ಗುರುವಿನ ಮಾರ್ಗದರ್ಶನವನ್ನು ಅಲಕ್ಷ್ಯ ಮಾಡಬೇಡಿ ಮಾಡಿದರೆ ಕೆಟ್ಟ ಅಂತ್ಯ ಕಾಣಬೇಕಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ರವಿಕುಮಾರ್ ನೀಹ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹುಳಿಯಾರು

ಗುರುವಿನ ಮಾರ್ಗದರ್ಶನವನ್ನು ಅಲಕ್ಷ್ಯ ಮಾಡಬೇಡಿ ಮಾಡಿದರೆ ಕೆಟ್ಟ ಅಂತ್ಯ ಕಾಣಬೇಕಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ರವಿಕುಮಾರ್ ನೀಹ ತಿಳಿಸಿದರು.ಹುಳಿಯಾರು ಕೆಂಕೆರೆಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2025-26 ನೇ ಸಾಲಿನ ಸಾಂಸ್ಕೃತಿಕ ಕ್ರೀಡಾ, ಎನ್.ಎಸ್.ಎಸ್ ಹಾಗೂ ರೇಂಜರ್ ಮತ್ತು ರೋವರ್ ಘಟಕಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಗುರುವಿನ ಮಹತ್ವವನ್ನು ಅರಿಯದೆ ಎಷ್ಟೋ ಮಂದಿ ಈಗಲೂ ಪಶ್ಚಾತಾಪ ಪಡುತ್ತಿದ್ದಾರೆ ಎಂದು ಅಲೆಗ್ಸಾಂಡರ್ ನ ಉದಾಹರಣೆ ಕೊಡುವ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.ಕಾಲೇಜಿನ ಪ್ರಾಶುಂಪಾಲ ಎನ್ ಜಿ ಕೃಷ್ಣಮೂರ್ತಿ ಮಾತನಾಡಿ, ಕಳೆದ ಬಾರಿಗಿಂತ ಹೆಚ್ಚು ಫಲಿತಾಂಶ ತರುವ ನಿಟ್ಟಿನಲ್ಲಿ ಹೆಚ್ಚಿನ ತರಗತಿಗಳನ್ನು ನಡೆಸುತ್ತಿದ್ದೇವೆ. ಇಲಾಖೆ, ಪೋಷಕರು ಹಾಗೂ ನಮ್ಮ ಆಶಯ ಒಂದೇ ನಿವೆಲ್ಲಾ ಎಲ್ಲಾ ವಿಷಯಗಳಲ್ಲೂ ಉತ್ತೀರ್ಣರಾಗಬೇಕು. ನಮ್ಮ ಕಾಲೇಜು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಈ ಬಾರಿ ಶೇಕಡಾ 100 ಫಲಿತಾಂಶ ಬಂದರೆ ಎಲ್ಲಾ ವಿದ್ಯಾರ್ಥಿಗಳಿಗೂ ಸನ್ಮಾನ ಮಾಡುತ್ತೇವೆ ಎಂದು ಕಾರ‍್ಯಕ್ರಮದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವೀರಣ್ಣ, ಹುಳಿಯಾರು ಪ.ಪಂ. ಅಧ್ಯಕ್ಷೆ ಪ್ರೀತಿ ರಾಘವೇಂದ್ರ, ಕೆಂಕೆರೆ ಗ್ರಾ.ಪಂ. ಅಧ್ಯಕ್ಷ ಕೆ.ಜೆ.ಮಂಜುನಾಥ್, ಉಪಾಧ್ಯಕ್ಷೆ ಕೆ.ಬಿ.ಮಹಾಲಕ್ಷ್ಮಿ, ಶಾಲಾ ಅಭಿವೃದ್ದಿ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಹೆಚ್.ಎಸ್.ಪ್ರದೀಪ್, ರವಿರಾಜ್ ಟಿ.ಎನ್, ಶೇಖರ್, ಉಪನ್ಯಾಸಕರು ಹಾಗೂ ಭೋದಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಹಾಜರಿದ್ದರು.