ನೇತ್ರದಾನ ಮಾಡಿ ಇನ್ನೊಬ್ಬರ ಬಾಳಿಗೆ ಬೆಳಕಾಗಿ

| Published : Jul 25 2024, 01:17 AM IST

ಸಾರಾಂಶ

ಮಣ್ಣಿನಲ್ಲಿ ಮಣ್ಣಾಗುವ ಮುನ್ನ ನೇತ್ರಗಳನ್ನು ದಾನ ಮಾಡಿ ಇನ್ನೊಬ್ಬರ ಬಾಳಿನಲ್ಲಿ ಬೆಳಕಾಗಬೇಕು. ಅದೇ ರೀತಿ ರಕ್ತದಾನ ಮಾಡಿ ಇನ್ನೊಬ್ಬರಿಗೆ ಜೀವದಾನ ಮಾಡಿ ದೇವರು ನೀಡಿದ ಜನ್ಮ ಸಾರ್ಥಕ ಪಡೆಸಿಕೊಳ್ಳಬೇಕು

ಗದಗ: ನಗರದ ಹಳೆ ಸರಾಫ್ ಬಜಾರದ ಶ್ರೀಜಗದಂಬಾ ದೇವಸ್ಥಾನದಲ್ಲಿರುವ ಸಹಸ್ರಾರ್ಜುನ ಸಮುದಾಯ ಭವನದ ಲಕ್ಷ್ಮಣಸಾ ಸಭಾ ಗೃಹದಲ್ಲಿ ಎಸ್‌.ಎಸ್‌.ಕೆ ಸಮಾಜ ಮಹಿಳಾ ಮಂಡಳ, ಪಂಚ ಟ್ರಸ್ಟ್ ಕಮೀಟಿ, ತರುಣ ಸಂಘ, ಜಿಮ್ಸ್ ಆಸ್ಪತ್ರೆ ಹಾಗೂ ಜಿಲ್ಲಾ ಅಂಧತ್ವ ನಿವಾರಣೆ ಸಂಸ್ಥೆಯ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಉಚಿತವಾಗಿ ಕನ್ನಡಕ ವಿತರಿಸಲಾಯಿತು.

ಈ ಶಿಬಿರದಲ್ಲಿ 250ಕ್ಕೂ ಹೆಚ್ಚು ರೋಗಿಗಳಿಗೆ ನೇತ್ರ ತಪಾಸಣೆ ಮಾಡಲಾಯಿತು. 21 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. 102 ಜನರಿಗೆ ಕನ್ನಡಕ ವಿತರಿಸಲಾಯಿತು. ಇನ್ನೂಳಿದವರಿಗೆ ಐಸಿಟಿಸಿ, ಎಚ್.ಬಿ.ಸಿ.ಜಿ, ಬಿ.ಪಿ ಹಾಗೂ ಸಕ್ಕರೆ ಕಾಯಿಲೆ ಸೇರಿದಂತೆ ಇತರೆ ಪರೀಕ್ಷೆ ಮಾಡಲಾಯಿತು.

ಈ ವೇಳೆ ಎಸ್‌.ಎಸ್‌.ಕೆ ಸಮಾಜದ ಪಂಚ ಟ್ರಸ್ಟ್ ಕಮೀಟಿ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ ಮಾತನಾಡಿ, ಮಣ್ಣಿನಲ್ಲಿ ಮಣ್ಣಾಗುವ ಮುನ್ನ ನೇತ್ರಗಳನ್ನು ದಾನ ಮಾಡಿ ಇನ್ನೊಬ್ಬರ ಬಾಳಿನಲ್ಲಿ ಬೆಳಕಾಗಬೇಕು. ಅದೇ ರೀತಿ ರಕ್ತದಾನ ಮಾಡಿ ಇನ್ನೊಬ್ಬರಿಗೆ ಜೀವದಾನ ಮಾಡಿ ದೇವರು ನೀಡಿದ ಜನ್ಮ ಸಾರ್ಥಕ ಪಡೆಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮಂಡಳದ ಅಧ್ಯಕ್ಷೆ ಉಮಾ ಬೇವಿನಕಟ್ಟಿ ಮಾತನಾಡಿ, ಕಣ್ಣುಗಳಿಲ್ಲದೆ ಈ ಜಗತ್ತನ್ನು ನೋಡಲು ಸಾದ್ಯವಿಲ್ಲ, ಅಂತಹ ಜಗತ್ತನ್ನು ನೋಡಲು ನಾವುಗಳು ಇನ್ನೊಬ್ಬರಿಗೆ ಕಣ್ಣಾಗಬೇಕು ಮತ್ತು ಜಗತ್ತಿನಲ್ಲಿ ಕೃತಕವಾಗಿ ರಕ್ತ ತಯಾರು ಮಾಡಲು ಸಾಧ್ಯವಿಲ್ಲ, ಆದ್ದರಿಂದ ನಾವುಗಳು ಆರೋಗ್ಯವಂತರಾಗಲು ಮತ್ತು ಇನ್ನೊಬ್ಬರಿಗೆ ಜೀವದಾನ ಮಾಡಲು ರಕ್ತದಾನ ಮಾಡಬೇಕು ಎಂದು ಹೇಳಿದರು.

ಮಹಿಳಾ ಮಂಡಳದ ಉಪಾಧ್ಯಕ್ಷೆ ಸ್ನೇಹಲತಾ ಕಬಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ.ವರುಣ, ಡಾ. ಅಟಲ್, ನೇತ್ರ ಸಹಾಯಕ ಅಧಿಕಾರಿ ಮಂಜುನಾಥ ದೊಡ್ಡಮನಿ ಹಾಗೂ ಸಿಬ್ಬಂದಿಗಳೊಂದಿಗೆ ನೇತ್ರ ತಪಾಸಣೆ ನಡೆಸಲಾಯಿತು.

ಪಂಚಟ್ರಸ್ಟ್ ಕಮೀಟಿ ಸದಸ್ಯರಾದ ಪರಶುರಾಮಸಾ ಬದಿ, ನಾಗೇಶ ಖೋಡೆ, ರೇಖಾ ಬೇವಿನಕಟ್ಟಿ, ಗೀತಾ ಹಬೀಬ, ಕಸ್ತೂರಿಬಾಯಿ ಬಾಂಡಗೆ, ಸುನಂದಾ ಹಬೀಬ, ಲಲಿತಾಬಾಯಿ ಬಾಕಳೆ, ಸರೋಜಾಬಾಯಿ ಟಿಕಣದಾರ, ರೇಣುಕಾಬಾಯಿ ಕಲಬುರ್ಗಿ, ರತ್ನಾಬಾಯಿ ಹಬೀಬ, ವಂದನಾ ಶಿದ್ಲಿಂಗ, ಶಾಂತಾಬಾಯಿ ಬಾಕಳೆ, ಹೇಮಾ ಬೇವಿನಕಟ್ಟಿ ಸೇರಿದಂತೆ ಮುಂತಾದವರು ಇದ್ದರು. ಸುಶೀಲಾಬಾಯಿ ಶಿದ್ಲಿಂಗ ಪ್ರಾರ್ಥಿಸಿದರು. ನಾಗೇಶ ಖೋಡೆ ಸ್ವಾಗತಿಸಿದರು. ಶ್ರೀಕಾಂತ ಬಾಕಳೆ ನಿರೂಪಿಸಿದರು. ಆರ್.ಟಿ. ಕಬಾಡಿ ವಂದಿಸಿದರು.