ಮೊಬೈಲ್‌ ದಾಸರಾಗಬೇಡಿ

| Published : Aug 09 2024, 12:46 AM IST

ಸಾರಾಂಶ

ಇಂದಿನ ಮೊಬೈಲ್‌ ಯುಗದಲ್ಲಿ ವಿದ್ಯಾರ್ಥಿಗಳು ಮೊಬೈಲ್‌ ಬಳಕೆಯ ದಾಸರಾಗುತ್ತಿದ್ದು, ಅದನ್ನು ನಿಲ್ಲಿಸಿ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು ಎಂದು ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಎನ್‌.ಎಸ್‌.ತೆಗ್ಗಿಹಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಇಂದಿನ ಮೊಬೈಲ್‌ ಯುಗದಲ್ಲಿ ವಿದ್ಯಾರ್ಥಿಗಳು ಮೊಬೈಲ್‌ ಬಳಕೆಯ ದಾಸರಾಗುತ್ತಿದ್ದು, ಅದನ್ನು ನಿಲ್ಲಿಸಿ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು ಎಂದು ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಎನ್‌.ಎಸ್‌.ತೆಗ್ಗಿಹಳ್ಳಿ ಹೇಳಿದರು.

ಪಟ್ಟಣದ ಸರ್ಕಾರಿ ಪಪೂ ಕಾಲೇಜಿನಲ್ಲಿ 2024-25ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳೊಂದಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ಅಷ್ಟೇ ಮುಖ್ಯವಾಗಿದ್ದು, ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಉತ್ತಮರನ್ನಾಗಿ ಮಾಡುವ ಜವಾಬ್ದಾರರಿ ಶಿಕ್ಷಕರ ಮೇಲಿದೆ. ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕನ್ನಡ ವಿಷಯ ಉಪನ್ಯಾಸಕಿ ಎಸ್‌.ಎಚ್‌.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.ಹಿರಿಯ ಉಪನ್ಯಾಸಕ ಆರ್‌.ಎಸ್‌.ಬಗಲಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಓದು ಬಹಳ ಮುಖ್ಯವಾಗಿದೆ. ಪರೀಕ್ಷಾ ಪದ್ದತಿ ಬದಲಾಗುತ್ತಿದ್ದು, ಓದಿನ ಕಡೆಗೆ ಗಮನ ಹರಿಸಬೇಕು ಎಂದರು.ಉಪನ್ಯಾಸಕ ಕೆ.ವಿ.ಸರಸಂಬಿ ಮಾತನಾಡಿದರು. ಉಪನ್ಯಾಸಕರಾದ ಡಿ.ಎಸ್‌.ಹಡಪದ, ಆರ್‌.ಡಿ.ಬಿರಾದಾರ, ಪ್ರದೀಪ ನಾಗಠಾಣ, ವಿ.ವಿ.ಬಮಗೊಂಡ, ಚನ್ನವೀರಪ್ರಭು ಹಿರೇಮಠ, ಆರ್‌.ಎ.ದ್ಯಾಮಗೊಂಡ, ಎಸ್‌.ಎ.ಪಾಟೀಲ, ಎಸ್‌.ಎಸ್‌.ಜಹಾಗಿರದಾರ, ಸುಚಿತ್ರಾ ,ಬಸವರಾಜ ತಳವಾರ ಮೊದಲಾದವರು ಇದ್ದರು. ಕುಮಾರಿ ಲಕ್ಷ್ಮಿ ಕುಮಸಗಿ ಸ್ವಾಗತಿಸಿದರು. ಸಮೀನಾ ಜಮಖಂಡಿ ನಿರೂಪಿಸಿದರು. ಐಶ್ವರ್ಯ ಲೋಗಾವಿ ವಂದಿಸಿದರು.