ಸಾರಾಂಶ
ಕಷ್ಟಗಳನ್ನು ಸಹಿಸಿ ಮಕ್ಕಳನ್ನು ಸಾಕು, ಸಲುಹಿ ಶಿಕ್ಷಣ ಕಲಿಸಿ ಸಮಾಜದಲ್ಲಿ ಒಳ್ಳೆಯ ಪ್ರಜೆಗಳನ್ನಾಗಿಸಿದ ತಂದೆ-ತಾಯಿಗಳನ್ನು ಎಂದಿಗೂ ಮರೆಯಬಾರದು ಎಂದು ಶ್ರೇಷ್ಠ ವೈದ್ಯ ಪ್ರಶಸ್ತಿ ಪುರಸ್ಕೃತ, ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಾನಂದ ಮಾಸ್ತಿಹೊಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಯಮಕನಮರಡಿ
ಕಷ್ಟಗಳನ್ನು ಸಹಿಸಿ ಮಕ್ಕಳನ್ನು ಸಾಕು, ಸಲುಹಿ ಶಿಕ್ಷಣ ಕಲಿಸಿ ಸಮಾಜದಲ್ಲಿ ಒಳ್ಳೆಯ ಪ್ರಜೆಗಳನ್ನಾಗಿಸಿದ ತಂದೆ-ತಾಯಿಗಳನ್ನು ಎಂದಿಗೂ ಮರೆಯಬಾರದು ಎಂದು ಶ್ರೇಷ್ಠ ವೈದ್ಯ ಪ್ರಶಸ್ತಿ ಪುರಸ್ಕೃತ, ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಾನಂದ ಮಾಸ್ತಿಹೊಳಿ ಹೇಳಿದರು.ಭಾನುವಾರ ಸ್ವಗ್ರಾಮ ಪರಕನಹಟ್ಟಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 75ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಪರಕನಹಟ್ಟಿಯವರಾದ ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿವಿಯ ವಿಶೇಷಾಧಿಕಾರಿ ಡಾ.ಆನಂದ ಮಾಸ್ತಿಹೊಳಿಗೆ ಸಂಘದ ವತಿಯಿಂದ ಸತ್ಕರಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಬಸವರಾಜ ಸುಲ್ತಾನಪುರಿ ಮಾತನಾಡಿ, ಬರುವ ವರ್ಷದಲ್ಲಿ ಸಂಘದ ವಜ್ರಮಹೋತ್ಸವ ಆಚರಿಸಲಾಗುವುದು. ಸಂಘದ ವತಿಯಿಂದ ಸುಪರ್ ಮಾರ್ಕೆಟ್ ಆರಂಭಿಸುವ ಯೋಚನೆ ಇದೆ. 1190 ಸದಸ್ಯರಿದ್ದು, ₹47,60,150 ಷೇರು ಬಂಡವಾಳ ಇದೆ. ₹92,31,621 ಠೇವು, ₹14,22,86,460 ದುಡಿಯುವ ಬಂಡವಾಳ ಹೊಂದಿದ್ದು, ₹30,38,141 ಲಾಭ ಗಳಿಸಿದೆ. ಶೇ.13ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ತಿಳಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಶಿವಾನಂದ ಗುಡಸ ಸಂಘದ ಪ್ರಗತಿ ಕುರಿತು ವರದಿವಾಚನ ಮಾಡಿದರು.ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಈರಣ್ಣ ಹೂಲಿಕಟ್ಟಿ, ನಿರ್ದೇಶಕರಾದ ನಿಂಗಪ್ಪ ಪೈರಾಶಿ, ಮಲ್ಲಪ್ಪ ಶಿರೂರ, ಜಂಪಣ್ಣ ಪಾಟೀಲ, ಬಸವರಾಜ ಮಾಸ್ತಿಹೊಳಿ, ಬಾಳಪ್ಪ ಹುಕ್ಕೇರಿ, ಶಿವಾನಂದ ಮಗದುಮ್ಮ, ಲಕ್ಕಪ್ಪ ಬನ್ನೂರ, ಗಂಗಪ್ಪ ಹರಿಜನ, ಬಸವ್ವ ಕಬಾಡಗಿ, ಗೀತಾ ಹೂಲಿಕಟ್ಟಿ ಹಾಗೂ ಸಿಬ್ಬಂದಿಗಳಾದ ಪ್ರಕಾಶ ಕಮ್ಮಾರ, ಶಿವಾನಂದ ಹೂಲಿಕಟ್ಟಿ, ಗಜಾನನ ಶಿರೂರ, ಶಿವಾನಂದ ಹುಕ್ಕೇರಿ, ಈರಣ್ಣ ಹೂಲಿಕಟ್ಟಿ ಹಾಗೂ ಸದಸ್ಯರು ಇದ್ದರು.