ದೊಡ್ಡಬಳ್ಳಾಪುರ: ರಾಜ್‌ಕಮಲ್‌ ಚಿತ್ರಮಂದಿರ ಪುನಾರಂಭ

| Published : Nov 06 2024, 01:19 AM IST

ದೊಡ್ಡಬಳ್ಳಾಪುರ: ರಾಜ್‌ಕಮಲ್‌ ಚಿತ್ರಮಂದಿರ ಪುನಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳು ಎಲ್ಲೆಡೆ ಮುಚ್ಚುತ್ತಿರುವ, ವಾಣಿಜ್ಯ ಸಂಕೀರ್ಣಗಳಾಗಿ ಪರಿವರ್ತನೆಯಾಗುತ್ತಿರುವ ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ಹೆಸರಾಂತ ರಾಜ್‌ಕಮಲ್‌ ಚಿತ್ರಮಂದಿರ ನವೀಕರಣಗೊಂಡು ಅತ್ಯಾಧುನಿಕ ತಂತ್ರಜ್ಞಾನ, ವ್ಯವಸ್ಥೆಯೊಂದಿಗೆ ಚಿತ್ರರಸಿಕರಿಗೆ ಮುಕ್ತವಾಗಿದೆ.

ದೊಡ್ಡಬಳ್ಳಾಪುರ: ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳು ಎಲ್ಲೆಡೆ ಮುಚ್ಚುತ್ತಿರುವ, ವಾಣಿಜ್ಯ ಸಂಕೀರ್ಣಗಳಾಗಿ ಪರಿವರ್ತನೆಯಾಗುತ್ತಿರುವ ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ಹೆಸರಾಂತ ರಾಜ್‌ಕಮಲ್‌ ಚಿತ್ರಮಂದಿರ ನವೀಕರಣಗೊಂಡು ಅತ್ಯಾಧುನಿಕ ತಂತ್ರಜ್ಞಾನ, ವ್ಯವಸ್ಥೆಯೊಂದಿಗೆ ಚಿತ್ರರಸಿಕರಿಗೆ ಮುಕ್ತವಾಗಿದೆ.

60 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ರಾಜ್‌ಕಮಲ್‌ ಚಿತ್ರಮಂದಿರ, ಕನ್ನಡದ ಪ್ರಖ್ಯಾತ ಚಿತ್ರ ನಿರ್ಮಾಪಕರಾದ ಕೆ.ಸಿ.ಎನ್.ಗೌಡರ ಕುಟುಂಬದಿಂದ ಸ್ಥಾಪಿಸಲ್ಪಟ್ಟದ್ದು. ದಶಕಗಳ ಕಾಲ ನಿರಂತರವಾಗಿ ಕನ್ನಡ ಚಲನಚಿತ್ರಗಳನ್ನೇ ಪ್ರದರ್ಶಿಸುತ್ತಾ ಬರುತ್ತಿರುವುದು ಈ ಚಿತ್ರಮಂದಿರದ ಹೆಗ್ಗಳಿಕೆಯೂ ಆಗಿತ್ತು.

ಪ್ಯಾನ್‌ ಇಂಡಿಯಾ ಪರಿಣಾಮ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬಾರದ ಸಂದರ್ಭ ಎದುರಾದುದರಿಂದ ಕಳೆದ 4 ವರ್ಷಗಳ ಹಿಂದೆ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿತ್ತು. ಕೊರೋನಾ ಸಂದಿಗ್ಥತೆಯಲ್ಲೂ ಅನೇಕ ಸವಾಲುಗಳು ಎದುರಾಗಿದ್ದವು. ಬಳಿಕ ಇದೀಗ ಚಿತ್ರಮಂದಿರ ಸುಸಜ್ಜಿತವಾಗಿ ನವೀಕರಣಗೊಂಡಿದ್ದು, ಚಿತ್ರರಸಿಕರನ್ನು ಸೆಳೆಯುತ್ತಿದೆ.

ಆಧುನಿಕ ಡಾಲ್ಬಿ ತಂತ್ರಜ್ಞಾನದ ಧ್ವನಿ ವ್ಯವಸ್ಥೆ ಸೇರಿದಂತೆ ಹೊಸ ಮಾದರಿಯ ಸೀಟಿಂಗ್‌ ಹಾಗೂ ಹವಾ ನಿಯಂತ್ರಿತ ವ್ಯವಸ್ಥೆ ಮಾಡಲಾಗಿದೆ.

ಚಿತ್ರಮಂದಿರ ಮರು ಆರಂಭದ ಚಿತ್ರವಾಗಿ ಪ್ಯಾನ್‌ ಇಂಡಿಯಾದ ಗಮನ ಸೆಳೆದಿದ್ದ ಮಾರ್ಟೀನ್‌ ಬಿಡುಗಡೆಯಾಗಿತ್ತು. ಬಳಿಕ, ಶ್ರೀಮುರಳಿ ಅಭಿನಯದ ಬಘೀರ ಚಲನಚಿತ್ರ ಬಿಡುಗಡೆಗೊಂಡಿದ್ದು, ಆರಂಭದ ದಿನದಿಂದಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಕೆಲ ಪ್ರದರ್ಶನಗಳು ತುಂಬಿದ ಗೃಹದಲ್ಲಿ ಪ್ರದರ್ಶಿತವಾಗಿರುವುದು ವಿಶ್ವಾಸ ಮೂಡಿಸಿದೆ.

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅದ್ದೂರಿ ಬಜೆಟ್‌ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆ ಹೊಂದಿರುವ ಕೆಸಿಎನ್‌ ಮೂವೀಸ್‌ ಅವರ ರಾಜ್‌ಕಮಲ್‌ ಚಿತ್ರಮಂದಿರ ಮತ್ತೊಮ್ಮೆ ಕನ್ನಡ ಚಿತ್ರರಂಗದ ಭಾಗವಾಗಿ ಪುನಾರಂಭಗೊಂಡಿರುವುದು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ಜನತೆಯ ಸಂಭ್ರಮವನ್ನು ಹೆಚ್ಚಿಸಿದೆ.

ಕೋಟ್‌.................

ರಾಜ್‌ಕಮಲ್‌ ಚಿತ್ರಮಂದಿರ ನಿರಂತರವಾಗಿ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸಿದ ಅನನ್ಯ ಇತಿಹಾಸ ಹೊಂದಿದೆ. ಕನ್ನಡ ಚಿತ್ರರಂಗಕ್ಕೆ ಮಹತ್ವದ ಕೊಡುಗೆ ನೀಡಿದ ಕೆಸಿಎನ್‌ ಮೂವೀಸ್‌ ಇಂದಿಗೂ ಕನ್ನಡ ಚಿತ್ರರಸಿಕರ ಆಶೋತ್ತರಗಳಿಗೆ ದನಿಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಚಿತ್ರಮಂದಿರ ಪುನಾರಂಭಗೊಂಡಿದೆ.

- ಕೆ.ಆರ್.ಉಮಾಶಂಕರ್, ರಾಜ್‌ಕಮಲ್‌ ಚಿತ್ರಮಂದಿರದ ಮುಖ್ಯಸ್ಥರು

(ಒಂದು ಫೋಟೋ ಮಾತ್ರ ಬಳಸಿ)

4ಕೆಡಿಬಿಪಿ4- ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಪುನಾರಂಭಗೊಂಡ ದೊಡ್ಡಬಳ್ಳಾಪುರದ ರಾಜ್‌ಕಮಲ್‌ ಚಿತ್ರಮಂದಿರ.

4ಕೆಡಿಬಿಪಿ5- ನವೀಕೃತ ಚಿತ್ರಮಂದಿರದ ಒಳಾಂಗಣ ದೃಶ್ಯ.