ವಾಹನ ಅಪಘಾತಗಳಿಂದ ಹಲವರು ಪ್ರಾಣ ಕಳೆದುಕೊಳ್ಳುತ್ತಿರುವುದು ನೋವಿನ ವಿಚಾರ. ಸಾಕಷ್ಟು ಪ್ರಕರಣಗಳಲ್ಲಿ ಸವಾರರು ಚಾಲನಾ ಪರವಾನಗಿಯೇ ಹೊಂದಿರುವುದಿಲ್ಲ. ಹೆಲ್ಮೆಟ್ ಹಾಕದೆ ಎಷ್ಟೂ ದ್ವಿಚಕ್ರ ಸವಾರರು ಅಪಘಾತಗಳಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ಚಾಲನಾ ಪರವಾನಗಿ ಹಾಗೂ ವಿಮೆ ಇಲ್ಲದೇ ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾಧ. ಅವುಗಳಿದ್ದರೆ ಮಾತ್ರವೇ ವಾಹನ ಚಾಲನೆಗೆ ಮುಂದಾಗಬೇಕು. ವಕೀಲರು ಸಾರ್ವಜನಿಕರಿಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದಿನ ದಿನಗಳಲ್ಲಿ ಚಾಲನಾ ಪರವಾನಗಿ ಹಾಗೂ ವಿಮೆ ಪ್ರಕರಣಗಳಿಗೆ ಕಡಿವಾಣ ಹಾಕುವಂತಹ ಕೆಲಸವನ್ನು ನಾವು ಎಲ್ಲರೂ ಮಾಡಬೇಕಿದೆ ಎಂದು 3ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶಿವಕುಮಾರ್ ಬಿ.ತಿಳಿಸಿದರು.ತಾಲೂಕು ನೂತನ ವಕೀಲರ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಹೊಸ ವರ್ಷದ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ವಾಹನ ಅಪಘಾತಗಳಿಂದ ಹಲವರು ಪ್ರಾಣ ಕಳೆದುಕೊಳ್ಳುತ್ತಿರುವುದು ನೋವಿನ ವಿಚಾರ. ಸಾಕಷ್ಟು ಪ್ರಕರಣಗಳಲ್ಲಿ ಸವಾರರು ಚಾಲನಾ ಪರವಾನಗಿಯೇ ಹೊಂದಿರುವುದಿಲ್ಲ. ಹೆಲ್ಮೆಟ್ ಹಾಕದೆ ಎಷ್ಟೂ ದ್ವಿಚಕ್ರ ಸವಾರರು ಅಪಘಾತಗಳಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕೇವಲ ಪೊಲೀಸರು ದಂಡ ಹಾಕುತ್ತಾರೆಂಬ ಕಾರಣಕ್ಕೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಕುವ ಬದಲು ತಮ್ಮ ಪ್ರಾಣ ಕಾಪಾಡಿಕೊಳ್ಳುವ ಸಲುವಾಗಿ ಹಾಕಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಹಲವರು ತಮ್ಮ ವಾಹನಗಳಿಗೆ ವಿಮೆ ಮಾಡಿಸಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಅಪಘಾತವೇನಾದರೂ ಆದರೆ ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಆರ್ಥಿಕವಾಗಿ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.ನ್ಯಾಯಾಧೀಶ ಶೆಮಿದ.ಕೆ ಮಾತನಾಡಿ, ಸುಗಮ ಕಲಾಪಗಳನ್ನು ನಡೆಸಲು ವಕೀಲರ ಸಹಕಾರ ಮುಖ್ಯ. ಹೊಸ ವರ್ಷದಲ್ಲಿ ಎಲ್ಲ ವಕೀಲರಿಗೆ ಆರೋಗ್ಯ, ಸಂಪತ್ತು ನೀಡಲಿ ಎಂದು ಶುಭ ಹಾರೈಸಿದರು.

ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್ ರಾಜಗೋಪಾಲಗೌಡ ಮಾತನಾಡಿ, ವರ್ಷ ಪೂರ್ತಿ ಶಾಂತಿ ನೆಮ್ಮದಿ, ಯಶಸ್ಸು ನಿಮ್ಮದಾಗಲೆಂದು ವಕೀಲರಿಗೆ ಹೊಸ ವರ್ಷದ ಶುಭ ಕೋರಿ, ರೂಪ ಸಂಪತ್ತು, ಅಧಿಕಾರ ಇವುಗಳಿಗೆ ಕೊನೆಯೂ ಇಲ್ಲ, ತೃಪ್ತಿಯೂ ಇರದು, ಎಷ್ಟಿದ್ದರೂ ಇನ್ನೂ ಬೇಕು, ಇನ್ನೂ ಬೇಕು ಎನ್ನತ್ತಲೇ ಇರುತ್ತೇವೆ, ದಿನದ ತುತ್ತಿಗೂ ಇಲ್ಲದ ಮಂದಿ ನಮ್ಮ ನಡುವೆಯೂ ಇದ್ದಾರೆ, ಈ ವರ್ಷ ಖುಷಿ ಸೇರಿದಂತೆ ನಮ್ಮಲಿದ್ದುದನ್ನು ಬೇರೆಯವರಿಗೂ ಹಂಚಿ ವಕೀಲರ ಜ್ಞಾನವನ್ನು ದಾರೆ ಎರೆದು ಬಡಬಗ್ಗರಿಗೆ ನ್ಯಾಯವನ್ನು ಕೊಡಿಸುವಂತಹ ಕೆಲಸವನ್ನು ನಾವು ಮಾಡಬೇಕಿದೆ ಎಂದರು.ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶೆಯಾದ ಜಯಲಕ್ಷ್ಮೀ, ವಕೀಲರ ಸಂಘದ ಉಪಾಧ್ಯಕ್ಷರಾದ ಕೆ.ಸಿ.ನಾಗರಾಜ್, ಕಾರ್ಯದರ್ಶಿ ಜ್ಯೋತಿಬಸು, ಹಿರಿಯ ವಕೀಲರು ಭಾಗವಹಿಸಿದ್ದರು.೫ಕೆಜಿಎಫ್೪ವಕೀಲರ ಸಂಘದಲ್ಲಿ ಹಮ್ಮಿಕೊಂಡಿದ್ದ ನೂತನ ವಕೀಲರ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿದ ನ್ಯಾಯಾಧೀಶರು.