ನಾಯಿಗಳ ದಾಳಿ: 150 ಕೋಳಿ ಬಲಿ

| Published : Aug 21 2024, 12:36 AM IST

ಸಾರಾಂಶ

ನಾಯಿಗಳ ದಾಳಿ: 150 ಕೋಳಿ ಬಲಿ

ಶಿರಾ: ನಾಯಿಗಳ ಹಿಂಡು ಕೋಳಿ ಸಾಕಾಣಿಕೆ ಕೇಂದ್ರದ ಮೇಲೆ ದಾಳಿ ಮಾಡಿದ ಪರಿಣಾಮ 150 ಕ್ಕೂ ಹೆಚ್ಚು ನಾಟಿ ಕೋಳಿಗಳು ಬಲಿಯಾದ ಘಟನೆ ಶಿರಾ ತಾಲೂಕಿನ ಮುಷ್ಟಿಗರಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ರೈತ ಮೋಹನ್ ಕುಮಾರ್ ಎಂಬುವವರು ತಮ್ಮ 5 ಗುಂಟೆ ಜಾಗದಲ್ಲಿ ನಾಟಿ ಕೋಳಿ ಸಾಕಾಣಿಕೆಯನ್ನು ಆರಂಭಿಸಿ ಉತ್ತಮವಾಗಿ ಸಾಕಾಣಿಕೆ ಮಾಡಿದ್ದರು. ಪ್ರತಿ ಕೋಳಿ ಸುಮಾರು ಒಂದುವರೆ ಕೆಜಿ ತೂಕ ಬರುತ್ತಿದ್ದವು. ಇನ್ನೇನು ಕೆಲವೇ ದಿನಗಳಲ್ಲಿ ಮಾರಾಟ ಮಾಡುವ ಹಂತದಲ್ಲಿದ್ದ ಕೋಳಿಗಳು ನಾಯಿಗಳ ದಾಳಿಕೆ ಬಲಿಯಾಗಿವೆ. ಈ ಬಗ್ಗೆ ಮಾತನಾಡಿದ ರೈತ ಮೋಹನ್ ಕುಮಾರ್, ನಾನು ಬಾಳೆ ಕೃಷಿ ಮಾಡಿ ನಷ್ಟ ಅನುಭವಿಸಿದ್ದೇನೆ, ಇದೀಗ ಕುಕ್ಕುಟೋದ್ಯಮ ಮಾಡಬೇಕೆಂಬ ಉತ್ಸಾಹದಿಂದ ನಾಟಿ ಕೋಳಿ ಸಾಕಾಣಿಕೆ ಆರಂಭಿಸಿದ್ದೆ, ಇವು ಕೂಡ ನಾಯಿಗಳ ಪಾಲಾಗಿದ್ದು, ಸರ್ಕಾರ ನನ್ನ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು.