ನೇಗಿನಹಾಳದ ಕುಂಕೂರ ಕುಟುಂಬದಿಂದ ಉಳವಿಗೆ ದೇಣಿಗೆ

| Published : Jun 10 2024, 12:52 AM IST

ಸಾರಾಂಶ

ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಲಕ್ಷದ ಮೇಲೆ ತೋಂಬತ್ತಾರು ಸಾವಿರ ಶರಣರನ್ನು ಒಗ್ಗೂಡಿಸಿಕೊಂಡು ಲಿಂಗಾಯತ ಧರ್ಮ ಸ್ಥಾಪಿಸಿದರು. ಅವರ ಸೋದರ ಅಳಿಯ ಚನ್ನಬಸವಣ್ಣನವರ ಸನ್ನಿಧಾನದ ಉಳವಿಯಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವುದು ನಮ್ಮೆಲ್ಲರಿಗೂ ಸಂತಸದ ಸಂಗತಿಯಾಗಿದೆ. ನಮ್ಮೂರಿನ ಹೆಸರು ಉಳವಿಯ ಚನ್ನಬಸವೇಶ್ವರರ ಸನ್ನಿಧಿಯಲ್ಲಿ ಐತಿಹಾಸಿಕವಾಗಿ ಉಳಿಯಿತು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಮುಖಂಡರಾದ ರೋಹಿಣಿ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಲಕ್ಷದ ಮೇಲೆ ತೋಂಬತ್ತಾರು ಸಾವಿರ ಶರಣರನ್ನು ಒಗ್ಗೂಡಿಸಿಕೊಂಡು ಲಿಂಗಾಯತ ಧರ್ಮ ಸ್ಥಾಪಿಸಿದರು. ಅವರ ಸೋದರ ಅಳಿಯ ಚನ್ನಬಸವಣ್ಣನವರ ಸನ್ನಿಧಾನದ ಉಳವಿಯಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವುದು ನಮ್ಮೆಲ್ಲರಿಗೂ ಸಂತಸದ ಸಂಗತಿಯಾಗಿದೆ. ನಮ್ಮೂರಿನ ಹೆಸರು ಉಳವಿಯ ಚನ್ನಬಸವೇಶ್ವರರ ಸನ್ನಿಧಿಯಲ್ಲಿ ಐತಿಹಾಸಿಕವಾಗಿ ಉಳಿಯಿತು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಮುಖಂಡರಾದ ರೋಹಿಣಿ ಪಾಟೀಲ ಹೇಳಿದರು.ಸಮೀಪದ ನೇಗಿನಹಾಳ ಗ್ರಾಮದ ನಿವೃತ್ತ ಶಿಕ್ಷಕ ರುದ್ರಪ್ಪ ಮಲ್ಲಪ್ಪ ಕುಂಕೂರ ಹಾಗೂ ಕುಟುಂಬದವರು ಉಳವಿಯಲ್ಲಿ ಪ್ರತಿಷ್ಠಾಪಿಸಲು ನೀಡಿದ ವಿಶ್ವಗುರು ಬಸವಣ್ಣನವರ ಮೂರ್ತಿ ಹಾಗೂ ಬಸವ ಜಯಂತಿ ಅಂದು ತೊಟ್ಟಿಲಿನಲ್ಲಿ ಹಾಕಲು ಬಾಲ ಬಸವಣ್ಣನವರ ಬೆಳ್ಳಿಯ ಮೂರ್ತಿಯನ್ನು ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ದಾನಿಗಳು ಇತರರಿಗೆ ಪ್ರೇರಣೆಯಾಗಿದ್ದಾರೆ ಎಂದರು.ರುದ್ರಪ್ಪ ಕುಂಕೂರ ಅವರಿಗೆ ಗೌರವ ಸತ್ಕಾರ ನೀಡಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷೆ ಮಹಾದೇವಿ ಕೋಟಗಿ, ದೀಪಾ ಮರಕುಂಬಿ, ಶಿವಾನಂದ ಕುಂಕೂರ, ಸಿದ್ಧಾರೂಡ ಕುಂಕೂರ, ಪ್ರಸಾದ ಕುಂಕೂರ, ಬಸವರಾಜ ಕುಂಕೂರ, ಈರಣ್ಣ ಉಳವಿ, ಮಂಜುನಾಥ ಹಾರುಗೊಪ್ಪ, ಮಹಾಂತೇಶ ಮರಿತಮ್ಮನವರ, ಶಿವಾನಂದ ಮೆಟ್ಯಾಲ, ಅಜೀತ ಜೈನರ, ಸಂತೋಷ ಕಾಜಗಾರ, ಶ್ರೀಶೈಲ ತೋರಣಗಟ್ಟಿ, ನಾಗಪ್ಪ ತುರಮರಿ, ನಾಗರಾಜ ಕುಂಕೂರ, ಮಹಾದೇವ ಮುದ್ದೇಣ್ಣವರ, ಬಸವರಾಜ ಹಡಗಿನಹಾಳ ಹಾಗೂ ಭಜನಾ ಮಂಡಳಿ ಇದ್ದರು.