ನೆಲಮಂಗಲ: ಮೊಬೈಲ್‌ನಲ್ಲಿ ಮುಳುಗಿ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳಬೇಡಿ ಎಂದು ಶ್ರೀ ಪರಿಪೂರ್ಣ ಸನಾತನ ಆಯುರ್ವೇದ ಆಸ್ಪತ್ರೆ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಸ್ವಾಗತ್ ನಾರಾಯಣ ಅಭಿಪ್ರಾಯಪಟ್ಟರು.

ತಾಲೂಕಿನ ಅರ್ಜುನಬೆಟ್ಟಹಳ್ಳಿಯ ಶ್ರೀ ಪರಿಪೂರ್ಣ ಸನಾತನ ಚಾರಿಟಬಲ್ ಟ್ರಸ್ಟ್ ನ ಆರ್ಯುವೇದ ಕಾಲೇಜಿನಲ್ಲಿ ಬೆಂಗಳೂರಿನ ವಿವಿಎನ್ ಪದವಿ ಕಾಲೇಜಿನ ಎನ್ನೆಸ್ಸೆಸ್‌ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಜನಜೀವನವನ್ನು ಅರ್ಥ ಮಾಡಿಕೊಳ್ಳಲು ಎನ್ನೆಸ್ಸೆಸ್‌ ಶಿಬಿರಗಳು ಪೂರಕ. ಶಿಬಿರದಲ್ಲಿ ಗ್ರಾಮೀಣರು ಎದುರುಸುತ್ತಿರುವ ಸಮಸ್ಯೆಗಳು ಅವುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದರು.

ಕಾಲೇಜು ಉಪ ಪ್ರಾಂಶುಪಾಲರಾದ ಡಾ.ರೇವಣ್ಣಗೌಡ ಕೆ.ಎಸ್. ಮಾತನಾಡಿ, ವ್ಯಕ್ತಿತ್ವ ಎಂಬುದು ಅನೇಕ ಶಕ್ತಿಗಳ ಸಂಗಮವಾಗಿದೆ. ಆದ್ದರಿಂದ ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ. ವ್ಯಕ್ತಿತ್ವ ವಿಕಸಕ್ಕೂ ಭಾಷೆಗೂ ಅವಿನಾವಭಾವ ಸಂಬಂಧವಿದೆ. ವ್ಯಕ್ತಿಯ ಆಲೋಚನೆಗಳು ನಡವಳಿಕೆಗಳು ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ಇದರಲ್ಲಿ ಭಾಷಾ ಪ್ರೌಢಿಮೆಯೂ ಪ್ರಮುಖ ಪಾತ್ರವಹಿಸಲಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಎನ್ನೆಸ್ಸೆಸ್‌ ಕಾರ್ಯಕ್ರಮಾಧಿಕಾರಿ ಜಿ.ಎಸ್.ಅಂಬಿಕಾ, ಪ್ರಾಧ್ಯಾಪಕರಾದ ಮಹಾದೇಶ್, ಕಾವ್ಯ ಯೋಗಾನಂದ್, ಆರ್ಯುವೇದ ಕಾಲೇಉ ಸಿಬ್ಬಂದಿ ಸಿದ್ದುಸ್ವಾಮಿ, ಪತ್ರಕರ್ತ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

ಪೊಟೊ-25ಕೆಎನ್‌ಎಲ್‌ಎಮ್‌1-


ನೆಲಮಂಗಲ ತಾಲೂಕಿನ ಅರ್ಜುನಬೆಟ್ಟಹಳ್ಳಿ ಶ್ರೀ ಪರಿಪೂರ್ಣ ಸನಾತನ ಚಾರಿಟಬಲ್ ಟ್ರಸ್ಟ್ ಆರ್ಯುವೇದ ಕಾಲೇಜಿನಲ್ಲಿ ಬೆಂಗಳೂರಿನ ವಿವಿಎನ್ ಪದವಿ ಕಾಲೇಜಿನ ಎನ್ನೆಸ್ಸೆಸ್‌ ಶಿಬಿರಕ್ಕೆ ಶ್ರೀ ಪರಿಪೂರ್ಣ ಸನಾತನ ಆಯುರ್ವೇದ ಆಸ್ಪತ್ರೆ ವೈಧ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಸ್ವಾಗತ್ ನಾರಾಯಣ ಚಾಲನೆ ನೀಡಿದರು.