ಸಾರಾಂಶ
ದಾಬಸ್‌ಪೇಟೆ: ಮಕ್ಕಳನ್ನು ಪೋಷಕರು ಕೇವಲ ಅಂಕಾಧಾರಿತಕ್ಕೆ ಸೀಮಿತಗೊಳಿಸಬಾರದು, ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು ಎಂದು ನಟ, ರಂಗಕರ್ಮಿ ಡಾ.ಯಶವಂತ್ ಸರ್ ದೇಶಪಾಂಡೆ ಹೇಳಿದರು.
ದಾಬಸ್‌ಪೇಟೆ: ಮಕ್ಕಳನ್ನು ಪೋಷಕರು ಕೇವಲ ಅಂಕಾಧಾರಿತಕ್ಕೆ ಸೀಮಿತಗೊಳಿಸಬಾರದು, ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು ಎಂದು ನಟ, ರಂಗಕರ್ಮಿ ಡಾ.ಯಶವಂತ್ ಸರ್ ದೇಶಪಾಂಡೆ ಹೇಳಿದರು.
ಟಿ.ಬೇಗೂರಿನಲ್ಲಿರುವ ಸೌಂದರ್ಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಮ್ಮಿಲನ ೨೦೨೪ರ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಪಾಠಕ್ಕೆ ಸಂಬಂಧಿಸಿದಂತೆ ವಿಷಯದ ಜೊತೆಗೆ, ಕ್ರೀಡೆ, ವ್ಯಾಯಾಮ ಕಲಿಸಬೇಕು. ಅಂಕ ಬೇರೆ, ಜ್ಞಾನ ಬೇರೆ, ಎಲ್ಲಾ ಭಾಷೆಯಲ್ಲಿ ಹಿಡಿತವಿರಬೇಕು. ಪೋಷಕರು ಮತ್ತು ಹಿರಿಯರನ್ನು ಗೌರವಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಸೌಂದರ್ಯ ರಮೇಶ್, ಕಾಮಿಡಿ ನಟ ರಾಕೇಶ್, ಸಂಸ್ಥೆಯ ಅಧ್ಯಕ್ಷ ಸೌಂದರ್ಯ ರಮೇಶ್, ಟ್ರಸ್ಟಿ ದೇವಿಕಾ ರಮೇಶ್, ಕಾರ್ಯದರ್ಶಿ ಭರತ್ ಸೌಂದರ್ಯ, ನಸಿಂಗ್ ಸಿಇಒ ಜಿತಿನ್ ಜೋ, ನರ್ಸಿಂಗ್ ಕಾಲೇಜ್ ಪ್ರಾಂಶುಪಾಲ ಹೇಮರಾಜು, ಟ್ರಸ್ಟಿ ಸೌಮ್ಯ ಭರತ್, ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮೀಕಾಂತ, ಪಿಯು ಕಾಲೇಜಿನ ಪ್ರಾಂಶುಪಾಲೇ ಮೇಘನ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು. ಪೋಟೋ 3 :
ಟಿ.ಬೇಗೂರಿನಲ್ಲಿರುವ ಸೌಂದರ್ಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಮ್ಮಿಲನ ೨೦೨೪ರ ವಾರ್ಷಿಕೋತ್ಸವಕ್ಕೆ ಖ್ಯಾತ ನಟ, ರಂಗಕರ್ಮಿ ಕಲಾವಿದ ಡಾ.ಯಶವಂತ್ ಸರ್ ದೇಶಪಾಂಡೆ ಉದ್ಘಾಟಿಸಿದರು.