ರಕ್ತದಾನ ಮಾಡಿ ಜೀವ ಉಳಿಸಿ: ಡಾ. ಬಸವರಾಜ ತಳವಾರ

| Published : May 15 2025, 01:41 AM IST

ಸಾರಾಂಶ

ರಕ್ತದಾನದಿಂದ ಆರೋಗ್ಯದ ಮೇಲೆ ಷ್ಟರಿಣಾಮ ಉಂಟಾಗುತ್ತದೆ ಎಂಬುದು ತಪ್ಪು ಕಲ್ಪನೆ ಸಮಾಜದಲ್ಲಿ ಬೇರೂರಿದೆ. ಇದನ್ನು ತೊಲಗಿಸಬೇಕಿದೆ. ಆರೋಗ್ಯವಂತರು ರಕ್ತದಾನಕ್ಕೆ ಮುಂದಾಗಿ ಮತ್ತೊಬ್ಬರಿಗೆ ಮಾದರಿಯಾಬೇಕು.

ಹಿರೇಕೆರೂರು: ಆರೋಗ್ಯವಂತ ಯುವ ಸಮುದಾಯವು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವ ಉಳಿಸಲು ಮುಂದಾಗಬೇಕಿದೆ ಎಂದು ಹಾವೇರಿ ಜಿಲ್ಲಾ ರಕ್ತನಿಧಿ ಭಂಡಾರದ ಮುಖ್ಯಸ್ಥ ಡಾ. ಬಸವರಾಜ ತಳವಾರ ತಿಳಿಸಿದರು.ಪಟ್ಟಣದ ಬಿ.ಆರ್. ತಂಬಾಕದ ಪ್ರಥಮದರ್ಜೆ ಮಹಾವಿದ್ಯಾಲಯ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯ ಹಾಗೂ ತರಳಬಾಳು ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ಹಾವೇರಿ ವಿಶ್ವವಿದ್ಯಾಲಯ ನಾಯಕತ್ವ ತರಬೇತಿ ಶಿಬಿರದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ರಕ್ತದಾನದಿಂದ ಆರೋಗ್ಯದ ಮೇಲೆ ಷ್ಟರಿಣಾಮ ಉಂಟಾಗುತ್ತದೆ ಎಂಬುದು ತಪ್ಪು ಕಲ್ಪನೆ ಸಮಾಜದಲ್ಲಿ ಬೇರೂರಿದೆ. ಇದನ್ನು ತೊಲಗಿಸಬೇಕಿದೆ. ಆರೋಗ್ಯವಂತರು ರಕ್ತದಾನಕ್ಕೆ ಮುಂದಾಗಿ ಮತ್ತೊಬ್ಬರಿಗೆ ಮಾದರಿಯಾಬೇಕು ಎಂದರು.

ಎಸ್.ಎಸ್. ಪಾಟೀಲ ಮಾತನಾಡಿ, ರಕ್ತದಾನ ಶಿಬಿರ ಕುರಿತು ಭಾರತೀಯ ಸೈನಿಕರು ತಮ್ಮ ರಕ್ತ ಕೊಟ್ಟು ದೇಶ ರಕ್ಷಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ದೇಶಕ್ಕಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಡುತ್ತಿದ್ದಾರೆ. ಅವರು ನಮಗೆ ಆದರ್ಶಪ್ರಾಯ ಎಂದರು.

ಸಿಇಎಸ್ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ ಮಾತನಾಡಿ, ರಕ್ತದಾನದಿಂದ ರಕ್ತದ ಅವಶ್ಯಕತೆ ಇರುವವರಿಗೆ ಮಾತ್ರ ಲಾಭವಾಗುವುದಿಲ್ಲ. ರಕ್ತದಾನಿಗಳಿಗೂ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳಬಹುದು. ರಕ್ತದಾನ ಮಾಡಿದವರಲ್ಲಿ ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತವೆ. ಜತೆಗೆ ಹೃದಯಾಘಾತದ ಸಂಭವ, ರಕ್ತದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ ಎಂದರು.

ಶಿಬಿರದಲ್ಲಿ 60 ವಿದ್ಯಾರ್ಥಿಗಳು ರಕ್ತದಾನ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಗಳಾದ ಎಸ್. ವೀರಭದ್ರಯ್ಯ ಶ್ರೀನಿವಾಸ, ಬಿ.ಪಿ. ಹಳ್ಳೇರ, ಹರೀಶ ಡಿ., ನಾಗರಾಜ ಎಚ್.ಪಿ., ಶಿವಯೋಗಿ ಹಾವೇರಿ, ಬಸನಗೌಡ ಪಾಟೀಲ, ಆನಂದ ಇಂದೂರ, ಹನುಮಂತಪ್ಪ ಎಸ್.ಆರ್.ಎಫ್. ದೊಡ್ಮನಿ, ಲಿಂಗರಾಜ ಹಲವಾಲ ಇತರರು ಇದ್ದರು.ಕರ್ತವ್ಯಕ್ಕೆ ತೆರಳಿದ ಯೋಧನಿಗೆ ಬೀಳ್ಕೊಡುಗೆ

ಸವಣೂರು: ದೇಶದಲ್ಲಿ ನಾವು ಸುಖಕರವಾದ ಜೀವನ ಸಾಗಿಸುತ್ತಿದ್ದೇವೆ. ಇದಕ್ಕೆ ಕಾರಣ ಗಡಿ ಕಾಯುವ ಯೋಧರು. ಅವರು ತಮ್ಮ ಜೀವನ ಮುಡುಪಾಗಿಟ್ಟು ನಿತ್ಯ ನಮ್ಮನ್ನು ಕಾಪಾಡುತ್ತಿದ್ದಾರೆ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಂಕರಗೌಡ ಹಿರೇಗೌಡ್ರ ತಿಳಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಗಡಿ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಸಂತೋಷ ಈರಪ್ಪ ಡೊಳೇಶ್ವರ ಅವರನ್ನು ಸನ್ಮಾನಿಸಿ, ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ರಜೆಗೆ ಆಗಮಿಸಿದ್ದ ಯೋಧರನ್ನು ಯುದ್ಧದ ಹಿನ್ನೆಲೆಯಲ್ಲಿ ಕೂಡಲೇ ಸೇವೆಗೆ ವಾಪಸ್ಸಾಗಲು ಸೂಚಿಸಿದ್ದು, ಹೀಗಾಗಿ ರಜೆಯನ್ನು ಮೊಟಕುಗೊಳಿಸಿ ಸೇವೆಗೆ ಸೈನಿಕರು ತೆರಳುತ್ತಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸುವುದು ಗೌರವಯುತ ಮತ್ತು ಪವಿತ್ರ ಕೆಲಸ ಎಂದರು.ಯೋಧ ಸಂತೋಷ ಈರಪ್ಪ ಡೊಳೇಶ್ವರ ಸನ್ಮಾನ ಸ್ವೀಕರಿಸಿ ಮಾತನಾಡಿ, ಸೇನೆಗೆ ಸೇರಿದ ನಂತರ ರಾಷ್ಟ್ರದ ಸರ್ವರೂ ಕುಟುಂಬಸ್ಥರು ಎಂಬ ಭಾವನೆ ಮೂಡಿದೆ. ಆದ್ದರಿಂದ ಕರ್ತವ್ಯ ಮುಖ್ಯವಾಗಿದೆ ಎಂದರು.ಶುಶ್ರೂಷಾಧಿಕಾರಿ ವಿ.ಆರ್. ಇನಾಮತಿ, ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶುಶ್ರೂಷಾಧಿಕಾರಿಗಳಾದ ಸರೋಜಾ ಲಮಾಣಿ, ಆಶಾಲತಾ ನರೇಂದ್ರ, ಪ್ರಮುಖರಾದ ಚಂದ್ರಣ್ಣ ಮೈಲಮ್ಮನವರ, ಕೃಷ್ಣ ಕಲಾಲ, ಶ್ರೀಕಾಂತ ಲಕ್ಷ್ಮೇಶ್ವರ, ಪ್ರವೀಣ ಬಾಲೆಹೊಸೂರ, ಶ್ರೀನಿವಾಸ ಗಿತ್ತೆ, ಈರಯ್ಯ ಹಿರೇಮಠ, ಮಹಾಂತೇಶ ಹೊಳೆಮ್ಮನವರ, ಬಸವರಾಜ ಹುಡೇದ, ನಾಗನಗೌಡ ಪಾಟೀಲ, ಗುರುರಾಜ ಅಗಸರ, ಪ್ರವೀಣ ಪಾಟೀಲ, ಮಂಜುನಾಥ ಸವಣೂರ ಇತರರು ಪಾಲ್ಗೊಂಡಿದ್ದರು.