ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಬೇಗೂರು ಗ್ರಾಮದ ಲಿಟಲ್ ಫ್ಲವರ್ ಶಾಲೆಗೆ ನನ್ನ ತಂದೆ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಅಡಿಗಲ್ಲು ಹಾಕಿದ್ದರು ಆದರೀಗ ನಾನು ಶಾಲೆಯ ಬೆಳ್ಳಿ ಮಹೋತ್ಸವ ಉದ್ಘಾಟಿಸುತ್ತಿರುವುದು ಖುಷಿಯ ವಿಚಾರ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ತಾಲೂಕಿನ ಬೇಗೂರು ಲಿಟಲ್ ಫ್ಲವರ್ ಶಾಲೆಯ ಬೆಳ್ಳಿ ಮಹೋತ್ಸವ ಸಮಾರಂಭ ಉದ್ಘಾಟಿಸಿ ಶಾಲೆಯ ಆರಂಭದಿಂದ ಇಲ್ಲಿಯ ತನಕ ನನ್ನ ಕುಟುಂಬ ಈ ಸಂಸ್ಥೆಗೆ ಸಹಕಾರ ನೀಡುತ್ತ ಬಂದಿದೆ ನನ್ನ ಸಹಕಾರ ಸದಾ ಇರಲಿದೆ ಎಂದರು. ಮಹದೇವಪ್ರಸಾದ್ ಟ್ರಸ್ಟ್ ಹಾಗೂ ಸಂಗಮ ಪ್ರತಿಷ್ಠಾನದಿಂದ ಕ್ಷೇತ್ರದ ಮಕ್ಕಳ ಉದ್ಯೋಗ ಸಿಗಬೇಕು ಎಂಬ ಕಾಳಜಿಯಿಂದ ತರಬೇತಿ ಹಾಗೂ ಕಾರ್ಯಾಗಾರ ನಡೆಸುತ್ತಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ನೀಡಿದ್ದಾರೆ ಮತ್ತಷ್ಟ ಅನುದಾನ ನೀಡುವುದಾಗಿ ಭರವಸೆ ನೀಡಿದ್ದು ಅನುದಾನ ಬಂದ ಕೂಡಲೇ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂದರು. ನಾನು ಶಾಸಕನಾಗುತ್ತೇನೆ ಎಂದು ಕನಸಿನಲ್ಲೂ ನೆನಸಿರಲಿಲ್ಲ. ನನ್ನನ್ನು ರಾಜಕೀಯಕ್ಕೆ ತರುವುದು ನನ್ನ ತಂದೆ ಮಹದೇವಪ್ರಸಾದ್‌ರಿಗೆ ಇಷ್ಟ ಇರಲಿಲ್ಲ.ನಾನು ಬಿಸಿನೆಸ್ ಮಾಡಿಕೊಂಡಿದ್ದೆ. ನಾನು ಓದಿದ್ದು ಬಿಕಾಂ ಆದರೀಗ ಶಾಸಕನಾಗಿದ್ದೇನೆ ಎಂದರು.
ಸರ್ಕಾರ ಕೂಡ ಶಿಕ್ಷಣ ನೀತಿ ಹೊಸದಾಗಿ ತರುತ್ತಿವೆ ಸರ್ಕಾರಿ ಶಾಲೆಗಳೂ ಕೂಡ ಖಾಸಗಿ ಶಾಲೆಯಂತೆ ಬಹುತೇಕ ಶಾಲೆಗಳು ಕಡಿಮೆಯೇನು ಇಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬೆಳೆಯಲು ಪೋಷಕರು ಕಾರಣರಾಗಿದ್ದಾರೆ ಎಂದರು. ಎಲ್ಲರ ಮಕ್ಕಳ ತಂದೆ, ತಾಯಿಗಳಿಗೆ ತಮ್ಮ ಮಕ್ಕಳು ಚೆನ್ನಾಗಿ ಓದಬೇಕು ಎಂಬ ಆಸೆಯಿರುತ್ತದೆ. ಹಾಗಂತ ಮಕ್ಕಳನ್ನು ಇಷ್ಟೇ ಅಂಕ ಬರಬೇಕು. ನೆರೆ ಮನೆಯ ಮಕ್ಕಳು ಎಷ್ಟು ಚೆನ್ನಾಗಿ ಓದುತ್ತಿದ್ದಾರೆ ಎಂದು ಒತ್ತಡ ಹೇರುವುದನ್ನು ಬಿಡಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್,ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸ್,ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ,ಫಾಧರ್ ಜಿಬು ಜಾನ್ ವೆಲ್ಲಕಾದ,ಶಾಲೆಯ ಮುಖ್ಯ ಶಿಕ್ಷಕ ಮಾಥ್ಯೂ ಜೋಸೆಪ್,ಮೆನೆಜರ್ ಸುಜಾನ್,ಶಾಲೆಯ ನಾಯಕಿ ಪ್ರಕೃತಿ,ಶಾಲೆಯ ಅಧೀಕ್ಷಕಿ ಗಾಯತ್ರಿ ಸೇರಿದಂತೆ ಶಾಲೆಯ ಶಿಕ್ಷಕರು,ವಿದ್ಯಾರ್ಥಿಗಳು,ಪೋಷಕರು ಇದ್ದರು. ರಂಜಿಸಿದ ಮಕ್ಕಳು: ೨೫ ನೇ ವರ್ಷದ ಬೆಳ್ಳಿ ಮಹೋತ್ಸವದ ಅಂಗವಾಗಿ ನಡೆದ ವರ್ಣ ರಂಜಿತ ಸಮಾರಂಭದಲ್ಲಿ ಶಾಲೆಯ ಹಲವಾರು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟು ಪೋಷಕರನ್ನು ರಂಜಿಸಿದರು.