ಸಾರಾಂಶ
ಗ್ರಾಮಸ್ಥರಿಂದ ಸಂಗ್ರಹಗೊಂಡ ದವಸ, ಧಾನ್ಯ ಹಾಗೂ ಕಾಣಿಕೆಯನ್ನು ಗವಿಮಠಕ್ಕೆ ನೀಡಲಾಗಿದೆ.
ಕನಕಗಿರಿ: ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ತಾಲೂಕಿನ ಹುಡೇಜಾಲಿ ಗ್ರಾಮಸ್ಥರು ೨೧೦೦ ರೊಟ್ಟಿ ಹಾಗೂ ೧೯ ಚೀಲ ಧಾನ್ಯವನ್ನು ಮೆರವಣಿಗೆ ಮಾಡುವ ಮೂಲಕ ಶ್ರೀಮಠಕ್ಕೆ ನೀಡಲಾಯಿತು.ಗ್ರಾಮದ ಮುಖಂಡ ವಿರೂಪಾಕ್ಷಯ್ಯಶಾಸ್ತ್ರೀ ಮಾತನಾಡಿ, ಪ್ರತಿವರ್ಷವೂ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಆಗಮಿಸುವ ಭಕ್ತರ ದಾಸೋಹಕ್ಕೆ ಗ್ರಾಮದ ಮನೆ ಮನೆಗೆ ತೆರಳಿ ದವಸ, ಧಾನ್ಯ, ರೊಟ್ಟಿ ಹಾಗೂ ಕಾಣಿಕೆ ಸಮರ್ಪಿಸಿದ್ದಾರೆ. ಹೀಗೆ ಗ್ರಾಮಸ್ಥರಿಂದ ಸಂಗ್ರಹಗೊಂಡ ದವಸ, ಧಾನ್ಯ ಹಾಗೂ ಕಾಣಿಕೆಯನ್ನು ಗವಿಮಠಕ್ಕೆ ನೀಡಲಾಗಿದೆ ಎಂದರು.ಹನುಮಂತಪ್ಪ ಹುಳ್ಳಿ, ಮರಿಸ್ವಾಮಿ ಹಿರೇಮಠ, ಬಸವರಾಜ ಮಾದಿನಾಳ, ಹನುಮಂತಪ್ಪ ವಾಲೇಕಾರ, ದುರುಗಪ್ಪ ಮಡಿವಾಳ, ವಿರೂಪಣ್ಣ ವಾಲೇಕಾರ, ಕನಕಪ್ಪ ಮಮ್ಮಳಿ, ಶೇಖರಪ್ಪ ಚೌಡ್ಕಿ, ಈಶ್ವರಯ್ಯ ಕೆ.ಮಠ, ಮುತ್ತಣ್ಣ ನಿಂಗಲಬಂಡಿ, ದುರುಗಪ್ಪ ಡೊಳ್ಳಿನ, ಬಸಪ್ಪ ಇಂದರಗಿ, ಬಸವರಾಜ ಡೊಳ್ಳಿನ, ಸಣ್ಣ ಬಸವರಾಜ ಇತರರು ಇದ್ದರು.