ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಾನು ವಿರೋದ ಪಕ್ಷದಲ್ಲಿದ್ದರೂ ಸಹಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹನೂರು ಕ್ಷೇತ್ರದಲ್ಲಿನ ಪ್ರಗತಿಗಾಗಿ ಸ್ಪಂದಿಸಿ 67ಕೋಟಿ ರು. ಅನುದಾನ ನೀಡಿದ್ದಾರೆ ಇದು ನಿಜಕ್ಕೂ ಹೆಮ್ಮೆಯ ವಿಚಾರ, ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದು ಹನೂರು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.ತಾಲೂಕಿನ ದೊಡ್ಡಿಂದುವಾಡಿ ಹೆದ್ದಾರಿ ರಸ್ತೆಗೆ 25ಕೋಟಿ ಅನುದಾನದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿಯಿಂದ ಮೊಳಗಟ್ಟೆತನಕ 25ಕೋಟಿ ಅಂದಾಜಿನಲ್ಲಿ ಹೆದ್ದಾರಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದ್ದು ಗುತ್ತಿಗೆಗಾರರು ಈ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಗುಣಮಟ್ಟದಲ್ಲಿ ನಡೆಸಲು ಮುಂದಾಗಬೇಕು, ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆಗಳ ಅಭಿವೃದ್ಧಿಗೆ ಈ ದಿನ ಚಾಲನೆ ನೀಡಿರುವುದು ನಿಜಕ್ಕೂ ಸಂತಸದ ವಿಚಾರ. ಈ ಬೆಳಣಿಗೆ ಕ್ಷೇತ್ರದ ಜನರ ಮುಖದಲ್ಲೂ ಮಂದಹಾಸ ಮೂಡಿಸಿದಂತಾಗಿದೆ ಎಂದರು. ಕ್ಷೇತ್ರದಲ್ಲಿ ನೀರಾವರಿ ಯೋಜನೆಯಡಿ ಕ್ರಾಂತಿಯಾಗಲಿದೆ:
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ ಯೋಜನಾ ವಿಚಾರದಲ್ಲಿ ಕ್ರಾಂತಿಯಾಗುವ ಲಕ್ಷಣವಿದ್ದು, ಸಾಕಷ್ಟು ಕೆಲಸಗಳಾಗಿ ಇದು ರೈತರಿಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನಾನು ಶಾಸಕನಾಗಿ ಎರಡು ವರ್ಷಗಳಲ್ಲಿ ಸಾಕಷ್ಟು ಶ್ರಮವಹಿಸಿ ಅಭಿವೃದ್ಧಿಗೆ ಸ್ಪಂದಿಸಿದ್ದೇನೆ, ಶ್ರಮ ಹಾಕುತ್ತಲೆ ಇದ್ದೇನೆ, ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಹಾ ಸ್ಪಂದಿಸಿ ಅನುದಾನ ನೀಡಿದ್ದಾರೆ. ಇನ್ನು ಆಗಬೇಕಾದ ಕೆಲಸ ಸಾಕಷ್ಟಿದ್ದು ಇಲ್ಲಿನ ಚಿತ್ರಣವನ್ನು ಮುಖ್ಯಮಂತ್ರಿಗೆ ಹಲವು ಬಾರಿ ವಿವರಿಸಿದ್ದೇನೆ ಎಂದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದತ್ತೇಶ್ ಕುಮಾರ್, ಚಾಮುಲ್ ನಿರ್ದೇಶಕ ಮಹದೇವಸ್ವಾಮಿ, ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಗ್ರಾಪಂ ಅಧ್ಯಕ್ಷ ಶಿವರುದ್ರ, ಹನೂರು ಪಪಂ ಅಧ್ಯಕ್ಷೆ ಮಮ್ತಾಜ್ ಬೇಗ್ಂ, ಉಪಾಧ್ಯಕ್ಷ ಆನಂದ ಕುಮಾರ್, ಜೆಡಿಎಸ್ ಮುಖಂಡ ಬಸವರಾಜು ಮಂಜೇಶ ಇನ್ನಿತರರಿದ್ದರು.ಹನೂರು ಕ್ಷೇತ್ರದ ಅಭಿವೃದ್ಧಿಗೆ ಮತದಾರರರು ನನ್ನನ್ನ ಬೆಂಬಲಿಸಿದ್ದಾರೆ, ಮತದಾರರ ನಿರೀಕ್ಷೆ ಹುಸಿ ಮಾಡದೆ ನಾನು 2 ವರ್ಷಗಳಿಂದಲೂ ನಿರಂತರ ಕೆಲಸ ಮಾಡುತ್ತಿದ್ದೇನೆ, ಶೀಘ್ರದಲ್ಲೆ ಕ್ಷೇತ್ರದಲ್ಲಿ ನೀರಾವರಿ ಯೋಜನೆ ಅನುಷ್ಠಾನದ ಮೂಲಕ ಕ್ರಾಂತಿ ಆಗಲಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಧ್ಯೇಯ. ಅಭಿವೃದ್ಧಿ ಮಾಡದೆ ನಾ ವಿರಮಿಸುವುದಿಲ್ಲ. - ಎಂ ಆರ್ ಮಂಜುನಾಥ್, ಹನೂರು ಶಾಸಕ
;Resize=(128,128))
;Resize=(128,128))
;Resize=(128,128))
;Resize=(128,128))