ಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ವಿಭಿನ್ನ ಚಟುವಟಿಕೆ ಹಾಕಿಕೊಳ್ಳಲಾಗಿದೆ. ಗಣಿತ ಪರಿಕಲ್ಪನೆಯಲ್ಲಿ ನಕ್ಷೆಯ ವಿಧಾನ, ಕೋಷ್ಟಕಗಳು, ವರ್ಗ ಸಮೀಕರಣ, ವೃತ್ತಗಳು, ದೂರ ಸೂತ್ರದಿಂದ ಲೆಕ್ಕ ಬಿಡಿಸುವುದು

ಕನಕಗಿರಿ: ಗಣಿತ ಕಷ್ಟವಲ್ಲ, ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಫಲಿತಾಂಶದಲ್ಲಿ ಸುಧಾರಣೆಗೆ ಶ್ರಮಿಸಲು ಮುಂದಾಗಿದ್ದೇವೆ ಎಂದು ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲಕುಮಾರ ಹೇಳಿದರು.

ಅವರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢ ವಿಭಾಗದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಗಣಿತ ಪರಿಕಲ್ಪನೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ವಿಭಿನ್ನ ಚಟುವಟಿಕೆ ಹಾಕಿಕೊಳ್ಳಲಾಗಿದೆ. ಗಣಿತ ಪರಿಕಲ್ಪನೆಯಲ್ಲಿ ನಕ್ಷೆಯ ವಿಧಾನ, ಕೋಷ್ಟಕಗಳು, ವರ್ಗ ಸಮೀಕರಣ, ವೃತ್ತಗಳು, ದೂರ ಸೂತ್ರದಿಂದ ಲೆಕ್ಕ ಬಿಡಿಸುವುದು, ಎಸ್.ಎನ್ ಸೂತ್ರ ಕಂಡು ಹಿಡಿಯುವುದು, ಮಧ್ಯ ಬಿಂದು ಸೂತ್ರ, ಸ್ಟಾರ್ ಎ.ಎನ್ ಸೂತ್ರ ಕಂಡು ಹಿಡಿಯುವುದು, ಅನುಪಾತ, ಬಹುಲಕ ಸೂತ್ರ, ನಕ್ಷಾ ವಿಭಾಗ, ವರ್ಜಿಸುವ ವಿಧಾನ, ತ್ರಿಕೋನ ಮಿತಿಯ ಅನುಪಾತಗಳು, ಥೆಲ್ಸ್ ಪ್ರಮೇಯ, ಸಂಖ್ಯಾ ಶಾಸ್ತ್ರ, ಅಭಾಗಲಬ್ಧ ಸಂಖ್ಯೆ, ವೃತ್ತದ ಪ್ರಮೇಯ, ನಿರ್ದೇಶಾಂಕ ರೇಖಾ ಗಣಿತದ ಸೂತ್ರ ಸೇರಿದಂತೆ ವಿವಿಧ ಸೂತ್ರ, ಸಮೀಕರಣಗಳನ್ನು ಮಕ್ಕಳು ರಂಗೋಲಿಯ ಮೂಲಕ ಬಿಡಿಸಿ ಗಣಿತ ವಿಷಯದಲ್ಲಿ ತಲ್ಲೀನರಾಗುವಂತೆ ಮಾಡಿರುವುದಾಗಿ ತಿಳಿಸಿದರು.

ಕ್ರಿಯಾತ್ಮಕ ಚಟುವಟಿಕೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿಯಿಂದ ಬಹುಮಾನ ವಿತರಿಸಿ ಗೌರವಿಸಲಾಯಿತು.

ಶಿಕ್ಷಕರಾದ ರಾಜೇಶ್ವರರೆಡ್ಡಿ, ಶ್ಯಾಮೀದಸಾಬ್‌ ಲಯನ್ದಾರ, ದೊಡ್ಡಬಸವನಗೌಡ ಪಾಟೀಲ್, ತಿಪ್ಪೆರುದ್ರಚಾರ್ಯ, ರಾಘವೇಂದ್ರ ಸೇರಿದಂತೆ ಇತರರಿದ್ದರು.