ಸಾರಾಂಶ
ಕನ್ಡಡಪ್ರಭ ವಾರ್ತೆ, ಕಡೂರು
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ್ದು ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಚುನಾವಣಾ ಆಯೋಗ ಅವಕಾಶ ನೀಡಬಾರದು ಎಂದು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಆಗ್ರಹಿಸಿದರು.ಈ ಬಗ್ಗೆ ಬುಧವಾರ ತಹಸೀಲ್ದಾರ್ ಎಂ.ಪಿ.ಕವಿರಾಜ್ ಗೆ ಕಡೂರು ಮತ್ತು ಬೀರೂರು ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷರಾದ ರೇವತಿ ನಾಗರಾಜ್ ಮತ್ತು ಸವಿತಾ ಪಾಟೀಲ್ ನೇತೃತ್ವದಲ್ಲಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಗಾಯಿತ್ರಿ ಕಿರಣ್ ಮಾತನಾಡಿ, ಹೆಣ್ಣುಮಕ್ಕಳ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಅವರು ಮೊದಲು ಹೆಣ್ಣುಮಕ್ಕಳಿಗೆ ಗೌರವ ಕೊಡುವುದನ್ನು ಕಲಿಯಬೇಕು. ಕ್ಷಮೆ ಕೇಳುವುದು ಕೇವಲ ನಾಟಕ. ಅವರು ಲೋಕಸಭೆಗೆ ಸ್ಪರ್ಧಿಸಲು ಅರ್ಹರಲ್ಲ ಎಂದರು.ರೇವತಿ ನಾಗರಾಜ್ ಮಾತನಾಡಿ, ಅವರ ಮನೆಯಲ್ಲೂ ಹೆಣ್ಣು ಮಕ್ಕಳಿಲ್ಲವೆ? ಆದರೆ ಬಡವರ ಹೆಣ್ಣು ಮಕ್ಕಳು ಯಾರೂ ದಾರಿ ತಪ್ಪಿಲ್ಲ. ಗ್ಯಾರಂಟಿ ಯೋಜನೆಯಿಂದ ಒಂದಿಷ್ಟು ನೆಮ್ಮದಿ ಕಂಡುಕೊಂಡಿದ್ದಾರೆ. ಹೆಣ್ಣುಮಕ್ಕಳ ಬಗ್ಗೆ ಕೀಳು ಮನೋಭಾವನೆ ಯಿಟ್ಟುಕೊಂಡು ಮಾತನಾಡುವ ಇವರು ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಚುನಾವಣಾ ಆಯೋಗ ಸ್ಪರ್ದೆಗೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು. ಬೀರೂರು ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷರಾದ ಸವಿತಾ ಪಾಟೀಲ್, ಶೋಭಾ ಶ್ರೀನಿವಾಸ್, ನಾಗಮ್ಮ ಶಿವಕುಮಾರ್,ಸುನೀತಾ ಚೆನ್ನಬಸಯ್ಯ, ಕಲಾವತಿ ವೆಂಕಟೇಶ್, ಹೇಮಾ ಮಂಜುನಾಥ್ ಮತ್ತಿತರರು ಇದ್ದರು.
17ಕೆಕೆಡಿಯು3. ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಕಾಂಗ್ರೆಸ್ ಘಟಕಗಳಿಂದ ತಹಶೀಲ್ದಾರ್ ಎಂ.ಪಿ.ಕವಿರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.