರಕ್ಷಣೆ ಮಾಡುವಲ್ಲಿ ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ಶರತ್‌ ರಾಜ್ ಯಶಸ್ವಿಯಾಗಿದ್ದಾರೆ. ತಾಲೂಕಿನ ತುಪ್ಪದಮಡು ಗ್ರಾಮದ ರೈತ ರಾಜು ಅವರಿಗೆ ಸೇರಿದ ಗರ್ಭಿಣಿ ಕುರಿ ಕೆಲ ದಿನಗಳಿಂದ ಅನುವಂಶೀಯ ಕಾಯಿಲೆಯಿಂದ ಬಳಲುತ್ತಿತ್ತು. ಗರ್ಭದಲ್ಲಿಯೇ ಮರಿ ಮೃತಪಟ್ಟಿದ್ದರಿಂದ ಅಸ್ವಸ್ಥಗೊಂಡಿದ್ದ ಕುರಿಯನ್ನು ಪಶು ಆಸ್ಪತ್ರೆಗೆ ಕರೆತಂದ ವೇಳೆ ಶಸ್ತ್ರ ಚಿಕಿತ್ಸೆ ಮೂಲಕ ಮೃತಪಟ್ಟ ಮರಿಯನ್ನು ಹೊರತೆಗೆದ ಡಾ.ಶರತ್‌ ರಾಜ್ ಮತ್ತು ಡಾ.ಕಿರಣ್ ತಾಯಿ ಕುರಿಯ ಜೀವ ರಕ್ಷಣೆ ಮಾಡಿದ್ದಾರೆ.