ಸಾಧಕರ ಚರಿತ್ರೆ ಪುಸ್ತಕಕ್ಕೆ ಮಾತ್ರ ಸೀಮಿತವಾಗದಿರಲಿ: ಭೀಮಣ್ಣ ನಾಯ್ಕ

| Published : Aug 21 2024, 12:40 AM IST

ಸಾಧಕರ ಚರಿತ್ರೆ ಪುಸ್ತಕಕ್ಕೆ ಮಾತ್ರ ಸೀಮಿತವಾಗದಿರಲಿ: ಭೀಮಣ್ಣ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ನಾರಾಯಣ ಗುರುಗಳ ಚರಿತ್ರೆ ತಿಳಿದುಕೊಳ್ಳಬೇಕು. ಅದು ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.

ಶಿರಸಿ: ಬ್ರಹ್ಮರ್ಷಿ ನಾರಾಯಣ ಗುರುಗಳ ಆದರ್ಶಗಳನ್ನು ತಿಳಿದುಕೊಂಡು ಸಮಾಜದ ಏಳ್ಗೆಗೆ ಕಾರಣರಾಗಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.ಮಂಗಳವಾರ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯಿತಿ ಹಾಗೂ ಆರ್ಯ ಈಡಿಗ, ನಾಮಧಾರಿ ಬಿಲ್ಲವ ಅಭಿವೃದ್ಧಿ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡ ಬ್ರಹ್ಮರ್ಷಿ ನಾರಾಯಣ ಗುರುಗಳ ೧೭೦ನೇ ಜಯಂತಿ ಹಾಗೂ ದಿ. ಡಿ. ದೇವರಾಜ ಅರಸು ಜನ್ಮದಿನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ನಾರಾಯಣ ಗುರುಗಳ ಚರಿತ್ರೆ ತಿಳಿದುಕೊಳ್ಳಬೇಕು. ಅದು ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು. ಸಮಾಜಕ್ಕೆ ದಿಕ್ಕು ತೋರಿದ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ನೊಂದ, ಶೋಷಿತ ವರ್ಗಕ್ಕೆ ಶಕ್ತಿ ನೀಡಿದ ಅವರ ವಿಚಾರದ ಬಗ್ಗೆ ಜನಜಾಗೃತಿ ಮಾಡಬೇಕು ಎಂದರು.ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ರೈತರಾಗಿ ಕೆಲಸ ಮಾಡಿ ಧೀಮಂತ ನಾಯಕನಾಗಿ ಜನಸಾಮಾನ್ಯರ ನೋವಿಗೆ ಸ್ಪಂದಿಸಿದ್ದಾರೆ. ೬೫ ಸಾವಿರ ಜನರಿಗೆ ಜೀತ ಪದ್ಧತಿಯಿಂದ ಮುಕ್ತಿ ನೀಡಿದವರು. ಗೇಣಿ ಪದ್ಧತಿಯಲ್ಲಿ ಜೀತ ಪದ್ಧತಿಯಲ್ಲಿ ನರಳುತ್ತಿದ್ದವರಿಗೆ ಬೆಳಕು ನೀಡಿದವರು ಎಂದರು.ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ, ತಹಸೀಲ್ದಾರ್ ಶ್ರೀಧರ ಮುಂದಲಮನಿ, ಪೌರಾಯುಕ್ತ ಕಾಂತರಾಜು, ಸಿ.ಎಫ್. ನಾಯ್ಕ, ಮಧು ಬಿಲ್ಲವ, ಗಣಪತಿ ನಾಯ್ಕ, ನಾಗರಾಜ ನಾಯ್ಕ, ಸುನೀತಾ ಘಟಕಾಂಬಳೆ, ಉಪನ್ಯಾಸಕ ಉಮೇಶ ನಾಯ್ಕ, ಆರ್.ಜಿ. ನಾಯ್ಕ ಉಪಸ್ಥಿತರಿದ್ದರು.ಇದಕ್ಕೂ ಮೊದಲು ಬ್ರಹ್ಮರ್ಷಿ ನಾರಾಯಣ ಗುರುಗಳ ಭಾವಚಿತ್ರದೊಂದಿಗೆ ಮೆರವಣಿಗೆ ವಾದ್ಯಮೇಳದೊಂದಿಗೆ ಸಡಗರದಿಂದ ನಡೆಯಿತು. ಮಾರಿಕಾಂಬಾ ದೇವಸ್ಥಾನದಿಂದ ಮೆರವಣಿಗೆ ಆರಂಭಗೊಂಡು ಶಿವಾಜಿ ವೃತ್ತ, ಬಸ್ ನಿಲ್ದಾಣ ವೃತ್ತ, ಸಿ.ಪಿ. ಬಜಾರ್, ಬಾರಕೂರ ವೃತ್ತ, ದೇವಿಕೆರೆ ವೃತ್ತ ಮತ್ತು ಅಶ್ವಿನಿ ವೃತ್ತದ ಮೂಲಕ ಸಾಗಿತು.