ದೇಶಪ್ರೇಮಿ ಸಂಘಟನೆ ವಿರುದ್ಧ ತುಚ್ಛವಾಗಿ ಮಾತು ಬೇಡ

| Published : Oct 29 2025, 11:15 PM IST

ಸಾರಾಂಶ

ದೇಶದಲ್ಲಿ ರಾಷ್ಟ್ರಪ್ರೇಮದ ಅನೇಕ ಸಂಘಟನೆಗಳು ಇವೆ. ಅಂತಹ ರಾಷ್ಟ್ರ ಪ್ರೇಮದ ಸಂಘಟನೆ ಬಗ್ಗೆ ಯಾವುದೇ ರಾಜಕಾರಣಿಗಳು ತುಚ್ಛವಾಗಿ ಮಾತನಾಡಬಾರದು ಎಂದು ಪಂಚಮಸಾಲಿ ಸಮಾಜದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೇಶದಲ್ಲಿ ರಾಷ್ಟ್ರಪ್ರೇಮದ ಅನೇಕ ಸಂಘಟನೆಗಳು ಇವೆ. ಅಂತಹ ರಾಷ್ಟ್ರ ಪ್ರೇಮದ ಸಂಘಟನೆ ಬಗ್ಗೆ ಯಾವುದೇ ರಾಜಕಾರಣಿಗಳು ತುಚ್ಛವಾಗಿ ಮಾತನಾಡಬಾರದು ಎಂದು ಪಂಚಮಸಾಲಿ ಸಮಾಜದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿದರು.

ಇತ್ತೀಚಿಗೆ ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್‌ ಅನ್ನು ಭಯೋತ್ಪಾದನೆ ಸಂಘಟನೆಗೆ ಹೋಲಿಕೆ ಮಾಡಿರುವ ಬಗ್ಗೆ ನಗರದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಶ್ರೀಗಳು ಪ್ರತಿಕ್ರಿಯೆ ನೀಡಿದರು. ಆಯಾ ಸಂಘಟನೆಗಳ ಬಗ್ಗೆ ಅವರವರ ಭಾವನಾತ್ಮಕ ಸಂಬಂಧ ಇದೆ. ಹಾಗಾಗಿ ಅಂತವರ ಮನಸಿಗೆ ನೋವಾಗುವಂತೆ ರಾಜಕಾರಣಿಗಳು ಮಾತನಾಡಬಾರದು ಎಂದು ಸಲಹೆ ನೀಡಿದರು.ಲಿಂಗಾಯತ ಸ್ವಾಮೀಜಿಗಳ ಬಗ್ಗೆ ಕನ್ಹೇರಿ ಶ್ರೀಗಳು ಅವಾಚ್ಯ ಪದ ಬಳಕೆ ವಿಚಾರವಾಗಿ ಅದು ನ್ಯಾಯಾಲಯದಲ್ಲಿದೆ. ಆ ಬಗ್ಗೆ ತಾವು ಮಾತನಾಡಲ್ಲ ಎಂದರು.