ಗುಳೆ ಬೇಡ, ಶೀಘ್ರದಲ್ಲಿ ನರೇಗಾ ಕೆಲಸ ಆರಂಭ-ಶಾಸಕ ಡಾ. ಲಮಾಣಿ

| Published : Nov 06 2023, 12:47 AM IST

ಗುಳೆ ಬೇಡ, ಶೀಘ್ರದಲ್ಲಿ ನರೇಗಾ ಕೆಲಸ ಆರಂಭ-ಶಾಸಕ ಡಾ. ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷ್ಮೇಶ್ವರಕ್ಕೆ ಸಮೀಪದ ಹರದಗಟ್ಟಿ ಗ್ರಾಮದಲ್ಲಿ ಬಡಕೂಲಿ ಕಾರ್ಮಿಕರು ಕೂಲಿ ಅರಸಿ ಬೇರೆಡೆ ಹೊರಟಿರುವ ಗ್ರಾಮಸ್ಥರು ಎನ್ನುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಭಾನುವಾರ ಗ್ರಾಮಕ್ಕೆ ಭೇಟಿ ಗ್ರಾಮಸ್ಥರೊಂದಿಗೆ ಈ ಕುರಿತು ಚರ್ಚೆ ನಡೆಸಿದರು.

ಹರದಗಟ್ಟಿ ಗ್ರಾಮಸ್ಥರ ಗುಳೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಶಾಸಕರ ಭೇಟಿಲಕ್ಷ್ಮೇಶ್ವರ: ಈ ವರ್ಷ ಬರಗಾಲ ಇರುವುದರಿಂದ ನರೇಗಾ ಯೋಜನೆ ಅಡಿಯಲ್ಲಿ 150 ದಿನಗಳ ಕೂಲಿ ಕೆಲಸ ನೀಡುವ ಕಾರ್ಯವನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ಸಮೀಪದ ಹರದಗಟ್ಟಿ ಗ್ರಾಮದಲ್ಲಿ ಬಡಕೂಲಿ ಕಾರ್ಮಿಕರು ಕೂಲಿ ಅರಸಿ ಬೇರೆಡೆ ಹೊರಟಿರುವ ಗ್ರಾಮಸ್ಥರು ಎನ್ನುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಭಾನುವಾರ ಗ್ರಾಮಕ್ಕೆ ಭೇಟಿ ಗ್ರಾಮಸ್ಥರೊಂದಿಗೆ ಈ ಕುರಿತು ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ಅವರು ಕಳೆದ 2-3 ವರ್ಷದಿಂದ ತಾಲೂಕಿನಲ್ಲಿ ಅತಿವೃಷ್ಟಿ ಮತ್ತು ಈ ವರ್ಷ ಸಂಭವಿಸಿದ ಅನಾವೃಷ್ಟಿಯಿಂದ ಬಡ ಕೂಲಿ ಕಾರ್ಮಿಕರು ಬೇರೆ ಬೇರೆ ಪಟ್ಟಣಗಳಿಗೆ ಹೋಗಿ ದುಡಿಯುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಪ್ರತಿವರ್ಷ ಈ ದಿನಗಳಲ್ಲಿ ತಾಲೂಕಿನ ಹಲವು ಗ್ರಾಮಗಳ ಕೂಲಿ ಕಾರ್ಮಿಕರು ಹೆಚ್ಚಿನ ಕೂಲಿ ಆಸೆಗಾಗಿ ಬೇರೆ ಪಟ್ಟಣಗಳಿಗೆ ಹೋಗಿ ಹೆಚ್ಚಿನ ದುಡಿಮೆ ಮಾಡಿಕೊಳ್ಳುವ ಕಾರ್ಯ ಹಿಂದಿನಿಂದ ನಡೆಯುತ್ತ ಬಂದಿದೆ. ಆದರೆ ಈಗ ಕೂಲಿ ಕಾರ್ಮಿಕರು ಗುಳೆ ಹೋಗುತ್ತಿದ್ದಾರೆ ಎನ್ನುವ ಅರ್ಥ ಬರುವಂತೆ ಮಾಡಿರುವುದು ಕಂಡು ಬರುತ್ತಿದೆ. ಆದರೆ ಇದು ಸರಿಯಲ್ಲ. ಕೂಲಿ ಕಾರ್ಮಿಕರು ಕಬ್ಬು ಕಡಿಯುವ ಕಾರ್ಯದಲ್ಲಿ ಹೆಚ್ಚಿನ ಕೂಲಿ ಸಿಗುವುದರಿಂದ ಹೆಚ್ಚಿನ ಕೂಲಿಗಾಗಿ ಹೋಗುತ್ತಿದ್ದಾರೆ. ಅದನ್ನು ತಡೆಯುವ ಸಲುವಾಗಿ ನರೇಗಾ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ 150 ದಿನಗಳ ಕೂಲಿ ಕೊಡುವ ಕಾರ್ಯ ಈಗ ಆರಂಭಿಸಲಾಗಿದೆ. ಗ್ರಾಮದಲ್ಲಿನ ಕೆರೆ ಹೂಳು ಎತ್ತುವುದು. ಬದು ನಿರ್ಮಾಣ, ಕೆರೆ ಕಟ್ಟೆ ನಿರ್ಮಾಣ, ಕುರಿ ಹಾಗೂ ಹಸು ದೊಡ್ಡಿ ನಿರ್ಮಾಣಕ್ಕೆ ನರೇಗಾ ಯೋಜನೆ ಅಡಿಯಲ್ಲಿ ಉದ್ಯೋಗ ನೀಡುವ ಕಾರ್ಯ ಮಾಡುವ ಕಾರ್ಯ ಆರಂಭಿಸಲಾಗಿದೆ ಆದ್ದರಿಂದ ಯಾರೂ ಗ್ರಾಮವನ್ನು ಬಿಟ್ಟು ಕೂಲಿ ಕಾರ್ಯಕ್ಕೆ ಹೋಗುವ ಕಾರ್ಯಕ್ಕೆ ಮುಂದಾಗಬಾರದು ಎಂದು ಹೇಳಿದರು. ತಹಸೀಲ್ದಾರ್‌ ಮಂಜುನಾಥ ಅಮಾಸಿ ಅವರು ಮಾತನಾಡಿ, ಕೂಲಿ ಕಾರ್ಮಿಕರಿಗೆ ವಿವಿಧ ಕಾಮಗಾರಿ ಮಾಡಿಕೊಳ್ಳಲು ಸರ್ಕಾರ ನರೇಗಾ ಯೋಜನೆ ಅಡಿಯಲ್ಲಿ ಅವಕಾಶ ನೀಡಿದೆ. ಆದ್ದರಿಂದ ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳಲು ಇದರಲ್ಲಿ ಅವಕಾಶವಿದ್ದು, ಕೂಲಿ ಕಾರ್ಮಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಈ ವೇಳೆ ತಾಪಂ ಇಒ ಕೃಷ್ಣಪ್ಪ ಧರ್ಮರ ಮಾತನಾಡಿ, ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಕೆಲಸ ಆರಂಭಿಸಲಾಗಿದೆ. ಈ ವರ್ಷದ ಭೀಕರ ಬರಗಾಲವು ಕೂಲಿ ಕಾರ್ಮಿಕರನ್ನು ಹಾಗೂ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಆದರೆ ಯಾರೂ ಧೈರ್ಯ ಕಳೆದುಕೊಳ್ಳುವ ಕಾರ್ಯಕ್ಕೆ ಮುಂದಾಗಬಾರದು ಎಂದು ಹೇಳಿದರು. ಗ್ರಾಪಂ ಸದಸ್ಯ ಗಣೇಶ ನಾಯಕ್ ಮಾತನಾಡಿ, ಗ್ರಾಮದಲ್ಲಿ ಹಲವು ಜನರು ದುಡಿಯಲು ಬೇರೆ ಬೇರೆ ಪಟ್ಟಣಗಳಿಗೆ ಪ್ರತಿ ವರ್ಷ ದುಡಿಯಲು ಹೋಗುತ್ತಾರೆ ಅದರಲ್ಲೇನೂ ವಿಶೇಷವಿಲ್ಲ, ದೊಡ್ಡ ಪಟ್ಟಣಗಳಲ್ಲಿ ಕೂಲಿ ಹೆಚ್ಚಾಗಿರುವುದರಿಂದ ಅಲ್ಲಿಗೆ ದುಡಿಯುವ ಕಾರ್ಯಕ್ಕೆ ಹೋಗಿ ತಮ್ಮ ವರ್ಷದ ಅನ್ನ ಸಂಪಾದನೆ ಹಾಗೂ ಇತರ ಮನೆತನದ ಖರ್ಚುಗಳನ್ನು ನಿಭಾಯಿಸಿಕೊಳ್ಳುವ ಕಾರ್ಯ ಮಾಡುತ್ತಿರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದು ಗುಳೆ ಎಂದು ಹೇಳುವುದು ಅಷ್ಟರ ಮಟ್ಟಿಗೆ ಸರಿಯಲ್ಲ ಎಂದು ಹೇಳಿದರು. ಈ ವೇಳೆ ಗ್ರಾಮದ ಪ್ರಮುಖರಾದ ಮಾನಪ್ಪ ನಾಯಕ, ಗೋವಿಂದಪ್ಪತಳವಾರ, ಶಂಕರ ಕಾರಬಾರಿ, ಫಕ್ಕೀರಪ್ಪ ಮಾಳಗಿಮನಿ, ಹನಂತಪ್ಪ ಲಮಾಣಿ, ತೇಜಪ್ಪ ಮಾಳಗಿಮನಿ, ಗಣೇಶ ಪೂಜಾರ, ಥಾವರೆಪ್ಪ ಲಮಾಣಿ, ಸೋಮು ಲಮಾಣಿ, ಟಾಕ್ರಪ್ಪ ಮಾಳಗಿಮನಿ, ಹಾಗೂ ಗ್ರಾಮಲೆಕ್ಕಾಧಿಕಾರಿ ವಿಭೂತಿ ಅವರು ಇದ್ದರು. ಪೊಟೋ-ಲಕ್ಷ್ಮೇಶ್ವರಕ್ಕೆ ಸಮೀಪದ ಹರದಗಟ್ಟಿ ಗ್ರಾಮದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಅವರು ಗ್ರಾಮಸ್ಥರೊಂದಿಗೆ ಕೂಲಿಗಾಗಿ ಬೇರೆಡೆಗೆ ಹೋಗುತ್ತಿರುವ ಕಾರ್ಮಿಕರ ಕುರಿತು ಚರ್ಚೆ ನಡೆಸಿ ಪರಿಹಾರ ಕಂಡು ಹಿಡಿಯುವ ಕಾರ್ಯಕ್ಕೆ ಮುಂದಾಗಿರುವುದು.