ಸಾರಾಂಶ
ಬಾಗಲಕೋಟೆ: ನಗರದ ಎಂ.ಆರ್.ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಸುವಾಚ ಜ್ಞಾನದೀಕ್ಷ ಹಾಗೂ ದೇಹದಾನ ಸ್ವೀಕಾರ ಸಮಾರಂಭ ನಡೆಯಿತು. ಡಾ.ಸಂಜೀವ್ ಗೌರ ಮಾತನಾಡಿ, ಜನಮಾನಸದಲ್ಲಿ ದಾನಗಳಿಗೆ ಪ್ರಸಿದ್ಧಿ ಪಡೆದ ಭಾರತದಲ್ಲಿ ದೇಹದಾನವು ಜೀವದಾನವಾಗಿ ಮಾರ್ಪಟ್ಟಿದೆ ಎಂದರು. ಡಾ.ಮಹಾಂತೇಶ ರಾಮಣ್ಣವರ, ಸಂಸ್ಥೆಯ ಅಧ್ಯಕ್ಷೆ ಮಾಧುರಿ ಮುಧೋಳ ಇತರರು ಇದ್ದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜನಮಾನಸದಲ್ಲಿ ದಾನಗಳಿಗೆ ಪ್ರಸಿದ್ಧಿ ಪಡೆದ ಭಾರತದಲ್ಲಿ ದೇಹದಾನವು ಜೀವದಾನವಾಗಿ ಮಾರ್ಪಟ್ಟಿದೆ ಎಂದು ಡಾ.ಸಂಜೀವ್ ಗೌರ ತಿಳಿಸಿದರು.ನಗರದ ಎಂ.ಆರ್.ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಸುವಾಚ ಜ್ಞಾನದೀಕ್ಷ ಹಾಗೂ ದೇಹದಾನ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶ್ರೀಮಂತ ಸಂಸ್ಕೃತಿ ಹೊಂದಿದ ಭಾರತದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಬೇಡಿಕೆ ಹೆಚ್ಚುತ್ತಿರುವುದು ಖುಷಿಯ ವಿಚಾರ ಎಂದರು.
ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆದಿರುವ ಬೆಳಗಾವಿ ಕೆಎಲ್ಇ ಆಸ್ಪತ್ರೆಯ ವೈದ್ಯರಾಗಿರುವ ಡಾ.ಮಹಾಂತೇಶ ರಾಮಣ್ಣವರ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲು ಸ್ವತಃ ನನ್ನ ತಂದೆ ಮರಣ ಹೊಂದಿದ ನಂತರ ಅವರ ದೇಹವನ್ನೇ ಪ್ರಾಯೋಗಿಕ ಕಾರ್ಯಕ್ಕೆ ನೀಡಿದ್ದು ನನಗೆ ಹೆಮ್ಮೆ ಅನಿಸುತ್ತಿದೆ ಎಂದರು.ಸಂಸ್ಥೆಯ ಅಧ್ಯಕ್ಷೆ ಮಾಧುರಿ ಮುಧೋಳ ಮಾತನಾಡಿ, ಸಂಸ್ಥೆಯಲ್ಲಿ ಕಲಿಯುತ್ತಿರುವ ವೈದ್ಯ ವಿದ್ಯಾರ್ಥಿಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲಾಗುವುದು. ಜೊತೆಗೆ ದೇಹದಾನದಂತಹ ಕಾರ್ಯಗಳು ನಮ್ಮ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.
ಕಾಲೇಜಿನ ಡೀನ್ / ಆಡಳಿತ ಅಧಿಕಾರಿ ಡಾ.ಶಿವಕುಮಾರ ಗಂಗಾಲ, ಪ್ರಾಂಶುಪಾಲರಾದ ಡಾ.ಪ್ರಲ್ಹಾದ್ ಗಂಗಾವತಿ, ಡಾ.ವಿಜಯಕುಮಾರ್ ಚವಡಿ, ಡಾ.ಈಶ್ವರ ಪಾಟೀಲ, ಡಾ. ದೀಪಾ ಗಂಗಾಲ, ಡಾ.ರೇಖಾ ಸಕ್ಕರಿ, ಡಾ. ರಜನಿ ದಡೆದ, ಡಾ.ವೀಣಾ ಕುಲಕರ್ಣಿ, ಡಾ.ಅತಿರಾ ಸೋಮನ್, ಡಾ.ನೇಹಾ, ಡಾ.ಶಶಿಕಲಾ ಹಾಗೂ ಸ್ವರ್ಣಮಂದಾರ ಇತರರು ಇದ್ದರು. ವಿದ್ಯಾರ್ಥಿನಿಯರಾದ ಹರ್ಷದಾ ಸ್ವಾಗತಿಸಿದಳು. ಸಿದ್ಧಿ ಪರಿಚಯಿಸಿದಳು. ಐಶ್ವರ್ಯ ನಿರೂಪಿಸಿದಳು. ಭಾವನಾ ವಂದಿಸಿದಳು.;Resize=(128,128))
;Resize=(128,128))
;Resize=(128,128))
;Resize=(128,128))