ಸಾರಾಂಶ
ದಾನಗಳಲ್ಲೆ ಶ್ರೇಷ್ಠ ಹಾಗೂ ಅತ್ಯಂತ ಪವಿತ್ರ ದಾನ ರಕ್ತದಾನವಾಗಿದೆ. ಈಹಿ ನ್ನೆಲೆ ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದಾಗುವ ಮೂಕ ಜೀವ ಉಳಿಸುವ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಜಯಲಕ್ಷ್ಮಿ ಹೇಳಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ದಾನಗಳಲ್ಲೆ ಶ್ರೇಷ್ಠ ಹಾಗೂ ಅತ್ಯಂತ ಪವಿತ್ರ ದಾನ ರಕ್ತದಾನವಾಗಿದೆ. ಈಹಿ ನ್ನೆಲೆ ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದಾಗುವ ಮೂಕ ಜೀವ ಉಳಿಸುವ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಜಯಲಕ್ಷ್ಮಿ ಹೇಳಿದರು.ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಗುರುವಾರ ಯುವ ರೆಡ್ ಕ್ರಾಸ್ ಸಮಿತಿ ಹಾಗೂ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಆಯೋಜಿಸಿದ್ದ ರಕ್ತದಾನ ಮತ್ತು ರಕ್ತದ ಗುಂಪು ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ. ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಸಮಾಜಮುಖಿ ಕೆಲಸಕ್ಕೆ ತೊಡಗಿಕೊಳ್ಳಬೇಕು. ಬಡವರ ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವ ಜೊತೆ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ವಿದ್ಯಾರ್ಥಿಗಳಿಗೆ ಓದುವುದು ಎಷ್ಟು ಮುಖ್ಯವೋ ಅಷ್ಟೇ ರೋಗಿಗಳಿಗೆ ಸಹಾಯ ಮಾಡುವುದು ಸಹಾ ಅತೀ ಮುಖ್ಯ. ರಕ್ತದಾನ ಮಾಡಿದರೆ ನಿಮ್ಮ ರಕ್ತವೂ ಶುದ್ಧಿಯಾಗುವುದರ ಜೊತೆಗೆ ಹೊಸ ರಕ್ತ ನಿಮ್ಮ ದೇಹಕ್ಕೆ ಸೇರುವುದರ ಮೂಲಕ ಆರೋಗ್ಯಕರ ಜೀವಿಸಬಹುದು. ಅಗತ್ಯವಿರುವ ಇತರರಿಗೆ ರಕ್ತದಾನದಿಂದ ಸಹಾಯವಾಗುತ್ತೆ, ಒಂದು ದಾನದಿಂದ ಮೂರು ಜನರ ಜೀವ ಉಳಿಸಬಹುದು ಮತ್ತು ಇದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುತ್ತದೆ. ರಕ್ತದಾನವು ಇನ್ನೊಬ್ಬರ ಜೀವವನ್ನು ಉಳಿಸುವ ಒಂದು ಅತ್ಯಮೂಲ್ಯ ಕಾರ್ಯವಾಗಿದೆ. ನಿಯಮಿತವಾಗಿ ರಕ್ತದಾನ ಮಾಡುವುದರಿಂದದಾನಿಗಳ ಆರೋಗ್ಯಕ್ಕೂ ಲಾಭಗಳಿವೆ ಎಂದರು.
ಇದೆ ವೇಳೆ 30 ಮಂದಿಗೂ ಅಧಿಕ ವಿದ್ಯಾರ್ಥಿಗಳು ಸ್ವಂಯ ಪ್ರೇರಿತರಾಗಿ ರಕ್ತದಾನದಲ್ಲಿ ಪಾಲ್ಗೊಂಡರು 35 ವಿದ್ಯಾರ್ಥಿಗಳುರಕ್ತದ ಗುಂಪು ತಪಾಸಣೆಯಲ್ಲಿ ಪಾಲ್ಗೊಂಡರು.
ವೈದ್ಯರಾದ ಡಾ.ನಿಹಾರಿಕ, ಡಾ.ನಿಶ್ಚಿತ್, ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಯುವ ರೆಡ್ ಕ್ರಾಸ್ ಸಮಿತಿಯ ಸಂಚಾಲಕ ಡಾ. ಜಯಶಂಕರ್, ಐಕ್ಯೂ ಎಸಿ ಸಂಚಾಲಕ ಡಾ. ಹೇಮಕುಮಾರ್ . ಯುವ ಸಬಲೀಕರಣ ಸಮಿತಿಯ ಸಂಚಾಲಕ ಗಂಗಾಧರ , ಕಚೇರಿ ಅಧಿಕ್ಷಕ ಶಿವಕುಮಾರ್ ಇನ್ನಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))