ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗಸದಸ್ಯತ್ವ ಆಂದೋಲನದ ಯುದ್ಧ ಭೂಮಿಕೆಯಲ್ಲಿ ನಾವು ನಿಂತಿದ್ದೇವೆ. ಯಾವುದೇ ಕಾರಣದಿಂದ ಹಿಂಜರಿಯಬಾರದು. ಕೊಟ್ಟಿರುವ ಗುರಿ ತಲುಪಬೇಕೆಂದು ಬಿಜೆಪಿ ಮುಖಂಡ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.ನಗರದ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ಚಿತ್ರದುರ್ಗ, ದಾವಣಗೆರೆ, ತುಮಕೂರು, ಮಧುಗಿರಿ ಜಿಲ್ಲೆಗಳ ವಿವಿಧ ಮಂಡಲ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ಆಯೋಜಿಸಲಾಗಿದ್ದ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರದಲ್ಲಿ ಮೂರನೆ ಬಾರಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿರವರ ಕೈಬಲಪಡಿಸಬೇಕು ಎಂದರು.
ಪ್ರಾಥಮಿಕ ಸದಸ್ಯತ್ವದ ಗುರಿ ಎಷ್ಟು ನೀಡಲಾಗಿತ್ತು. ಇದುವರೆಗೆ ಎಷ್ಟಾಗಿದೆ, ಗುರಿ ತಲುಪಲು ಏಕೆ ಸಾಧ್ಯವಾಗಿಲ್ಲ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಗಳ ಹುಡುಕಾಟ ಬೇಕಿಲ್ಲ. ಉಳಿದಿರುವ ಇನ್ನು ಹದಿನಾಲ್ಕು ದಿನಗಳಲ್ಲಿ ಎಷ್ಟು ಸದಸ್ಯತ್ವ ಮಾಡಬಹುದು ಎನ್ನುವುದರ ಬಗ್ಗೆ ತೀರ್ಮಾನ ಮಾಡಿಕೊಳ್ಳಿ. ನವರಾತ್ರಿ ಹಬ್ಬದ ಸಬೂಬು ಬೇಡ ಎಂದರು.ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್‍ರೆಡ್ಡಿ, ಜಿಲ್ಲಾಧ್ಯಕ್ಷ ಎ. ಮುರಳಿ, ವಿಧಾನಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಚಿದಾನಂದಗೌಡ, ಧನಂಜಯ ಸರ್ಜಿ, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಗಾಯತ್ರಿ ಸಿದ್ದೇಶ್ವರ್, ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹನುಮಂತೆಗೌಡ, ಕೆ.ಟಿ. ಕುಮಾರಸ್ವಾಮಿ ಅನೇಕರು ವೇದಿಕೆಯಲ್ಲಿದ್ದರು.