ಸಾರಾಂಶ
ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ವೈಭವಕ್ಕೆ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಚಾಲನೆ ನೀಡಿದರು.
ಉಡುಪಿ: ಜಾತಿಮತದ ಭೇದ ಇಲ್ಲದ ಸರ್ವ ಧರ್ಮ ಸೌಹಾರ್ದತೆಯ ತಾಣ ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ವೈಭವಕ್ಕೆ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಚಾಲನೆ ನೀಡಿದರು.
ನಂತರ ಅನುಗ್ರಹ ಸಂದೇಶ ನೀಡಿದ ಗುರೂಜಿ, ನಾಟ್ಯ-ಗಾನ ಪ್ರಿಯೆಯಾದ ದುರ್ಗಾ ಆದಿಶಕ್ತಿ ದೇವಿ ಕ್ಷೇತ್ರದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಯುವ ಕಲಾವಿದರು ತಮ್ಮ ಕಲಾ ಯಶಸ್ಸಿನ ಮೆಟ್ಟಿಲನ್ನು ಏರಿರುವುದು ಉಲ್ಲೇಖನೀಯ. ಇಲ್ಲಿ ಕಲಾವಿದರಿಂದ ಸಮರ್ಪಿಸಲ್ಪಡುವ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಾತೆ ಸಂತುಷ್ಟಳಾಗುವುದು ಅಷ್ಟೇ ಸತ್ಯ. ನವರಾತ್ರಿ ಪರ್ವಕಾಲದಲ್ಲಿ ಸೇವೆ ನೀಡುವ ಎಲ್ಲ ಕಲಾವಿದರ ಕಲಾ ಬಾಳ್ವೆಗೆ ಶ್ರೇಯಸ್ಸಾಗಲಿ ಎಂದು ಹಾರೈಸಿದರು.ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಉಷಾ ರಮಾನಂದ, ಸಹ ಮುಖ್ಯಶಿಕ್ಷಕಿ ಚಂದ್ರಕಲಾ ಶರ್ಮ, ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್, ಉದ್ಯಮಿ ಆನಂದ ಬಾಯರಿ, ಶಾರದಾ ಗೋವಿಂದ ಭಟ್ ಕಿಲ್ಪಾಡಿ, ಕಾಷ್ಠಶಿಲ್ಪಿ ಜಗದೀಶ ಆಚಾರ್ಯ, ಕ್ಷೇತ್ರದ ಭಕ್ತರಾದ ಗುರುಪ್ರೀತ್ ಕೌರ್ ಮುಂಬಯಿ, ಶಯನಾಝ್ ಇದ್ದರು.